ಕುಂದಾಪುರ: ಐವರು ಕೃಷಿಕರಿಗೆ ‘ರೋಟರಿ ಸನ್‌ರೈಸ್’ ಸನ್ಮಾನ

ಹಟ್ಟಿಯಂಗಡಿ ಗ್ರಾಮದ ಐವರು ಸಾಧಕರಿಗೆ ರೋಟರಿ ಕುಂದಾಪುರ ಸನ್ ರೈಸ್ ಸದಸ್ಯರು ಮತ್ತು ಅಧ್ಯಕ್ಷರು ಗೌರವಿಸಿದರು.

ಅಧ್ಯಕ್ಷೆ ರೋ. ಪೂರ್ಣಿಮಾ ಭವಾನಿ ಶಂಕರ ಅವರು ಕೃಷಿಕರ ಅಸಾಮಾನ್ಯ ಸಾಧನೆಗಾಗಿ ಅವರನ್ನು ಅಭಿನಂದಿಸಿ ಶುಭ ಕೋರಿದರು.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಸಣ್ಣ ಹಿಡುವಳಿದಾರರಾಗಿದ್ದು, ಕೃಷಿಕೆಲಸದಲ್ಲಿ ತಮ್ಮನ್ನು ತೊಡಗಿಸಿ ಜೀವನವನ್ನು ನಡೆಸುತ್ತಿರುವ ಕುಂದಾಪುರ ತಾಲೂಕಿನ ಹಟ್ಟಿಯಂಗಡಿ ಗ್ರಾಮದ ಐವರು ಸಾಧಕರಿಗೆ ರೋಟರಿ ಕುಂದಾಪುರ ಸನ್ ರೈಸ್ ಸದಸ್ಯರು ಮತ್ತು ಅಧ್ಯಕ್ಷರು ಗೌರವಿಸಿ, ಸನ್ಮಾನಿಸಿ, ಕಿರು ಕಾಣಿಕೆ ನೀಡಿದರು.

ಅಧ್ಯಕ್ಷೆ ರೋ. ಪೂರ್ಣಿಮಾ ಭವಾನಿ ಶಂಕರ ಅವರು ಕೃಷಿಕರ ಅಸಾಮಾನ್ಯ ಸಾಧನೆಗಾಗಿ ಅವರನ್ನು ಅಭಿನಂದಿಸಿ ಶುಭ ಕೋರಿದರು.

ಸ್ಮಿತಾ ಶಿವಾನಂದ, ಗಿರಿಜಾ ಮಾಣಿಗೋಪಾಲ್, ಅಬು ಶೇಕ್ ಸಾಹೇಬ್,ಭವಾನಿ ಶಂಕರ, ಶಿವಾನಂದ ಎಂ. ಪಿ.ಹಾಜರಿದ್ದರು.

ಕಾರ್ಯದರ್ಶಿ ಗಣೇಶ ವಂದಿಸಿದರು.

Get real time updates directly on you device, subscribe now.