ನೀಟ್ ಪರೀಕ್ಷೆಯಲ್ಲಿ ವಿಶಿಷ್ಟ ಸಾಧನೆಗೈದ ಕೋಟ ವಿವೇಕ ಪದವಿಪೂರ್ವ ಕಾಲೇಜು

ಶೇ. 95 ವಿದ್ಯಾರ್ಥಿಗಳು ಅರ್ಹತೆಯನ್ನು ಪಡೆದಿರುತ್ತಾರೆ. 

2019-20ನೇ ಸಾಲಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ವೈದ್ಯಕೀಯ ಪ್ರವೇಶ ಪರೀಕ್ಷೆ, ನೀಟ್‌ನಲ್ಲಿ ವಿಶಿಷ್ಟ ಸಾಧನೆಗೈದಿದೆ

ಕರಾವಳಿ ಕರ್ನಾಟಕ ವರದಿ
ಕೋಟ: 2019-20ನೇ ಸಾಲಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ವೈದ್ಯಕೀಯ ಪ್ರವೇಶ ಪರೀಕ್ಷೆ, ನೀಟ್‌ನಲ್ಲಿ ಕೋಟ ವಿವೇಕ ಪದವಿಪೂರ್ವ ಕಾಲೇಜು ವಿಶಿಷ್ಟ ಸಾಧನೆಗೈದಿದೆ. ಕಾಲೇಜಿನ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು ಶೇ. 95 ವಿದ್ಯಾರ್ಥಿಗಳು ಅರ್ಹತೆಯನ್ನು ಪಡೆದಿರುತ್ತಾರೆ.

ಹಲವು ವಿದ್ಯಾರ್ಥಿಗಳಿಗೆ ವಿವಿಧ ಕೋಟಾದಡಿ ಸರಕಾರಿ ಸೀಟುಗಳು ದೊರೆಯಲಿವೆ.  720 ಅಂಕದಲ್ಲಿ 300ಕ್ಕೂ ಹೆಚ್ಚು ಅಂಕಗಳನ್ನು ಹಲವು ವಿದ್ಯಾರ್ಥಿಗಳು ಗಳಿಸಿದ್ದಾರೆ.  ಅದರಲ್ಲಿ ಮುಖ್ಯವಾಗಿ ಅಭಿಷೇಕ್ ಭಟ್ ಜಿ ಕೆ – 645, ಶೆರ್ವಿನ್ ವಿಶಾಲ್ ಡಿಕೋಸ್ಟ – 534, ವಫಾ ನಾಝ್ ಶೇಕ್ – 412, ಸುಜಾತ ಭಟ್ – 406, ಚೈತ್ರಾ ಎಸ್ – 382 ಅಂಕಗಳನ್ನು ಪಡೆದು ಗಮನಾರ್ಹ ಸಾಧನೆಯನ್ನು ಮಾಡಿರುತ್ತಾರೆ.

ಶೆರ್ವಿನ್ ವಿಶಾಲ್ ಡಿಕೋಸ್ಟ
ವಫಾ ನಾಝ್ ಶೇಕ್
ಸುಜಾತ ಭಟ್
ಚೈತ್ರಾ ಎಸ್

ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿಗಳು ಶುಭಕೋರಿ, ಭವಿಷ್ಯದಲ್ಲಿ ಇನ್ನಷ್ಟು ಸಾಧಿಸಲಿ ಎಂದು ಹಾರೈಸಿದ್ದಾರೆ ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.

Get real time updates directly on you device, subscribe now.