ಹಟ್ಟಿಯಂಗಡಿ ಗ್ರಾಮಸ್ಥರಿಗೆ ಮಾಸ್ಕ್ ವಿತರಿಸಿದ ರೋಟರಿ ಕುಂದಾಪುರ ‘ಸನ್ರೈಸ್’
ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿರುವ ‘ರೋಟರಿ ಕುಂದಾಪುರ ಸನ್ ರೈಸ್’ ಕ್ಲಬ್ ಕಾರ್ಯಕ್ರಮ.
ಅಧ್ಯಕ್ಷೆ ರೋ. ಪೂರ್ಣಿಮಾ ಭವಾನಿ ಶಂಕರ್ ಮಾಸ್ಕ್ ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿರುವ ‘ರೋಟರಿ ಕುಂದಾಪುರ ಸನ್ ರೈಸ್’ ಕ್ಲಬ್ ಹಟ್ಟಿಯಂಗಡಿ ಗ್ರಾಮಸ್ಥರಿಗೆ ಮಾಸ್ಕ್ ಅನ್ನು ಉಚಿತವಾಗಿ ವಿತರಿಸಿದೆ.
ಅಧ್ಯಕ್ಷೆ ರೋ. ಪೂರ್ಣಿಮಾ ಭವಾನಿ ಶಂಕರ್ ಹಟ್ಟಿಯಂಗಡಿ ಶ್ರೀ ಸಿದ್ದಿ ವಿನಾಯಕ ದೇವಸ್ಥಾನದ ಪುರೋಹಿತರ ಸಮ್ಮುಖದಲ್ಲಿ ಮಾಸ್ಕ್ ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕ್ಲಬ್ ಕಾರ್ಯದರ್ಶಿ ಗಣೇಶ, ಖಜಾಂಚಿ ಗಿರಿಜಾ ಮಾಣಿ ಗೋಪಾಲ್, ಸ್ಮಿತಾ ಶಿವಾನಂದ, ಅಬು ಶೇಕ್ ಸಾಹೇಬ್, ಊರ ನಾಗರಿಕರು ಉಪಸ್ಥಿತರಿದ್ದರು.