ಕೋಳಿಗೂಡಿನಲ್ಲಿ ಕಾಣಿಸಿಕೊಂಡ ಬೃಹತ್ ಹೆಬ್ಬಾವು ಹಿಡಿದ ಜೊಸೆಫ್ ಲೂಯಿಸ್

ಕೋಳಿ ಗೂಡಿನಲ್ಲಿ ರಾತ್ರಿ 1 ಗಂಟೆಯ ಸುಮಾರಿಗೆ ಕಾಣಿಸಿದ ಹೆಬ್ಬಾವು

A large python found in Haregodu, Hemmady was caught by local snake catcher Joseph Lewis.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಇಲ್ಲಿಗೆ ಸಮೀಪದ ಹೆಮ್ಮಾಡಿಯ ಹರೆಗೋಡು ಎಂಬಲ್ಲಿ ಮನೆಯೊಂದರ ಬಳಿ ಕಾಣಿಸಿಕೊಂಡ ಬೃಹತ್ ಗಾತ್ರದ ಹೆಬ್ಬಾವನ್ನು ಸ್ಥಳೀಯ ಸಾಹಸಿ ಜೊಸೆಫ್ ಲೂಯಿಸ್ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಹರೆಗೋಡಿನ ಮನೆಯೊಂದರ ಕೋಳಿ ಗೂಡಿನಲ್ಲಿ ರಾತ್ರಿ 1 ಗಂಟೆಯ ಸುಮಾರಿಗೆ ಈ ಹೆಬ್ಬಾವು ಕಾಣಿಸಿದೆ. ಕೋಳಿಗೂಡಿನಲ್ಲಿ ಕೋಳಿಗಳು ವಿಪರೀಪ ಕೂಗುವುದನ್ನು ಕೇಳಿ ಎಚ್ಚೆತ್ತ ಮನೆ ಮಂದಿ ಹೆಬ್ಬಾವು ನೋಡಿ ಗಾಭರಿಗೊಂಡಿದ್ದಾರೆ. ಕೂಡಲೆ ಜೊಸೆಫ್ ಲೂಯಿಸ್ ಅವರಿಗೆ ಕರೆ ಮಾಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಜೊಸೆಫ್ ಲೂಯಿಸ್ ಹರಸಾಹಸಪಟ್ಟ ಹೆಬ್ಬಾವನ್ನು ಸೆರೆ ಹಿಡಿದಿದ್ದಾರೆ. ಬೃಹತ್ ಗಾತ್ರದ ಹೆಬ್ಬಾವು ಅಷ್ಟರಲ್ಲೆ ಕೋಳಿಯೊಂದನ್ನು ತಿಂದುಬಿಟ್ಟಿತ್ತು.

ಜೊಸೆಫ್ ಲೂಯಿಸ್ ಈ ತನಕ ಸಾವಿರಾರು ಹಾವುಗಳನ್ನು ಹಿಡಿದಿದ್ದಾರೆ. ಅತ್ಯಂತ ವಿಷಪೂರಿತವಾದ ಕಾಳಿಂಗ ಸರ್ಪ, ನಾಗರಹಾವು, ಕೊಳಕುಮಂಡಲ ಮುಂತಾದ ಹಾವುಗಳನ್ನೂ ಬೃಹತ್ ಗಾತ್ರದ ಹೆಬ್ಬಾವುಗಳನ್ನೂ ಸಹ ಹಿಡಿದಿದ್ದಾರೆ. ಎರಡು ವರ್ಷಗಳ ಹಿಂದೆಯೂ ಇದೆ ಹರೆಗೋಡಿನಲ್ಲಿ ಹೆಬ್ಬಾವನನ್ನು ಜೊಸೆಫ್ ಹಿಡಿದಿದ್ದರು.

ಹೆಮ್ಮಾಡಿ ಪೇಟೆಯಲ್ಲಿ ಕಾಲೇಜು ಹುಡುಗರು ಮತ್ತು ಸಾರ್ವಜನಿಕರು ಹೆಬ್ಬಾವಿನ ಜೊತೆ ಸೆಲ್ಫಿ ತೆಗೆದುಕೊಂಡರೆ ಸ್ಥಳೀಯ ರಿಕ್ಷಾ ಚಾಲಕರು ಹಾವನ್ನು ಅರಣ್ಯ ಇಲಾಖೆಗೆ ಒಪ್ಪಿಸುವಲ್ಲಿ ನೆರವಾದರು.

Get real time updates directly on you device, subscribe now.