ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಕಾರ್ಕಳ ತಾಲೂಕು ಮಟ್ಟದ ಮಕ್ಕಳ ಪೋಟೋ ಸ್ಪರ್ಧೆ

ನವೆಂಬರ್ 2 ರೊಳಗೆ 0-7 ವರ್ಷದ ಕಾರ್ಕಳ ತಾಲೂಕಿನ ಮಕ್ಕಳ ಪೋಟೋವನ್ನು 9742517965 ವಾಟ್ಸಪ್ ಸಂಖ್ಯೆಯ ಮೂಲಕ ಕಳುಹಿಸುವ ಅವಕಾಶ.

ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ಕಾರ್ಕಳ ತಾಲೂಕು ಮಟ್ಟದ ಮಕ್ಕಳ ಪೋಟೋ ಸ್ಪರ್ಧೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಫೇಸ್ಬುಕ್ ಪೇಜ್ನಲ್ಲಿ ನಡೆಯಲಿದೆ.

ಕರಾವಳಿ ಕರ್ನಾಟಕ ವರದಿ
ಕಾರ್ಕಳ: ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ವಿ5 ಟೆಕ್ನೋಲಾಜಿಸ್ ಪ್ರಾಯೋಜಕತ್ವದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಕಾರ್ಕಳ ತಾಲೂಕು ಮಟ್ಟದ ಮಕ್ಕಳ ಪೋಟೋ ಸ್ಪರ್ಧೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಫೇಸ್ಬುಕ್ ಪೇಜ್ನಲ್ಲಿ ನಡೆಯಲಿದೆ.

ನವೆಂಬರ್ 2 ರೊಳಗೆ 0-7 ವರ್ಷದ ಕಾರ್ಕಳ ತಾಲೂಕಿನ ಮಕ್ಕಳ ಪೋಟೋವನ್ನು 9742517965 ವಾಟ್ಸಪ್ ಸಂಖ್ಯೆಯ ಮೂಲಕ ಕಳುಹಿಸುವ ಅವಕಾಶವಿದೆ. ನವೆಂಬರ್ 12ರಂದು ರಾತ್ರಿ 7ರವರೆಗೆ ಮಾತ್ರ ಪೋಟೋಗಳಿಗೆ ಲೈಕ್ ಮಾಡುವ ಅವಕಾಶವಿದ್ದು, ಅತಿ ಹೆಚ್ಚು ಲೈಕ್ ಪಡೆದ 3 ಪೋಟೋಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ, ಪ್ರಶಸ್ತಿ ಪತ್ರ ಮತ್ತು ತೀರ್ಪುಗಾರರ ಮೆಚ್ಚುಗೆಯ 5 ಪೋಟೋಗಳಿಗೆ ವಿಶೇಷ ಬಹುಮಾನ ನೀಡಿ ಗೌರವಿಸಲಾಗುವುದು.

ಸಂಘಟಕರ ತೀರ್ಮಾನವೇ ಅಂತಿಮ ಎಂದು ಸಂಘದ ಕಾರ್ಯದರ್ಶಿ ಕಾರ್ಯಕ್ರಮದ ನಿರ್ದೇಶಕ ಅಬ್ಬನಡ್ಕ ಹರಿಪ್ರಸಾದ್ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.