ಕೋಟ: ‘ನೀಟ್’ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿ ಅಭಿಷೇಕ್ ಭಟ್‌ಗೆ ಸನ್ಮಾನ

ಅಭಿಷೇಕ್ ಭಟ್ ಜಿ ಕೆ ತನ್ನ ಸಾಧನೆಗೆ ಕಾರಣರಾದ ಪೋಷಕರನ್ನು ಮತ್ತು ಉಪನ್ಯಾಸಕ ವರ್ಗದವರನ್ನು ಸ್ಮರಿಸಿ, ಅನುಭವವನ್ನು ಹಂಚಿಕೊಂಡರು.

ಕೋಟ ವಿದ್ಯಾಸಂಘದ ಜೊತೆ ಕಾರ್ಯದರ್ಶಿ ಎಂ. ರಾಮದೇವ ಐತಾಳರು ಶಾಲು ಹಾಗೂ ಫಲ-ಪುಷ್ಪಗಳನ್ನು ನೀಡಿ ಅಭೀಷೇಕ್ ಅವರನ್ನು ಸನ್ಮಾನಿಸಿದರು.

ಕರಾವಳಿ ಕರ್ನಾಟಕ ವರದಿ/ಸೀತಾರಾಮ ಮಯ್ಯ
ಕುಂದಾಪುರ: ಸಿ‌ಇಟಿ ಪರೀಕ್ಷೆಯಲ್ಲಿ ವಿವಿಧ ವಿಷಯಗಳಲ್ಲಿ 100ರ ಒಳಗೆ ರ್ಯಾಂಕ್ ಗಳಿಸಿ ಈಗ ಪ್ರಸ್ತುತ ಕಳೆದ ತಿಂಗಳಿನಲ್ಲಿ ನಡೆದ ರಾಷ್ಟ್ರಮಟ್ಟದ ನೀಟ್ ಪರೀಕ್ಷೆಯಲ್ಲಿ 720ರಲ್ಲಿ 645 ಅಂಕಗಳಿಸಿ ಸಾಧನೆಯನ್ನು ಮಾಡಿದ ಕೋಟ ವಿವೇಕ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಅಭಿಷೇಕ್ ಭಟ್ ಜಿ ಕೆ ಇವರನ್ನು ಕೋಟ ವಿದ್ಯಾಸಂಘ ಮತ್ತು ವಿವೇಕ ವಿದ್ಯಾ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಗುರುತಿಸಿ ಸನ್ಮಾನಿಸಲಾಯಿತು.

ಕೋಟ ವಿದ್ಯಾಸಂಘದ ಜೊತೆ ಕಾರ್ಯದರ್ಶಿ ಎಂ. ರಾಮದೇವ ಐತಾಳರು ವಿದ್ಯಾರ್ಥಿಯ ಅವಿರತವಾದ ಸಾಧನೆಯನ್ನು ಪ್ರಶಂಸಿಸಿ, ಇತರರಿಗೂ ಪ್ರೇರಣೆಯಾಗಲಿ ಎಂದು ಶುಭಹಾರೈಸಿದರು. ಶಾಲು ಹಾಗೂ ಫಲ-ಪುಷ್ಪಗಳನ್ನು ನೀಡಿ ಅಭೀಷೇಕ್ ಅವರನ್ನು ಸನ್ಮಾನಿಸಿದರು.

ಕಾಲೇಜಿನ ಪ್ರಾಂಶುಪಾಲ ಜಗದೀಶ ನಾವಡ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.  ಆಂಗ್ಲಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶ್ರೀಪತಿ ಹೇರ್ಳೆ ಉಪಸ್ಥಿತರಿದ್ದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅಭಿಷೇಕ್ ಭಟ್ ಜಿ ಕೆ ತನ್ನ ಸಾಧನೆಗೆ ಕಾರಣರಾದ ತನ್ನ ಪೋಷಕರನ್ನು ಮತ್ತು ಉಪನ್ಯಾಸಕ ವರ್ಗದವರನ್ನು ಸ್ಮರಿಸಿ, ತನ್ನ ಅನುಭವವನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಅಭಿಷೇಕ್ ಭಟ್ ಜಿ ಕೆ ಅವರ  ತಂದೆ, ಸರಕಾರಿ ಪದವಿಪೂರ್ವ ಕಾಲೇಜು, ಶಂಕರನಾರಾಯಣದ ಪ್ರಾಂಶುಪಾಲರಾದ ಜಗದೀಶ್ ಭಟ್ ಜಿ ಕೆ, ಮತ್ತು ವಿವೇಕ ಪದವಿಪೂರ್ವ ಕಾಲೇಜಿನ ಎಲ್ಲಾ ಉಪನ್ಯಾಸಕ ವರ್ಗ ಮತ್ತು ಸಿಬ್ಬಂದಿಯವರು ಉಪಸ್ಥಿತರಿದ್ದರು.

ಬಾಲಕರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ವೆಂಕಟೇಶ ಉಡುಪ ಧನ್ಯವಾದವಿತ್ತರು.

 

Get real time updates directly on you device, subscribe now.