ಲೆಬನಾನ್: ಬಂದರು ನಗರ ಸ್ಫೋಟದಲ್ಲಿ 70ಕ್ಕೂ ಅಧಿಕ ಮಂದಿ ಮೃತ್ಯು; 4000ಕ್ಕೂ ಅಧಿಕ ಜನರಿಗೆ ಗಾಯ

3.5ತೀವೃತೆಯ ಭೂಕಂಪನಕ್ಕೆ ಸಮವಾದ ಸ್ಫೋಟ ಇದು ಎಂದು ಜರ್ಮನಿ ಭೂವಿಜ್ನಾನಿಗಳು ಹೇಳಿದ್ದಾರೆ.

2,750 ಟನ್ ಅಮೋನಿಯಂ ನೈಟ್ರೇಟ್ ದಾಸ್ತಾನಿಗೆ ಬೆಂಕಿ ತಗುಲಿದ್ದು, ಈ ದುರಂತಕ್ಕೆ ಕಾರಣ.

ಕರಾವಳಿ ಕರ್ನಾಟಕ ವರದಿ
ಲೆಬನಾನ್: ರಾಜಧಾನಿ ‍ಬೈರೂತ್‌ನಲ್ಲಿ ಮಂಗಳವಾರ ಸಂಭವಿಸಿದ ಭಾರೀ ಸ್ಪೋಟದಲ್ಲಿ ಎಪ್ಪತ್ತಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಹಲವು ದೇಹಗಳು ಅವಶೇಷಗಳಡಿ ಸಿಲುಕಿಕೊಂಡಿವೆ. 4000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಲಕ್ಷಾಂತರ ಕಟ್ಟಡಗಳು ಕುಸಿದು ಬಿದ್ದಿದ್ದು, ಬಂದರು ನಗರಿಯಲ್ಲಿ ದಟ್ಟ ಹೊಗೆ ಕಾರ್ಮೋಡ ವ್ಯಾಪಿಸಿದೆ. ಲೆಬನಾನ್ ಪ್ರಧಾನಿ ಹಸನ್ ದಿಯಾಬ್ ಅವರು ಮಿತೃ ದೇಶಗಳಿಗೆ ಸಹಾಯಕ್ಕೆ ಮೊರೆ ಇಟ್ಟಿದ್ದಾರೆ. ಕುವೈಟ್ ಔಷಧ ಸಾಮಗ್ರಿಗಳನ್ನು, ಇತರ ಅವಶ್ಯಕ ವಸ್ತುಗಳ ನೆರವನ್ನು ತಕ್ಷಣ ಕಳಿಸಿದೆ.

3.5ತೀವೃತೆಯ ಭೂಕಂಪನಕ್ಕೆ ಸಮವಾದ ಸ್ಫೋಟ ಇದು ಎಂದು ಜರ್ಮನಿ ಭೂವಿಜ್ನಾನಿಗಳು ಹೇಳಿದ್ದಾರೆ. ಸೈಪ್ರಸ್‌ನಲ್ಲಿ ಕೂಡ ಸದ್ದು ಕೇಳಿಸಿದ್ದು, ಸ್ಫೋಟದ ಅನುಭವವಾಗಿದೆ. ಇನ್ನೂರು ಕಿ.ಮೀ ದೂರದ ತನಕ ಸದ್ದು ಕೇಳಿಸಿತ್ತು. 2,750 ಟನ್ ಅಮೋನಿಯಂ ನೈಟ್ರೇಟ್ ದಾಸ್ತಾನಿಗೆ ಬೆಂಕಿ ತಗುಲಿದ್ದು, ಈ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ.

ಬೆಂಕಿ ಹತ್ತಿ ಉರಿಯುತ್ತಿದ್ದ ಕಟ್ಟಡಗಳು, ಕಾರುಗಳು, ರಕ್ಷಣೆಗೆ ಬೊಬ್ಬಿಡುತ್ತಿದ್ದ ಜನರು, ಗಾಯಾಳುಗಳನ್ನು ಸಾಗಿಸುತ್ತಿದ್ದ ಅಂಬುಲೆನ್ಸ್‌ಗಳು, ದೇಶಾದ್ಯಂತ ಗಾಯಾಳುಗಳಿಂದ ತುಂಬಿದ ಆಸ್ಪತ್ರೆಗಳು, ಹೆಲಿಕ್ಯಾಪ್ಟರ್‌ಗಳಿಂದ ಸಮರೋಪಾದಿ ರಕ್ಷಣಾ ಕಾರ್ಯಾಚರಣೆ ಪರಿಸ್ಥಿತಿಯ ಭೀಕರತೆಯನ್ನು ತೋರಿಸುತ್ತಿದ್ದವು.

ಕೆಲವು ಸಮಯದ ಹಿಂದೆ ಹಡಗೊಂದರಿಂದ ವಶಪಡಿಸಿಕೊಂಡು ದಾಸ್ತಾನು ಇರಿಸಲಾಗಿದ್ದ ಕಟ್ಟಡದಲ್ಲಿ ನಡೆದ ಅಗ್ನಿ ಅನಾಹುತವೇ ಈ ಸ್ಫೋಟಕ್ಕೆ ಕಾರಣ ಎನ್ನಲಾಗುತ್ತಿದೆ.

Get real time updates directly on you device, subscribe now.