ಶಂಕರನಾರಾಯಣ: ಹೊಟೇಲ್ ಉದ್ಯಮಿ ಆತ್ಮಹತ್ಯೆ

ಬೆಂಗಳೂರಿನಿಂದ ಧರ್ಮಸ್ಥಳ ಬಂದಿರುವುದಾಗಿ ತಾಯಿಗೆ ಫೋನ್ ಮೂಲಕ ತಿಳಿಸಿದ್ದರು. ಮನೆಗೆ ಬಾರದೇ ಆತ್ಮಹತ್ಯೆಗೈದಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಶಂಕರನಾರಾಯಣ: ಬೆಂಗಳೂರಿನ ಹೊಟೇಲ್ ಉದ್ಯಮಿಯೋರ್ವರು ವ್ಯವಹಾರದಲ್ಲಿ ನಷ್ಟದಿಂದ ನೊಂದು ಊರಿನಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿದೆ.

ಸುಶೀಲಾ ಶೆಡ್ತಿಯವರ ಪುತ್ರ ಪ್ರಶಾಂತ ಶೆಟ್ಟಿ(40) ಐರ್‌ಬೈಲ್ ಫ್ಯಾಕ್ಟರಿ ಎದುರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ.

ಶೆಟ್ಟರು ಬೆಂಗಳೂರಿನಿಂದ ಧರ್ಮಸ್ಥಳ ಬಂದಿರುವುದಾಗಿ ತಾಯಿಗೆ ಫೋನ್ ಮೂಲಕ ತಿಳಿಸಿದ್ದರು. ಮನೆಗೆ ಬಾರದೇ ಆತ್ಮಹತ್ಯೆಗೈದಿದ್ದಾರೆ. ನನ್ನ ಸಾವಿಗೆ ನಾನೇ ಕಾರಣ ಎಂಬ ಡೆತ್‌ನೋಟ್ ಪತ್ತೆಯಾಗಿದೆ.

ಹೊಟೇಲ್ ವ್ಯವಹಾರದಲ್ಲಿ ನಷ್ಟವಾದ ಕಾರಣ ನೊಂದು ಆತ್ಮಹತ್ಯೆಗೈದಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದಂತೆ ಪ್ರಕರಣ ದಾಖಲಾಗಿದೆ.

 

Get real time updates directly on you device, subscribe now.