ಕುವೈಟ್ ಸಾರ್ವಜನಿಕ ಕ್ಷಮಾದಾನ: ‘ಇಂಡಿಯನ್ ಸೋಶಿಯಲ್ ಫೋರಂ’ ಅನನ್ಯ ಅಹರ್ನಿಶಿ ಸೇವೆ

ಕುವೈಟಿನಲ್ಲಿ ವಿಸಾ, ಪಾಸ್ಫೋರ್ಟ್ ಮತ್ತು ಉದ್ಯೋಗಗಳಿಲ್ಲದೆ ಸಂಕಷ್ಟದಲ್ಲಿರುವ ಅನಿವಾಸಿಗಳಿಗೆ ಯಾವುದೇ ಜಾತಿ, ಧರ್ಮ, ಪ್ರಾದೇಶಿಕತೆಯ ಬೇಧವಿಲ್ಲದೆ ಸಮಸ್ಯೆಗೆ ಪರಿಹಾರ ಒದಗಿಸುವಲ್ಲಿ ಇಂಡಿಯನ್ ಸೋಶಿಯಲ್ ಫೋರಂ ಕುವೈಟ್‌ ಮುಂಚೂಣಿಯಲ್ಲಿದೆ.

ದಾನಿಗಳ ಸಹಾಯದಿಂದ ಇಂಡಿಯನ್ ಸೋಶಿಯಲ್ ಫೋರಂ ಸದಸ್ಯರು ಈಗಾಗಲೇ ಆಹಾರದ ಕಿಟ್ಗಳನ್ನು ಕುವೈಟಿನ ವಿವಿಧ ಪ್ರದೇಶಗಳಲ್ಲಿ ವಿತರಿಸುವಲ್ಲೂ ಸಫಲರಾಗಿದ್ದಾರೆ.

ಕರಾವಳಿ ಕರ್ನಾಟಕ ವರದಿ/ಫಯಾಝ್ ಹಸನ್
ಕುವೈಟ್: ಇಂಡಿಯನ್ ಸೋಶಿಯಲ್ ಫೋರಂ ಅನನ್ಯ ಸೇವೆಗಾಗಿ ಮತ್ತೊಮ್ಮೆಸುದ್ದಿಯಾಗಿದೆ. ಕುವೈಟ್‌ಸರಕಾರ ಘೋಷಿಸಿದ ಸಾರ್ವಜನಿಕ ಕ್ಷಮಾದಾನವನ್ನು ಜನರೆಡೆಗೆ ತಲುಪಿಸುವಲ್ಲಿ ಇಂಡಿಯನ್ ಸೋಶಿಯಲ್ ಫೋರಂ ವಹಿಸಿದ ಪಾತ್ರವು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

ಭಾರತೀಯ ಮೂಲದ ಸುಮಾರು 750 ಪಾಸ್ಪೋರ್ಟ್ ರಹಿತ ಮತ್ತು 1000 ಕ್ಕಿಂತಲೂ ಹೆಚ್ಚು ಪಾಸ್ಪೋರ್ಟ್ ಹೊಂದಿದ ಅನಧಿಕೃತ ನಿವಾಸಿಗಳು ಐಎಸ್ಎಫ್ ಸಹಾಯವಾಣಿಯಿಂದ ಪ್ರಯೋಜನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕುವೈಟ್ ಸರಕಾರ, ಕುವೈಟಿನಲ್ಲಿ ನೆಲೆಸಿರುವ ಅನಧಿಕೃತ ನಿವಾಸಿಗಳಿಗೆ ಕ್ಷಮಾದಾನ ಘೋಷಿಸಿದ ಬೆನ್ನಿಗೇ ಕಾರ್ಯಪ್ರವೃತ್ತಗೊಂಡ ಇಂಡಿಯನ್ ಸೋಶಿಯಲ್ ಫೋರಂ ಕ್ಷಮಾದಾನದ ಪ್ರಯೋಜನ ಪಡೆಯಲು ಇಚ್ಛಿಸುವ ಭಾರತೀಯರಿಗಾಗಿ ಸಹಾಯವಾಣಿ ಆರಂಭಿಸಿತು.  ಕನ್ನಡ, ತುಳು, ಬ್ಯಾರಿ, ಮಲಯಾಳಂ, ತಮಿಳ್, ಹಿಂದಿ, ಇಂಗ್ಲಿಷ್, ಅರೇಬಿಕ್ ಮುಂತಾದ ಭಾಷೆಗಳಲ್ಲಿ ಸಹಾಯವಾಣಿ ಆರಂಭಿಸಿ ಹಗಲಿರುಳು ತಮ್ಮಲ್ಲಿ ಸಹಾಯ ಯಾಚಿಸಿ ಕರೆಮಾಡಿದ ಜನರಿಗೆಸೂಕ್ತ ಮಾರ್ಗದರ್ಶನ ನೀಡಿತು.

ವ್ಯಕ್ತಿಯು ತನ್ನ ಪಾಸ್ಪೋರ್ಟನ್ನೂ ಕಳೆದುಕೊಂಡಿದ್ದ ಪಕ್ಷದಲ್ಲಿ ಐಎಸ್ಎಫ್ ಸ್ವಯಂಸೇವಕ ತಂಡ ಅವರಿದ್ದ ಪ್ರದೇಶಕ್ಕೆ ತೆರಳಿ ಭಾರತೀಯ ರಾಯಭಾರ ಕಚೇರಿ ನೀಡಿದ ಫಾರ್ಮೊಂದನ್ನು ಅವರಿಗಾಗಿ ಭರ್ತಿಗೊಳಿಸಿ, ಸಹಿ ಪಡೆದು ತಾತ್ಕಾಲಿಕ ಪಾಸ್ಪೋರ್ಟ್ (ಔಟ್ಪಾಸ್) ಪಡೆಯಲು ಅದನ್ನು ಸ್ವತಃ ರಾಯಭಾರ ಕಚೇರಿಗೆ ಸಲ್ಲಿಸಿದೆ.

ಅತ್ತ ನೌಕರಿಯೂ ಇಲ್ಲದೆ ಇತ್ತ ಊರಿಗೆ ತೆರಳಲು ಬೇಕಾದ ದಾಖಲೆಗಳುಇಲ್ಲದೆ ಪರಿತಪಿಸುತ್ತಿದ್ದ ಭಾರತೀಯರಿಗೆ ಐಎಸ್ಎಫ್ ಸೇವೆಯು ಕುವೈಟ್ ಸರಕಾರ ನೀಡಿದ ಕ್ಷಮಾದಾನವೆಂಬ ಓಯಸಿಸ್’ಗೆ ತಲುಪಲು ಬೇಕಾದ ಊರುಗೋಲಿನಂತೆ ಆಸರೆಯಾಯಿತು.

ಕುವೈಟಿನಲ್ಲಿ ಈ ಹಿಂದಿನಿಂದಲೂ ವಿಸಾ, ಪಾಸ್ಫೋರ್ಟ್ ಮತ್ತು ಉದ್ಯೋಗಗಳಿಲ್ಲದೆ ಸಂಕಷ್ಟದಲ್ಲಿರುವ ಅನಿವಾಸಿಗಳಿಗೆ ಯಾವುದೇ ಜಾತಿ, ಧರ್ಮ, ಪ್ರಾದೇಶಿಕತೆಯ ಬೇಧವಿಲ್ಲದೆ ಸಮಸ್ಯೆಗೆ ಪರಿಹಾರ ಒದಗಿಸುವಲ್ಲಿ ಇಂಡಿಯನ್ ಸೋಶಿಯಲ್ ಫೋರಂ ಕುವೈಟ್‌ ಮುಂಚೂಣಿಯಲ್ಲಿದೆ.

ಭಾರತೀಯ ರಾಯಭಾರ ಕಚೇರಿಯು(Indian Embassy ) ಕ್ಷಮಾದಾನ ನಿಮಿತ್ತ ಅನಿವಾಸಿಗಳಿಗೆ ಸರಿಯಾದ ಮಾಹಿತಿಯನ್ನು ನೀಡುವ ಸಲುವಾಗಿ ತನ್ನ ವೆಬ್ಸೈಟಿನಲ್ಲಿ ಅಧಿಕೃತವಾಗಿ ಘೋಷಿಸಿರುವ ಹೆಲ್ಪ್ ಲೈನ್ ಪಟ್ಟಿಯಲ್ಲಿ ISF ಸ್ವಯಂಸೇವಕರ ಹೆಸರನ್ನುಸೇರಿಸಿತ್ತು. ಎಪ್ರಿಲ್ 16ರಿಂದ 20ರ ಅಮ್ನೆಸ್ಟಿ ದಿನಗಳಲ್ಲಿ ಐಎಸ್ಎಫ್ ಸ್ವಯಂಸೇವಕರು ಭಾರತೀಯ ರಾಯಭಾರ ಕಛೇರಿಯ ಕೌಂಟರ್’ಗಳಲ್ಲಿ ಕುಳಿತು ಅನಧಿಕೃತ ನಿವಾಸಿಗಳಿಗೆ ಸೂಕ್ತಮಾರ್ಗದರ್ಶನ ಹಾಗೂದಾಖಲೆಗಳಿಗೆ ಸಹಾಯಮಾಡಿದರು.

ಹಾಗೆಯೇ, ಪ್ರಸಕ್ತ ಕುವೈಟ್ ಸರ್ಕಾರವು Covid-19ಅನ್ನು ನಿಯಂತ್ರಿಸುವ ಸಲುವಾಗಿ ಕುವೈಟ್ನಾದ್ಯಂತ ಸಂಜೆ 4 ರಿಂದಬೆಳಗ್ಗೆ 8 ರ ತನಕ ಕರ್ಫ್ಯೂ ಘೋಷಿಸಿದ್ದು ಹಾಗೂ ಪ್ರಮುಖ ಪ್ರದೇಶಗಳನ್ನು ಸಂಪೂರ್ಣವಾಗಿ ಲಾಕ್ಡೌನ್ ಮಾಡಿರುವುದರಿಂದ ಕೆಳವರ್ಗದ ಕಾರ್ಮಿಕರ ಸ್ಥಿತಿ ದಯನೀಯವಾಗಿದೆ. ಈ ನಿಟ್ಟಿನಲ್ಲಿ ದಾನಿಗಳ ಸಹಾಯದಿಂದ ISF ಸದಸ್ಯರು ಈಗಾಗಲೇ ಆಹಾರದ ಕಿಟ್ಗಳನ್ನುಕುವೈಟಿನ ವಿವಿಧ ಪ್ರದೇಶಗಳಲ್ಲಿ ವಿತರಿಸುವಲ್ಲೂ ಸಫಲರಾಗಿದ್ದಾರೆ.

Get real time updates directly on you device, subscribe now.