ಉದ್ಯಾವರ: ಯು.ಎಫ್.ಸಿ. ಮಾತುಕತೆ -2020 ಬಿಡುಗಡೆ

ಒಂದು ಸಂಸ್ಥೆಯ ಚಟುವಟಿಕೆಗಳು ಮುದ್ರಣವಾಗಿ ಒಂದೆಡೆ ದಾಖಲಾಗುವುದು ಇಂದಿನ ಸಂದರ್ಭದಲ್ಲಿ ಅನಿವಾರ್ಯ.

‘ಇದು ಸಂಸ್ಥೆಗೂ ವಿಶ್ವಾಸಾರ್ಹತೆಯನ್ನು ತಂದು ಕೊಡುತ್ತದೆ’ ಎಂದು ಸಂಸ್ಥೆಯ ಮಾಜಿ ಅಧ್ಯಕ್ಷ ಗಿರೀಶ್ ಕುಮಾರ್ ನುಡಿದರು.

ಕರಾವಳಿ ಕರ್ನಾಟಕ ವರದಿ
ಉದ್ಯಾವರ: ಒಂದು ಸಂಸ್ಥೆಯ ಚಟುವಟಿಕೆಗಳು ಮುದ್ರಣವಾಗಿ ಒಂದೆಡೆ ದಾಖಲಾಗುವುದು ಇಂದಿನ ಸಂದರ್ಭದಲ್ಲಿ ಅನಿವಾರ್ಯ. ಸಂಸ್ಥೆ ಎಷ್ಟು ಕೆಲಸಗಳನ್ನು ಮಾಡಿದರೂ ಕೂಡಾ ಅವೆಲ್ಲವೂ ನೆನಪು ಇರೋದು ಕೆಲವೇ ವರ್ಷಗಳು ಮಾತ್ರ ಆದರೆ ಮುದ್ರಣವಾಗಿ ಅದು ಒಂದೆಡೆ ದಾಖಲೆ ಆದರೆ ಅದು ದೀರ್ಘ ಕಾಲದಲ್ಲಿ ಲಭ್ಯವಾಗುತ್ತದೆ. ಇದು ಸಂಸ್ಥೆಗೂ ವಿಶ್ವಾಸಾರ್ಹತೆಯನ್ನು ತಂದು ಕೊಡುತ್ತದೆ ಎಂದು ಸಂಸ್ಥೆಯ ಮಾಜಿ ಅಧ್ಯಕ್ಷರು, ಮಾಜಿ ತಾಲೂಕು ಪಂಚಾಯತ್ ಸದಸ್ಯರೂ ಆದ ಗಿರೀಶ್ ಕುಮಾರ್ ನುಡಿದರು. ಅವರು 2017 ಸಾಲಿನ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲಿನ 2019-20ರ ವರದಿ ಯು.ಎಫ್.ಸಿ. ಮಾತುಕತೆ -2020 ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.

ಸಂಸ್ಥೆಯ ಅಭಿವೃದ್ಧಿಯ ದೃಷ್ಟಿಯಿಂದ ಈ ಮಾತುಕತೆ ಪುಸ್ತಕ ಮಹತ್ತರವಾದ ಸ್ಥಾನವನ್ನು ಪಡೆಯುತ್ತದೆ. ಕಳೆದ ಐದು ವರ್ಷಗಳಿಂದ ಈ ಕಾರ್ಯಕ್ರಮವನ್ನು ಸಂಸ್ಥೆ ಮಾಡುತ್ತಿದೆ. ಇದು ನಿರಂತರವಾಗಿ ಮುಂದುವರಿಯಲಿ ಮತ್ತು ಮುಂದಿನ ಪೀಳಿಗೆಗೆ ನಮ್ಮ ಸಂಸ್ಥೆಯ ಪರಿಚಯವಾಗಲಿ ಎಂದು ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡ ಸಂಸ್ಥೆಯ ಅಧ್ಯಕ್ಷರಾದ  ಶೇಖರ್ ಕೆ. ಕೋಟ್ಯಾನ್ ಹಾರೈಸಿದರು.

ನಿರ್ದೇಶಕರಾದ  ಉದ್ಯಾವರ ನಾಗೇಶ್ ಕುಮಾರ್, ಶರತ್ ಕುಮಾರ್,  ಚಂದ್ರಾವತಿ ಎಸ್. ಭಂಡಾರಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಪಳ್ಳಿ, ಕಾರ್ಯದರ್ಶಿಗಳಾದ ಅನೂಪ್ ಕುಮಾರ್, ರವಿಕಿರಣ್ ಪಿ.ಎಸ್., ಉಪಾಧ್ಯಕ್ಷ ಪುಂಡರೀಶ್ ಕುಂದರ್, ಮಾಜಿ ಅಧ್ಯಕ್ಷ ತಿಲಕ್ರಾಜ್ ಸಾಲ್ಯಾನ್, ಮಾಜಿ ಪ್ರಧಾನ ಕಾರ್ಯದರ್ಶಿ ಗಿರೀಶ್ ಗುಡ್ಡೆಯಂಗಡಿ, ಲೆಕ್ಕಪರಿಶೋಧಕ ಹಬೀಬ್ ಪಳ್ಳಿ, ಮಾಜಿ ಪಂಚಾಯತ್ ಅಧ್ಯಕ್ಷರಾದ  ಸುಗಂಧಿ ಶೇಖರ್, ಶ್ರೀಧರ ಗಣೇಶ್ ನಗರ, ಮಹಮ್ಮದ್ ಅನ್ಸರ್, ಮಹಮ್ಮದ್ ಆಸಿಫ್, ಆಬಿದ್ ಆಲಿ, ಅಬ್ದುಲ್ ಹಮೀದ್ ಸಾಬ್ಜಾನ್, ಯು. ಸೀತಾರಾಮ, ಲೋಕನಾಥ ಬೊಳ್ಜೆ, ಭಾಸ್ಕರ್ ಬಂಗೇರಾ ಉಪಸ್ಥಿತರಿದ್ದರು.

ಅಧ್ಯಕ್ಷ ಶೇಖರ್ ಕೆ. ಕೋಟ್ಯಾನ್ ಸ್ವಾಗತಿಸಿ,  ಉಪಾಧ್ಯಕ್ಷ ಪುಂಡರೀಶ್ ಕುಂದರ್ ವಂದಿಸಿದರು. ಪ್ರಧಾನ ಕಾರ್ಯದರ್ಶಿ ರಿಯಾಝ್ ಪಳ್ಳಿ ಕಾರ್ಯಕ್ರಮ ನಿರ್ವಹಿಸಿದರು.

 

 

Get real time updates directly on you device, subscribe now.