ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ನಿಂದ ಸಾಂಪ್ರದಾಯಿಕ ಗೋಪೂಜೆ

ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್, ಲಿಯೋ ಕ್ಲಬ್ ಅಬ್ಬನಡ್ಕ ಸಹಯೋಗದಲ್ಲಿ ಕಾರ್ಯಕ್ರಮ.

ಲಾಭ ನಷ್ಟದ ಲೆಕ್ಕಾಚಾರದಲ್ಲಿ ಗೋವನ್ನು ಸಾಕದೆ, ಮನುಕುಲದ ಕಾಮಧೇನುವಾಗಿ ನಾವೆಲ್ಲ ಗೋವನ್ನು ಪೂಜಿಸಬೇಕಾಗಿದೆ ಎಂದು ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಬೋಳ ಉದಯ ಅಂಚನ್ ಹೇಳಿದರು.

ಕರಾವಳಿ ಕರ್ನಾಟಕ ವರದ್ದಿ
ಕಾರ್ಕಳ: ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್, ಲಿಯೋ ಕ್ಲಬ್ ಅಬ್ಬನಡ್ಕ ಸಹಯೋಗದಲ್ಲಿ ದೀಪಾವಳಿ ಅಂಗವಾಗಿ ವರ್ಷಂಪ್ರತಿಯಂತೆ ಸಾಂಪ್ರದಾಯಿಕ ಗೋಪೂಜೆ ಕಾರ್ಯಕ್ರಮ ನಡೆಯಿತು.

ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಬೋಳ ಉದಯ ಅಂಚನ್ ಮಾತನಾಡಿ ತಾಯಿಯ ಹಾಲನ್ನು ಕುಡಿದು ಬೆಳೆವ ನಾವು ಸಾಯುವ ತನಕ ಗೋವಿನ ಹಾಲನ್ನು ಕುಡಿಯುತ್ತೇವೆ. ಕೇವಲ ಲಾಭ ನಷ್ಟದ ಲೆಕ್ಕಾಚಾರದಲ್ಲಿ ಗೋವನ್ನು ಸಾಕದೆ, ಮನುಕುಲದ ಕಾಮಧೇನುವಾಗಿ ನಾವೆಲ್ಲ ಗೋವನ್ನು ಪೂಜಿಸಬೇಕಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಅಬ್ಬನಡ್ಕ ಲಿಯೋ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಸಂಘದ ಪೂರ್ವಾಧ್ಯಕ್ಷರಾದ ರಘುವೀರ್ ಶೆಟ್ಟಿ, ಆನಂದ ಪೂಜಾರಿ, ಸುರೇಶ್ ಪೂಜಾರಿ ಕಾಸ್ರಬೈಲು, ರಾಜೇಶ್ ಕೋಟ್ಯಾನ್, ಸತೀಶ್ ಪೂಜಾರಿ, ಕಾರ್ಯದರ್ಶಿ ಹರಿಪ್ರಸಾದ್ ಆಚಾರ್ಯ, ಜೊತೆ ಕಾರ್ಯದರ್ಶಿ ಹರಿಣಾಕ್ಷಿ ಪೂಜಾರಿ, ಕೋಶಾಧಿಕಾರಿ ವೀಣಾ ಪೂಜಾರಿ, ಮಹಿಳಾ ಸಂಘಟನಾ ಕಾರ್ಯದರ್ಶಿ ಪುಷ್ಪ ಕುಲಾಲ್, ಭಜನಾ ಸಮಿತಿಯ ಅಧ್ಯಕ್ಷೆ ಸುಲೋಚನಾ ಕೋಟ್ಯಾನ್, ಸದಸ್ಯರಾದ ಪದ್ಮಶ್ರೀ ಪೂಜಾರಿ, ಸುರೇಶ್ ಪೂಜಾರಿ ಅಬ್ಬನಡ್ಕ, ಲೀಲಾ ಪೂಜಾರಿ, ಅಶ್ವಿನಿ ಪೂಜಾರಿ, ಸಂಧ್ಯಾ ಶೆಟ್ಟಿ, ಲಲಿತಾ ಆಚಾರ್ಯ, ಹರೀಶ್ ಪೂಜಾರಿ, ಆರತಿ ಕುಮಾರಿ, ಶರತ್ ದೇವಾಡಿಗ ಮೊದಲಾದವರಿದ್ದರು.

 

Get real time updates directly on you device, subscribe now.