ಜೂ.16: ಕುವೈಟ್-ಬೆಂಗಳೂರು ಮೊದಲ ವಿಮಾನ ಆಗಮನ

ಅನಿವಾಸಿ ಕನ್ನಡಿಗ ಮಂಜೇಶ್ವರ ಮೋಹನದಾಸ ಕಾಮತ್ ಕೇಂದ್ರ ಸಚಿವ ಸದಾನಂದ ಗೌಡರಿಗೆ ಈ ಬಗ್ಗೆ ಧನ್ಯವಾದ ಹೇಳಿ ಟ್ವೀಟ್ ಮಾಡಿದ್ದಾರೆ.

ಕೇರಳ-ಕುವೈಟ್ ಮುಸ್ಲಿಂ ಅಸೋಶಿಯೇಷನ್ ಕರ್ನಾಟಕ ಶಾಖೆ, ಅನಿವಾಸಿ ಕನ್ನಡಿಗ ಮಂಜೇಶ್ವರ ಮೋಹನದಾಸ ಕಾಮತ್ ಈ ಬಗ್ಗೆ ಮನವಿ ಮಾಡಿಕೊಂಡಿದ್ದರು.

ಕರಾವಳಿ ಕರ್ನಾಟಕ ವರದಿ
ಮಂಗಳೂರು: ‘ವಂದೇ ಭಾರತ್’ ಮಿಷನ್ ಅಡಿ ಜೂ.16ರಂದು ಕುವೈಟ್‌ನಿಂದ ಬೆಂಗಳೂರಿಗೆ ಮೊದಲ ವಿಮಾನ(IX1894) ಆಗಮಿಸಲಿದೆ. ಕುವೈಟ್ ಸ್ಥಳೀಯ ಸಮಯ14:20ಕ್ಕೆ ಕುವೈಟ್ನಿಂದ ಹೊರಟು ಬೆಂಗಳೂರಿಗೆ ಭಾರತೀಯ ಸಮಯ 21:50ಕ್ಕೆ ವಿಮಾನ ನಿಲ್ದಾಣ ತಲುಪಲಿದೆ.

ಕೇರಳ-ಕುವೈಟ್ ಮುಸ್ಲಿಂ ಅಸೋಶಿಯೇಷನ್ ಕರ್ನಾಟಕ ಶಾಖೆ, ಅನಿವಾಸಿ ಕನ್ನಡಿಗ ಮಂಜೇಶ್ವರ ಮೋಹನದಾಸ ಕಾಮತ್ ಅವರು ಕುವೈಟ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಈ ಬಗ್ಗೆ ಮನವಿ ಮಾಡಿಕೊಂಡಿದ್ದರು. ಬೆಂಗಳೂರು ಅಥವಾ ಮಂಗಳೂರಿಗೆ ಕುವೈಟ್‌ನಿಂದ ವಿಮಾನ ವ್ಯವಸ್ಥೆ ಮಾಡಿಕೊಡುವ ಬಗ್ಗೆ ಕೇಂದ್ರ ಸಚಿವ ಸದಾನಂದ ಗೌಡರಿಗೂ ಮನವರಿಕೆ ಮಾಡಿಕೊಡಲಾಗಿತ್ತು. ಈ ಹಿನ್ನೆಲೆಯಲ್ಲಿ ಜೂ.16ರಂದು ಕುವೈಟ್‌ನಿಂದ ಬೆಂಗಳೂರಿಗೆ ವಿಮಾನ ಆಗಮಿಸಲಿದ್ದು, ಮೋಹನದಾಸ ಕಾಮತ್ ಅವರು ಕೇಂದ್ರ ಸಚಿವ ಸದಾನಂದ ಗೌಡರಿಗೆ ಈ ಬಗ್ಗೆ ಧನ್ಯವಾದ ಹೇಳಿ ಟ್ವೀಟ್ ಮಾಡಿದ್ದಾರೆ.

ಕುವೈಟ್‌ನಲ್ಲಿ ಕರಾವಳಿಯ ಮುವತ್ತೈದು ಸಾವಿರಕ್ಕೂ ಅಧಿಕ ಮಂದಿ ಇದ್ದಾರೆ. ರಾಜ್ಯದ ಅನೇಕ ಮಂದಿ ಕುವೈಟ್‌ನಲ್ಲಿ ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೆಲಸ ಇಲ್ಲದೇ, ವೇತನ ಇಲ್ಲದೇ ಪರದಾಡುವಂತಾಗಿದೆ. ಕೋವಿಡ್ ಸೋಂಕಿನಿಂದ ಮೃತಪಟ್ಟ ರಾಜ್ಯದ ಕೆಲವರ ಶವಗಳನ್ನು ಕೂಡ ಊರಿಗೆ ತರುವುದು ಸಾಧ್ಯವಾಗಿಲ್ಲ. ಕಡಿಮೆ ಸಂಬಳಕ್ಕೆ ಕುವೈಟ್‌ನಲ್ಲಿ ದುಡಿಯುತ್ತಿರುವ ಕಾರ್ಮಿಕರ ಸ್ಥಿತಿ ಶೋಚನೀಯವಾಗಿದೆ. ಗರ್ಭಿಣಿಯರು, ಆರೋಗ್ಯ ಸಮಸ್ಯೆ ಹೊಂದಿರುವವರು ಒಮ್ಮೆ ಕುವೈಟ್‌ನಿಂದ ಮಾತೃಭೂಮಿ ಭಾರತಕ್ಕೆ ಮರಳಿದರೆ ಸಾಕೆನ್ನುವ ಧಾವಂತದಲ್ಲಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಕುವೈಟ್‌ನಿಂದ ಭಾರತೀಯ ನಾಗರಿಕರನ್ನು ಸರಕಾರ ಕರೆತರುತ್ತದೆ ಎಂಬ ನಿರೀಕ್ಷೆಗಳು ಅಲ್ಲಿ ಅತಂತ್ರರಾಗಿರುವ ಜನರದ್ದಾಗಿವೆ,

ಕುವೈಟ್ ಮೇಲೆ ಇರಾಕ್ ದಾಳಿ ಸಂದರ್ಭ ಭಾರತೀಯರನ್ನು ಭಾರತ ಸರಕಾರ ಏರ್‌ಲಿಫ್ಟ್ ಮಾಡಿದಂತೆ ಕರೆತರುತ್ತದೆ ಎಂಬ ನಿರೀಕ್ಷೆ ಜನರದ್ದಾಗಿತ್ತು. ಆದರೆ ಭಾರತ ಸರಕಾರ ಅಲ್ಲಿಂದ ನಮ್ಮವರನ್ನು ಕರೆತರುವಲ್ಲಿ ನಿಧಾನಗತಿಯಲ್ಲಿದ್ದು, ದಿನೇ ದಿನೇ ಅಲ್ಲಿರುವ ಭಾರತೀಯರ ಬದುಕು ಶೋಚನೀಯವಾಗುತ್ತಿದೆ.

Get real time updates directly on you device, subscribe now.