ಫೇಸ್‌ಬುಕ್, ವಾಟ್ಸ್ಯಾಪ್ ಚಾಟಿಂಗ್: ದಂಪತಿ ಆತ್ಮಹತ್ಯೆಯಲ್ಲಿ ಅಂತ್ಯ

ಸೋಮವಾರಪೇಟೆಯ ಅನೂಪ್ (32) ಹಾಗೂ ಸೌಮ್ಯಾ (23) ಸೋಮವಾರ ಆತ್ಮಹತ್ಯೆಗೈದವರು

A 23-year-old woman and her 28-year-old husband committed suicide after they fought over the former’s alleged Facebook addiction in their north Bengaluru residence on Monday morning

ಬೆಂಗಳೂರು: ವಾಟ್ಸ್ಆ್ಯಪ್ ಹಾಗೂ ಫೇಸ್ಬುಕ್ ನಲ್ಲಿ ಗೆಳತಿಯರ ಜೊತೆ ನಿರಂತರ ಚಾಟ್ ಮಾಡುತ್ತಿದ್ದ ಬಗ್ಗೆ ಪತ್ನಿ ಪ್ರಶ್ನಿಸಿದ್ದು, ಈ ಬಗ್ಗೆ ನಡೆದ ಜಗಳ ಅವರಿಬ್ಬರ ಆತ್ಮಹತ್ಯೆಯಲ್ಲಿ ಅಂತ್ಯವಾದ ಖೇದಕರ ಘಟನೆ ವರದಿಯಾಗಿದೆ.

ಸೋಮವಾರಪೇಟೆಯ ಅನೂಪ್ (32) ಹಾಗೂ ಸೌಮ್ಯಾ (23) ಸೋಮವಾರ ಆತ್ಮಹತ್ಯೆಗೈದವರು.
ಸೋಮವಾರ ಬೆಳಿಗ್ಗೆ ಮನೆಯಲ್ಲಿ ಯುವತಿಯೊಬ್ಬರ ಜತೆ ಅನೂಪ್ ಚಾಟ್ ಮಾಡುತ್ತಿರುವುದನ್ನು ನೋಡಿದ್ದ ಪತ್ನಿ ಸೌಮ್ಯ ಪ್ರಶ್ನಿಸಿದಾಗ ದಂಪತಿ ನಡುವೆ ವಾಗ್ವಾದ ನಡೆದಿತ್ತು.

ಸೌಮ್ಯ ಈ ಸಂದರ್ಭ ಅಳುತ್ತಾ ಕೋಣೆಗೆ ಹೋಗಿದ್ದು, ಅಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೈದಿದ್ದಾರೆ. ಸ್ವಲ್ಪ ಸಮಯದ ಬಳಿಕ ಇದನ್ನು ನೋಡಿದ್ದ ಅನೂಪ್, ಮತ್ತೊಂದು ಕೊಠಡಿಗೆ ಹೋಗಿ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮದುವೆ ಆದಾಗಿನಿಂದಲೂ ಗಂಡ-ಹೆಂಡತಿ ನಡುವೆ ಆಗಾಗ ಜಗಳವಾಗುತ್ತಿತ್ತು ಎನ್ನಲಾಗಿದ್ದು, ಪೊಲೀಸರು ಎಲ್ಲ ವಿಷಯಗಳ ಬಗ್ಗೆಯೂ ತನಿಖೆ ನಡೆಸಲಿದ್ದಾರೆ.

ಪೀಣ್ಯ ಕೈಗಾರಿಕಾ ಪ್ರದೇಶದ ಕಾರ್ಖಾನೆ ಉದ್ಯೋಗಿ ಅನೂಪ್, ಮೂರು ವರ್ಷ ಹಿಂದೆ ಸೌಮ್ಯ ಅವರನ್ನು ಮದುವೆ ಆಗಿದ್ದು, ಬಾಡಿಗೆ ಮನೆಯಲ್ಲಿ ದಂಪತಿ ವಾಸವಿದ್ದರು. ಎರಡು ವರ್ಷದ ಗಂಡು ಮಗುವನ್ನು ಸೌಮ್ಯ ಅವರ ತವರು ಮನೆಯಲ್ಲಿ ಬಿಟ್ಟಿದ್ದರು.
ದಂಪತಿ ನಡುವೆ ಜಗಳ ನಡೆಯುತ್ತಿದ್ದಾಗ ಸೋಮವಾರಪೇಟೆಯಲ್ಲಿರುವ ಸಹೋದರನಿಗೆ ಕರೆ ಮಾಡಿದ್ದ ಸೌಮ್ಯ ತನ್ನನ್ನು ತಕ್ಷಣ ಕರೆದುಕೊಂಡು ಹೋಗಬೇಕು ಇಲ್ಲದಿದ್ದರೆ ನಾನು ಸಾಯುತ್ತೇನೆ ಎಂದಿದ್ದರು. ಸಹೋದರ ತಕ್ಷಣ ಬೆಂಗಳೂರಿನಲ್ಲಿರುವ ತಮ್ಮ ಸಂಬಂಧಿಕರಿಗೆ ಕರೆ ಮಾಡಿ ಮನೆಯ ಬಳಿ ಹೋಗುವಂತೆ ಹೇಳಿದ್ದರು. ಸಂಬಂಧಿಕರು ಹೋದಾಗ, ಮನೆಯ ಬಾಗಿಲು ಒಳಗಿನಿಂದ ಲಾಕ್ ಮಾಡಲಾಗಿತ್ತು. ಮಧ್ಯಾಹ್ನ 2 ಗಂಟೆಗೆ ಸಹೋದರನೇ ಮನೆಗೆ ಬಂದು ಹಿಂದಿನ ಕಿಟಕಿ ಬಳಿ ಹೋಗಿ ನೋಡಿದಾಗ ಆತ್ಮಹತ್ಯೆ ಬೆಳಕಿಗೆ ಬಂದಿತ್ತು.

Get real time updates directly on you device, subscribe now.