ಉದ್ಯಮಿ ಬಿ. ಆರ್. ಶೆಟ್ಟಿ ಆಸ್ತಿ ಮುಟ್ಟುಗೋಲಿಗೆ ದುಬೈ ನ್ಯಾಯಾಲಯ ಆದೇಶ
ಕ್ರೆಡಿಟ್ ಯುರೋಪ್ ಬ್ಯಾಂಕ್ ಆಮ್ಸ್ಟರ್‌ಡ್ಯಾಮ್ ನಲ್ಲಿ ಪ್ರಧಾನ ಕಚೇರಿ ಹೊಂದಿದ್ದು, ಒಂಬತ್ತು ದೇಶಗಳಲ್ಲಿ ವಹಿವಾಟು ನಡೆಸುತ್ತಿದೆ.
ಬಿ.ಆರ್. ಶೆಟ್ಟರಿಗೆ ಸಾಮಾನ್ಯ ಜೀವನ ವೆಚ್ಚಗಳು ಮತ್ತು ಕಾನೂನು ಸಲಹೆ ಮತ್ತು ಪ್ರಾತಿನಿಧ್ಯಕ್ಕಾಗಿ ಸಮಂಜಸವಾದ ಮೊತ್ತದ ಮೇಲೆ ಪ್ರತಿ ವಾರ $ 7,000 ವರೆಗೆ ವೆಚ್ಚ ಮಾಡಲು ನ್ಯಾಯಾಲಯ ಅನುಮತಿಸಿದೆ.
ಕರಾವಳಿ ಕರ್ನಾಟಕ ವರದಿ
ದುಬೈ: ಎನ್‌ಎಂಸಿ ಹೆಲ್ತ್ ಸಂಸ್ಥಾಪಕ ಬಿ.ಆರ್.ಶೆಟ್ಟಿಯವರಿಗೆ ಸೇರಿದ ಜಗತ್ತಿನ ಹಲವೆಡೆ ಇರುವ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ದುಬೈ ನ್ಯಾಯಾಲಯ ಆದೇಶಿಸಿದೆ.
8 ಮಿಲಿಯನ್ ಡಾಲರ್‌ಗೂ ಅಧಿಕ ಸಾಲ ಮರುಪಾವತಿಯಾಗದ ಹಿನ್ನೆಲೆಯಲ್ಲಿ ಆಸ್ತಿ ಮುಟ್ಟುಗೋಲಿಗೆ ಆದೇಶಿಸುವಂತೆ ಬ್ಯಾಂಕ್ ಕೋರ್ಟ್ ಮೊರೆ ಹೋಗಿತ್ತು. ಕ್ರೆಡಿಟ್ ಯುರೋಪ್ ಬ್ಯಾಂಕ್ (ದುಬೈ) ಪರವಾಗಿ ಈ ಆದೇಶ ಜಾರಿಯಾಗಿದೆ. ಕ್ರೆಡಿಟ್ ಯುರೋಪ್ ಬ್ಯಾಂಕ್ ಆಮ್ಸ್ಟರ್‌ಡ್ಯಾಮ್ ನಲ್ಲಿ ಪ್ರಧಾನ ಕಚೇರಿ ಹೊಂದಿದ್ದು, ಒಂಬತ್ತು ದೇಶಗಳಲ್ಲಿ ವಹಿವಾಟು ನಡೆಸುತ್ತಿದೆ.
ಬಿ.ಆರ್. ಶೆಟ್ಟರಿಗೆ ಸಾಮಾನ್ಯ ಜೀವನ ವೆಚ್ಚಗಳು ಮತ್ತು ಕಾನೂನು ಸಲಹೆ ಮತ್ತು ಪ್ರಾತಿನಿಧ್ಯಕ್ಕಾಗಿ ಸಮಂಜಸವಾದ ಮೊತ್ತದ ಮೇಲೆ ಪ್ರತಿ ವಾರ $ 7,000 ವರೆಗೆ ಖರ್ಚು ಮಾಡಲು ನ್ಯಾಯಾಲಯ ಅನುಮತಿಸಿದೆ.
ದಾವೆ ಸಂಬಂಧ ಪ್ರತಿಕ್ರಿಯೆ ನೀಡಲು ಕ್ರೆಡಿಟ್ ಯುರೋಪ್ ಬ್ಯಾಂಕ್ ನಿರಾಕರಿಸಿದೆ.
ಬಿ. ಆರ್. ಶೆಟ್ಟಿ 1975 ರಲ್ಲಿ ಎನ್‌ಎಂಸಿ ಹೆಲ್ತ್‌ಕೇರ್ ಸ್ಥಾಪಿಸಿದ್ದರು. ಅವರ ಹೆಲ್ತ್‌ಕೇರ್ ಸಂಸ್ಥೆಯಲ್ಲಿ 2,000 ವೈದ್ಯರು ಮತ್ತು 20,000 ಇತರ ಸಿಬ್ಬಂದಿಗಳಿದ್ದಾರೆ. ಕಂಪನಿ ಲಂಡನ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಪಟ್ಟಿ ಮಾಡಲ್ಪಟ್ಟಿದೆ.