ಕುಂದಾಪುರ: ‘ಓಶಿಯನ್ ವರ್ಲ್ಡ್’ ಆಶ್ರಯದಲ್ಲಿ ‘ಫಿಶ್ ಮಾರ್ಕೆಟ್’ ವಿನೂತನ ಜಾಲತಾಣ ಲೋಕಾರ್ಪಣೆ

ಓಶಿಯನ್ ವರ್ಲ್ಡ್ ಎಂಟರ್ಪ್ರೈಸಸ್ ಆಶ್ರಯದಲ್ಲಿ ನೂತನ ಜಾಲತಾಣ ಫಿಶ್ ಮಾರ್ಕೆಟ್ ಆ್ಯಪ್ ಲೋಕಾರ್ಪಣಾ ಸಮಾರಂಭ.

ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೋಟ ಜನತಾ ಫಿಶ್ ಮಿಲ್ ರೂವಾರಿ ಆನಂದ ಸಿ.ಕುಂದರ್ ಯುವಕರು ಜಾಲತಾಣದಲ್ಲಿ ಸಕ್ರಿಯಗೊಳಿಸಿದ ನೂತನ ಆ್ಯಪ್ ಬಗ್ಗೆ ಶ್ಲಾಘಿಸಿದರು.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಜಾಲತಾಣಗಳನ್ನು ಬಳಸಿಕೊಂಡು ಸಾರ್ವಜನಿಕ ರಂಗದಲ್ಲಿ ಕರಾವಳಿ ಜಿಲ್ಲೆಯಲ್ಲಿಯೇ ವಿನೂತನ ಪ್ರಯೋಗಕ್ಕೆ ಮುನ್ನುಡಿ ಬರೆದಿರುವ ಯುವಕರ ಸಾಹಸ ನಿಜಕ್ಕೂ ಶ್ಲಾಘನೀಯ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜಾಲತಾಣವನ್ನು ಸದ್ಭಳಕೆ ಮಾಡುವ ಮೂಲಕ ಸ್ವಯಂ ಉದ್ಯೋಗವನ್ನು ಸೃಷ್ಠಿ ಮಾಡಬಹುದೆಂಬ ಪ್ರಯೋಗಕ್ಕೆ ಇವರು ಮಾದರಿಯಾಗಿದ್ದಾರೆ. ಅವರ ಸಂಸ್ಥೆ ಯಶಸ್ಸಿನ ನೂತನ ಭಾಷೆಯನ್ನು ಬರೆಯಲಿ ಎಂದು ಕುಂದಾಪುರ ನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿಕಾಸ ಹೆಗ್ಡೆಯವರು  ಹೇಳಿದರು. ಬಿ.ಸಿ.ರಸ್ತೆಯ ದಿವ್ಯಶ್ರೀ ಕಾಂಪ್ಲೆಕ್ಸ್‌ನಲ್ಲಿ ಓಶಿಯನ್ ವರ್ಲ್ಡ್ ಎಂಟರ್ಪ್ರೈಸಸ್ ಆಶ್ರಯದಲ್ಲಿ ನೂತನ ಜಾಲತಾಣ ಫಿಶ್ ಮಾರ್ಕೆಟ್ ಆ್ಯಪ್ ಲೋಕಾರ್ಪಣಾ ಸಮಾರಂಭದಲ್ಲಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನದ ಅಧ್ಯಕ್ಷ ಜಯನಂದ ಖಾರ್ವಿ ಮಾತನಾಡುತ್ತಾ ಸಮಯದ ಹೊಂದಾಣಿಕೆ ಇರದ ವೇಗದ ಬದುಕಿನಲ್ಲಿ ಮತ್ಸ್ಯ ಪ್ರೀಯರಿಗೆ ಅವರ ಆಯ್ಕೆಯ ಮತ್ಸ್ಯಗಳನ್ನು ಜಾಲತಾಣದ ಆ್ಯಪ್ ಕರೆಯ ಮೂಲಕ ನೇರವಾಗಿ ಮನೆಗೆ ತಲುಪಿಸುವ ವಿನೂತನ ಕಾರ್ಯಕ್ಕೆ ಪಂಕ್ತಿ ಬರೆದಿರುವ ಯುವಕರ ಸಾಹಸ ಅವಿಸ್ಮರಣೀಯ. ಅವರಿಗೆ ಶುಭವಾಗಲಿ ಎಂದು ಹಾರೈಸಿದರು.

ಸಮಾರಂಭಕ್ಕೆ ಭೇಟಿ ನೀಡಿದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೋಟ ಜನತಾ ಫಿಶ್ ಮಿಲ್ ರೂವಾರಿ ಆನಂದ ಸಿ.ಕುಂದರ್ ಅವರು ಯುವಕರು ಜಾಲತಾಣದಲ್ಲಿ ಸಕ್ರಿಯಗೊಳಿಸಿದ ನೂತನ ಆ್ಯಪ್ ಬಗ್ಗೆ ಶ್ಲಾಘಿಸಿ ಅಭಿನಂದಿಸಿದರು.

ವೇದಿಕೆಯಲ್ಲಿ ಪುರಸಭಾ ಸದಸ್ಯ ಶೇಖರ ಪೂಜಾರಿ ದಿವ್ಯಶ್ರೀ ಸಂಕೀರ್ಣದ ಮಾಲಿಕ ಶ್ರೀಧರ್ ಪೂಜಾರಿ , ರೋಜರಿ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿ ಅಧ್ಯಕ್ಷ ಜಾನ್ಸನ್ ಡಿ ಆಲ್ಮೇಡಾ, ಉದ್ಯಮಿ ಆನಂದ ಎಲ್.ಖಾರ್ವಿ, ಕಂಡ್ಲೂರು ಜಾಮೀಯ ಮಸೀದಿ ಅಧ್ಯಕ್ಷ ದಸ್ತಗೀರ್ ಸಾಹೇಬ್ , ಸುಧಾಮುದ್ರ ಟೆಕ್ನಾಲಜಿಯ ಸುಧಾಕರ ಖಾರ್ವಿ, ಶ್ರೀದೇವಿ ಲೈಮ್ಶೆಲ್ನ ಮಾಲಿಕ ಹೂವಯ್ಯ  ಖಾರ್ವಿ ಉಪಸ್ಥಿತರಿದ್ದು ಓಶಿಯನ್ ವರ್ಲ್ಡ್ ಎಂಟರ್ಪ್ರೈಸಸ್ ಸಂಸ್ಥೆಗೆ ಶುಭಹಾರೈಸಿದರು.

ಸಂಸ್ಥೆಯ ಅನಿಲ್ ಖಾರ್ವಿ, ಸಂಜಯ ಖಾರ್ವಿ, ಸುಧೀರ್ ಹೆಗ್ಡೆ ಉಪಸ್ಥಿತರಿದ್ದು ಅತಿಥಿಗಳನ್ನು ಬರಮಾಡಿಕೊಂಡರು. ಗಣೇಶ್ ಎಚ್.ಖಾರ್ವಿ ಸ್ವಾಗತಿಸಿದರು. ಪ್ರವೀಣ್ ಖಾರ್ವಿ ಕಾರ್ಯಕ್ರಮ ನಿರೂಪಿಸಿದರು. ಗೌತಮ್ ಖಾರ್ವಿ ಕೃತಜ್ಞತೆ ಅರ್ಪಿಸಿದರು.

Get real time updates directly on you device, subscribe now.