ಭಟ್ಕಳ ಜನತೆಗೆ ಶುಭ ಶುಕ್ರವಾರ: ಲಾಕ್‌ಡೌನ್ ಸಡಿಲಿಸಿದ ಜಿಲ್ಲಾಡಳಿತ

ಮದೀನಾ ಕಾಲೋನಿ, ಗುಡ್ಲಕ್ ರೋಡ್, ಉಸ್ಮಾನಿಯ ಕಾಲೋನಿ, ಕೋಕ್ತಿನಗರ, ಸುಲ್ತಾನ್ ಸ್ರೀಟ್ ಪ್ರದೇಶ ನೂರು ಮೀಟರ್ ವ್ಯಾಪ್ತಿಯನ್ನು ಮಾತ್ರ ಕಂಟೇನ್ಮೆಂಟ್ ವಲಯ ಎಂದು ಪರಿಗಣಿಸಲಾಗಿದೆ.

ಕರಾವಳಿ ಕರ್ನಾಟಕ ವರದಿ
ಭಟ್ಕಳ: ಮಂಗಳೂರಿನ ಆಸ್ಪತ್ರೆಯೊಂದರ ಸಂಪರ್ಕದಿಂದ ಭಟ್ಕಳ ಯುವತಿಯಲ್ಲಿ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಭಟ್ಕಳ ನಗರವನ್ನೇ ಕಂಟೇನ್ಮೆಂಟ್ ವಲಯವನ್ನಾಗಿ ಪರಿವರ್ತಿಸಿ ಸೀಲ್‍ಡೌನ್ ಮಾಡಿದ್ದ ಜಿಲ್ಲಾಡಳಿತ ಶುಕ್ರವಾರದಿಂದ ಲಾಕ್ ಡೌನ್ ಸಡಿಲಿಕೆಗೆ ಅವಕಾಶ ನೀಡಿದೆ.

ಜೂನ್1 ರಿಂದ 8 ರ ವರೆಗೆ ಈ ಸಡಿಲಿಕೆ ಮುಂದುವರೆಯಲಿದ್ದು, ಆ ಬಳಿಕ ಸರಕಾರದ ನಿಯಮಾವಳಿಯಂತೆ ಮುಂದಿನ ಕ್ರಮ ಜರುಗಿಸಲಾಗುತ್ತದೆ.

ಮದೀನಾ ಕಾಲೋನಿ, ಗುಡ್ಲಕ್ ರೋಡ್, ಉಸ್ಮಾನಿಯ ಕಾಲೋನಿ, ಕೋಕ್ತಿನಗರ, ಸುಲ್ತಾನ್ ಸ್ರೀಟ್ ಪ್ರದೇಶ ನೂರು ಮೀಟರ್ ವ್ಯಾಪ್ತಿಯನ್ನು ಮಾತ್ರ ಕಂಟೇನ್ಮೆಂಟ್ ವಲಯ ಎಂದು ಪರಿಗಣಿಸಲಾಗಿದೆ. ಉಳಿದ ಪ್ರದೇಶಗಳಲ್ಲಿ ಬೆಳಿಗ್ಗೆ ಎಂಟರಿಂದ ಮಧ್ಯಾಹ್ನ 2ಗಂಟೆ ತನಕ ಲಾಕ್‌ಡೌನ್ ಸಡಿಲಿಕೆ ಮಾಡಲಾಗುತ್ತಿದೆ.

ಮೆಡಿಕಲ್ಸ್, ಸಲೂನ್, ಪೆಟ್ರೋಲ್ ಪಂಪ್, ಬೇಕರಿ ಸೇರಿದಂತೆ ಅಗತ್ಯ ವಸ್ತು ಪೂರೈಕೆ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗುವುದೆಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಪ್ರವಾಸಿ ಬಂಗ್ಲೆಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ. ಅಂಗಡಿಯವರು ನಿಯಮ ಉಲ್ಲಂಘಿಸಿದರೆ ಪರವಾನಿಗೆ ರದ್ದುಗೊಳಿಸುವ ಕಠಿಣ ಕ್ರಮ ಅನಿವಾರ್ಯ ಆಗಲಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ಎಎಸ್ಪಿ ನಿಖಿಲ್ ಬಿ, ಸಹಾಯಕ ಆಯುಕ್ತ ಭರತ್ ಎಸ್, ತಹಸಿಲ್ದಾರ್ ರವಿಚಂದ್ರ ಮತ್ತಿತರರು ಉಪಸ್ಥಿತರಿದ್ದರು.

Get real time updates directly on you device, subscribe now.