ರಾಜ್ಯದ ಅಭಿವೃದ್ಧಿಯ ಫಿಟ್‌ನೆಸ್‌ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದೇನೆ: ಕುಮಾರಸ್ವಾಮಿ

ಹಮ್‌ ಫಿಟ್‌ ತೊ ಇಂಡಿಯಾ ಫಿಟ್‌ ಹ್ಯಾಷ್‌ಟ್ಯಾಗ್‌ನಲ್ಲಿ ಮೋದಿ ಟ್ವೀಟ್

Hours after Prime Minister Narendra Modi challenged Karnataka Chief Minister HD Kumaraswamy to take up the fitness challenge, the latter took to twitter to take a sly jibe saying he is “more concerned about the fitness of his state” and sought his support for the same.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಒಡ್ಡಿರುವ ಫಿಟ್ನೆಸ್‌ ಸವಾಲಿಗೆ ಪ್ರತಿಕ್ರಿಯಿಸಿರುವ ಕರ್ನಾಟಕ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯದ ಅಭಿವೃದ್ಧಿಯ ಫಿಟ್ನೆಸ್‌ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದೇನೆ ಎಂದು ಹೇಳಿದ್ದಾರೆ.

ಪ್ರಿಯ ನರೇಂದ್ರ ಮೋದಿಯವರೇ, ನನ್ನ ಆರೋಗ್ಯದ ಬಗೆಗಿನ ಕಾಳಜಿಗೆ ಕೃತಜ್ಞ. ದೈಹಿಕ ಫಿಟ್ನೆಸ್‌ ಎಲ್ಲರಿಗೂ ಬಹಳ ಮುಖ್ಯ ಎಂದು ನಾನು ನಂಬಿದ್ದೇನೆ. ಅದನ್ನು ಬೆಂಬಲಿಸುತ್ತೇನೆ. ಯೋಗ ಮತ್ತು ಟ್ರೆಡ್‌ಮಿಲ್‌ ನನ್ನ ನಿತ್ಯ ವ್ಯಾಯಾಮದ ಭಾಗವಾಗಿವೆ. ನನ್ನ ರಾಜ್ಯದ ಅಭಿವೃದ್ಧಿ ಫಿಟ್ನೆಸ್‌ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದೇನೆ. ಅದಕ್ಕಾಗಿ ನಿಮ್ಮ ಬೆಂಬಲ ಕೋರುತ್ತೇನೆ’ ಎಂದು ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದಾರೆ.

ಹಮ್‌ ಫಿಟ್‌ ತೊ ಇಂಡಿಯಾ ಫಿಟ್‌ ಹ್ಯಾಷ್‌ಟ್ಯಾಗ್‌ನಲ್ಲಿ ‘ನನ್ನ ಬೆಳಿಗ್ಗಿನ ವ್ಯಾಯಾಮ ಹೀಗಿದೆ. ಯೋಗದ ಜತೆಗೆ, ನಿಸರ್ಗದ ಪಂಚತತ್ವಗಳಾದ ಪೃಥ್ವಿ, ಜಲ, ಅಗ್ನಿ, ವಾಯು ಮತ್ತು ಆಕಾಶದಿಂದ ಸ್ಫೂರ್ತಿ ಪಡೆದ ನಡಿಗೆ ಅಭ್ಯಾಸವನ್ನೂ ಮಾಡುತ್ತೇನೆ. ಇದು ಉಲ್ಲಾಸದ ಜತೆಗೆ ಪುನಶ್ಚೇತನಕ್ಕೂ ಕಾರಣವಾಗುತ್ತದೆ. ನಾನು ಪ್ರಾಣಾಯಾಮವನ್ನೂ ಅಭ್ಯಾಸ ಮಾಡುತ್ತೇನೆ ಎಂದು ಮೋದಿ ಟ್ವೀಟ್ ಮಾಡಿದ್ದರು.

ಮೋದಿ ಅವರು ಕುಮಾರಸ್ವಾಮಿಗೆ ಫಿಟ್ನೆಸ್ ಸವಾಲು ಒಡ್ಡಿರುವುದು ಚರ್ಚೆಗೆ ಗ್ರಾಸವಾಗಿದೆ.

Get real time updates directly on you device, subscribe now.