ಚುಂಗಿಗುಡ್ಡೆ ಸುಮಿತ್ರಾ ಹೆಬ್ಬಾರ್ ನಿಧನ
ಸುಮಿತ್ರ ಹೆಬ್ಬಾರ್ ತಮ್ಮ ಸೌಜನ್ಯದಿಂದ ಜನಮನದಲ್ಲಿದ್ದರು.
ಮೃತರ ಅಂತ್ಯಕ್ರಿಯೆ ಚುಂಗಿಗುಡ್ಡೆಯಲ್ಲಿ ನಡೆಯಿತು.
ಕರಾವಳಿ ಕರ್ನಾಟಕ ವರದಿ
ಬೈಂದೂರು: ನಾಡ ಗ್ರಾಮದ ಚುಂಗಿಗುಡ್ಡೆಯ ದಿ. ಶ್ರೀನಿವಾಸ ಹೆಬ್ಬಾರ್ ಅವರ ಪತ್ನಿ ಸುಮಿತ್ರಾ ಹೆಬ್ಬಾರ್(80) ಅವರು ಬುಧವಾರ ಬೆಳಗಿನ ಜಾವ ನಿಧನ ಹೊಂದಿದರು.
ಮೃತರು ಪುತ್ರರಾದ ವಸಂತ ಹೆಬ್ಬಾರ್, ಸತೀಶ್ ಹೆಬ್ಬಾರ್, ರಾಘವೇಂದ್ರ ಹೆಬ್ಬಾರ್, ಮಂಜುನಾಥ ಹೆಬ್ಬಾರ್, ಧರ್ಮೇಂದ್ರ ಹೆಬ್ಬಾರ್ ಮತ್ತು ಪುತ್ರಿ ಪ್ರತಿಮಾ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಸುಮಿತ್ರ ಹೆಬ್ಬಾರ್ ತಮ್ಮ ಸೌಜನ್ಯದಿಂದ ಜನಮನದಲ್ಲಿದ್ದರು. ಅವರ ನಿಧನಕ್ಕೆ ಹಲವರು ಕಂಬನಿ ಮಿಡಿದಿದ್ದಾರೆ.
ಮೃತರ ಅಂತ್ಯಕ್ರಿಯೆ ಮಧ್ಯಾಹ್ನ ಚುಂಗಿಗುಡ್ಡೆಯಲ್ಲಿ ನಡೆಯಿತು.