ಮಂಗಳೂರು ಸೇರಿದಂತೆ ರೆಡ್ ಝೋನ್‌ಗಳಲ್ಲಿ ಲಾಕ್‌ಡೌನ್ ಮುಂದುವರಿಕೆ: ಸಚಿವ ಡಾ. ಸುಧಾಕರ್ ಸುಳಿವು

ರೆಡ್ ಝೋನ್ ಎಂದು ಗುರುತಿಸಿರುವ ಈ ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್‌ ಡೌನ್ ಮುಂದುವರಿಯುವ ಸಾಧ್ಯತೆ ಇದೆ.

ಬೆಂಗಳೂರು: ಏಪ್ರಿಲ್ 14 ರ ಬಳಿಕ ದೇಶದಾದ್ಯಂತ ಲಾಕ್‌ ಡೌನ್ ಮುಂದುವರಿಯುವುದೇ ಅಥವಾ ಹಿಂತೆಗೆಯಲ್ಪಡುವುದೇ ಎಂಬ ಚರ್ಚೆ ಇದೀಗ ಆರಂಭಗೊಂಡಿದ್ದು ಕೆಲವು ರಾಜ್ಯಗಳು ಲಾಕ್‌ ಡೌನ್ ಮುಂದುವರಿಯಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿವೆ. ಆದರೆ ಹಲವು ರಾಜ್ಯಗಳು ಲಾಕ್‌ ಡೌನ್ ಅನ್ನು ಹಂತಗಳಲ್ಲಿ ಹಿಂದೆಗೆಯುವ ಕುರಿತು ಸೂಚನೆ ನೀಡಿವೆ.

ಇಂಡಿಯಾ ಟುಡೇ ಈ ಕುರಿತು ನಡೆಸಿದ ಚರ್ಚೆಯಲ್ಲಿ ಬಾಗವಹಿಸಿದ್ದ ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ರಾಜ್ಯದಲ್ಲಿ ಹಂತಹಂತವಾಗಿ ಲಾಕ್‌ ಡೌನ್ ಸಡಿಲಿಸುವ ಸುಳಿವು ನೀಡಿದ್ದಾರೆ. ಆದರೆ ರಾಜ್ಯದಲ್ಲಿ ರೆಡ್ ಝೋನ್ ಎಂದು ಪರಿಗಣಿಸಲಾಗಿರುವ ಪ್ರದೇಶಗಳಲ್ಲಿ ಸಂಪೂರ್ಣ ಲಾಕ್‌ ಡೌನ್ ಮುಂದುವರಿಯಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದಲ್ಲಿ ಬೆಂಗಳೂರಿನಲ್ಲಿ 45 ಪಾಸಿಟಿ ಕೇಸ್‌ಗಳಿದ್ದು, ಬೀದರ್ 10, ಮೈಸೂರು 35 ಮತ್ತು ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದಗಳಲ್ಲಿ ತಲಾ 8 ಪಾಸಿಟಿವ್ ಕೇಸ್‌ಗಳಿವೆ. ಈ ಜಿಲ್ಲೆಗಳನ್ನು ಈಗಾಗಲೇ ಕೇಂದ್ರ ಸರ್ಕಾರ ರೆಡ್ ಝೋನ್ ಎಂದು ಗುರುತಿಸಿದ್ದು ಈ ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್‌ ಡೌನ್ ಮುಂದುವರಿಯುವ ಸಾಧ್ಯತೆ ಇದೆ.

ಲಾಕ್‌ ಡೌನ್ ಮುಂದುವರಿಸುವ ಕುರಿತು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ಸಲಹೆ ಕೇಳಿದ್ದು ದೇಶದಾದ್ಯಂತ ರೆಡ್ ಝೋನ್ ಎಂದು ಗುರುತಿಸಲಾಗಿರುವ ಸುಮಾರು 70 ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್‌ಡೌನ್ ಮುಂದುವರಿಯುವುದು ಖಚಿತವಾಗಿದ್ದು ಉಳಿದ ಜಿಲ್ಲೆಗಳ ಕುರಿತು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ತಜ್ಞರ ಸಲಹೆ ಪಡೆದು ನಿರ್ಧಾರಕ್ಕೆ ಬರಲಿವೆ ಎನ್ನಲಾಗಿದೆ.

Get real time updates directly on you device, subscribe now.