7 ಬಾರಿ ಆಯ್ಕೆಯಾದ ನೀವು ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದೀರಿ? ಅನಂತಕುಮಾರ ಹೆಗಡೆಗೆ ಧ್ರುವ ನಾರಾಯಣ ಪ್ರಶ್ನೆ

ಎಲ್ಲಾದರೂ ಸಣ್ಣ ಕೋಮು ಗಲಭೆಯಾದರೆ ಎಲ್ಲಿದ್ದರೂ ಪ್ರತ್ಯಕ್ಷವಾಗುತ್ತೀರಾ. ಪ್ರಚೋದನಕಾರಿ ಹೇಳಿಕೆ ನೀಡಿ ಗಲಭೆಯನ್ನು ಇನ್ನಷ್ಟು ಉಲ್ಬಣಗೊಳಿಸುವುದು ಮಾತ್ರ ತಿಳಿದಿದೆ.

ನಿಮ್ಮಂಥ ಸಂಸದರು ಮೋದಿಯವರ ಮುಖ ತೋರಿಸಿ ಆಯ್ಕೆಯಾದವರಲ್ಲವೆ? ನಿಮಗೆ ಮುಖ ಎಲ್ಲಿದೆ? ಫೇಸ್ ಲೆಸ್ ಪೀಸ್ ನೀವು ಎಂದು ಜರಿದರು.

ಕರಾವಳಿ ಕರ್ನಾಟಕ ವರದಿ/ರವಿತೇಜ ಕಾರವಾರ
ಕುಮಟಾ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ 7 ಬಾರಿ ಆಯ್ಕೆಯಾದ ಸಂಸದ ಅನಂತಕುಮಾರ ಹೆಗಡೆ ಅವರ ಕೊಡುಗೆ ಈ ಕ್ಷೇತ್ರಕ್ಕೆ ಶೂನ್ಯ ಎಂದು ಮಾಜಿ ಲೋಕಸಭಾ ಸದಸ್ಯ ಧ್ರುವ ನಾರಾಯಣ ಕಿಡಿಕಾರಿದರು.

ಸಂಸದ ಅನಂತಕುಮಾರ ಹೆಗಡೆಯ ವಿರುದ್ಧ ಕಿಡಿಕಾರಿದ ಅವರು ನಿಮ್ಮ ಲೋಕಸಭಾ ಕ್ಷೇತ್ರದಿಂದ 7 ಬಾರಿ ಆಯ್ಕೆಯಾದ ನೀವು ಈ ಕ್ಷೇತ್ರಕ್ಕೆ ಅಥವಾ ರಾಜ್ಯಕ್ಕೆ ಏನು ಕೊಡುಗೆ ನೀಡಿದ್ದೀರಿ? ಎಂದು ಪ್ರಶ್ನಿಸಿದರು.

ಕೊರೊನಾದಂತಹ ವಿಷಮ ಸ್ಥಿತಿಯಲ್ಲಿ ಪ್ರಧಾನಿ ಅವರನ್ನು ಭೇಟಿ ಮಾಡಿ ರಾಜ್ಯಕ್ಕೆ ಅಗತ್ಯವಾದ ನೆರವನ್ನು ತರಬಹುದಿತ್ತು. ನಿಮ್ಮ ಹೋರಾಟ ಆ ನಿಟ್ಟಿನಲ್ಲಿ ಇರಬಹುದಿತ್ತು. ಆದರೆ ಈ ಬಗ್ಗೆ ಚಕಾರ ಕೂಡ ಎತ್ತದ ನಿಮ್ಮಂಥ ಸಂಸದರು ಮೋದಿಯವರ ಮುಖ ತೋರಿಸಿ ಆಯ್ಕೆಯಾದವರಲ್ಲವೆ? ನಿಮಗೆ ಮುಖ ಎಲ್ಲಿದೆ? ಫೇಸ್ ಲೆಸ್ ಪೀಸ್ ನೀವು ಎಂದು ಜರಿದರು.

ಎಲ್ಲಾದರೂ ಸಣ್ಣ ಕೋಮು ಗಲಭೆಯಾದರೆ ಎಲ್ಲಿದ್ದರೂ ಪ್ರತ್ಯಕ್ಷವಾಗುತ್ತೀರಾ. ಪ್ರಚೋದನಕಾರಿ ಹೇಳಿಕೆ ನೀಡಿ ಗಲಭೆಯನ್ನು ಇನ್ನಷ್ಟು ಉಲ್ಬಣಗೊಳಿಸುವುದು ಮಾತ್ರ ತಿಳಿದಿದೆಯೇ ಹೊರತು ಕ್ಷೇತ್ರದ ಅಭಿವೃದ್ಧಿ ಮಾಡುವವರಲ್ಲ. ಅಭಿವೃದ್ಧಿಯ ದೃಷ್ಟಿಯಿಂದ ರಾಜ್ಯದಲ್ಲಿ ನಿಮ್ಮ ಕೊಡುಗೆ ಶೂನ್ಯ ಎಂದು ಜರಿದರು.

ಪ್ರಧಾನಿ ಮೋದಿ ಕೊರೊನಾದಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಪುನಶ್ಚೇತನಗೊಳಿಸುವುದನ್ನು ಬಿಟ್ಟು, ಮನ್ ಕಿ ಬಾತ್‌ನಲ್ಲಿ ಆಟಿಕೆ ಪರಿಕರಗಳ ಕುರಿತು ಮಾತನಾಡುತ್ತಾರೆ. ವಿದೇಶದಿಂದ ಬರುವ ಜನರನ್ನು ಮೊದಲೇ ನಿರ್ಭಂದಿಸಿ ಕಡ್ಡಾಯವಾಗಿ ಕ್ವಾರಂಟೈನ್ ಮಾಡಿದ್ದರೆ ದೇಶದಲ್ಲಿ ಕೊರೊನಾ ಪರಿಸ್ಥಿತಿ ಈ ಪ್ರಮಾಣದಲ್ಲಿ ಉಲ್ಬಣಗೊಳ್ಳುತ್ತಿರಲಿಲ್ಲ. ಭಾರತ ಕೊರೊನಾ ಸೋಂಕಿತರಲ್ಲಿ ಮೂರನೇ ಸ್ಥಾನದಲ್ಲಿದೆ. ಇನ್ನು ಕೆಲವೇ ದಿನಗಳಲ್ಲಿ ಅಮೇರಿಕಾ ದೇಶವನ್ನು ಹಿಂದಿಕ್ಕಲಿದೆ. ಮುಂಜಾಗೃತ ಕ್ರಮದ ವೈಫಲ್ಯತೆಯಿಂದ ಇಂಥ ಪ್ರಮಾದಗಳು ನಡೆದಿವೆ. ವಿಶ್ವದ ಎಲ್ಲ ದೇಶಗಳಿಗಿಂತ ಭಾರತದ ಜಿಡಿಪಿ ಪಾತಾಳಕ್ಕೆ ಕುಸಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ 25 ಬಿಜೆಪಿ ಸಂಸದರಿದ್ದೂ ವ್ಯರ್ಥ

ಕರ್ನಾಟಕದಲ್ಲಿ 25 ಬಿಜೆಪಿ ಸಂಸದರಿದ್ದರೂ ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪಾಲು, ನೆರೆ ಪರಿಹಾರ ಕೇಳುವ ಧೈರ್ಯವಿಲ್ಲ. ರಾಜ್ಯಕ್ಕೆ ಅನ್ಯಾಯವಾದಾಗ ಸರಿಪಡಿಸಬೇಕಾದ ಈ ಸಂಸದರು ಪ್ರತಿಯೊಂದು ವಿಷಯವನ್ನು ಕೋಮು ಪ್ರಚೋದನೆ ತಳಹದಿಯ ಮೇಲೆ ಪ್ರತಿಪಾದಿಸುತ್ತಾರೆ. ಮೋದಿ ಮುಖವಾಡ ಹಾಕಿಕೊಂಡು ಚುನಾವಣೆಯಲ್ಲಿ ಆಯ್ಕೆಗೊಂಡಿರುವ ಸಂಸದರು ರಾಜ್ಯದ ಹಿತದೃಷ್ಟಿಯಿಂದ ಯಾವುದೇ ಜನಪರ ಕೆಲಸಗಳನ್ನು ಮಾಡುತ್ತಿಲ್ಲ. ಕರ್ನಾಟಕದಲ್ಲಿ 2008ರಲ್ಲಿ ವಾಮ ಮಾರ್ಗದಿಂದ ಜನಾರ್ಧನ ರೆಡ್ಡಿಯ ಹಣದ ಪ್ರಭಾವದಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಆದರೆ ಅಧಿಕಾರ ನಡೆಸಲಾಗದೆ ಭ್ರಷ್ಟಾಚಾರ ವೆಸಗಿದರು. ಮೂರು ಮುಖ್ಯಮಂತ್ರಿಗಳು ಬದಲಾದರು. ಮುಖ್ಯಮಂತ್ರಿಯೊಬ್ಬರು ಜೈಲು ಸೇರಿದರು ಎಂದು ಆಪಾದಿಸಿದರು.

Get real time updates directly on you device, subscribe now.