ಕರಾವಳಿಯಲ್ಲಿ ‘ಈದುಲ್ ಫಿತ್ರ್’ ಸರಳ ಆಚರಣೆ

ಕರಾವಳಿ ಹೊರತುಪಡಿಸಿ ರಾಜ್ಯದ ಇತರೆಡೆ ಸೋಮವಾರ ಈದ್ ಉಲ್ ಫಿತ್ರ್ ಹಬ್ಬ

ಈದ್ ಹೊಸ ಬಟ್ಟೆ ಖರೀದಿಗೆ ವ್ಯಯಿಸುವ ಹಣವನ್ನು ಮುಸ್ಲಿಮರು ಬಡವರಿಗೆ ನೀಡಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ಕರಾವಳಿಯನ್ನು ಹೊರತುಪಡಿಸಿ ರಾಜ್ಯದ ಇತರೆಡೆ ಸೋಮವಾರ ಈದ್ ಉಲ್ ಫಿತ್ರ್ ಹಬ್ಬ ಆಚರಿಸಲಾಗುತ್ತದೆ. ದಕ್ಢಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಹಾಸನ, ಚಿಕ್ಕಮಗಳೂರಿನಲ್ಲಿ ಮಾತ್ರ ಆದಿತ್ಯವಾರ ಈದ್ ಹಬ್ಬ ಆಚರಿಸಲಾಗುತ್ತದೆ. ಕರ್ನಾಟಕ ಚಂದ್ರದರ್ಶನ ಸಮಿತಿ ಸಭೆ ಬೆಂಗಳುರಿನಲ್ಲಿ ನಡೆದಿದ್ದು ಈ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಗಿದೆ. ರಾಜ್ಯದ ಯಾವುದೇ ಭಾಗದಲ್ಲಿ ಶವ್ವಾಲ್ ತಿಂಗಳ ಚಂದ್ರದರ್ಶನ ಆಗಿಲ್ಲ ಎಂದು ಸಮಿತಿ ಮುಖ್ಯಸ್ಥ ಮಕ್ಸೂದ್ ಇಮ್ರಾನ್ ತಿಳಿಸಿದ್ದಾರೆ.

ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಹಬ್ಬದ ಬಟ್ಟೆ ಖರೀದಿಯಿಂದಲೂ ದೂರವಿದ್ದು, ಸರಳವಾಗಿ ಮುಸ್ಲಿಮರು ಹಬ್ಬ ಆಚರಿಸಲು ನಿರ್ಧರಿಸಿರುವ ಕಾರಣ ಈದ್ ಹಬ್ಬದ ಸಂದರ್ಭ ಚುರುಕುಗೊಳ್ಳುವ ಖರೀದಿಯ ಸಡಗರ ಚೈತನ್ಯ ಮಾರುಕಟ್ಟೆಯಲ್ಲಿಲ್ಲ.

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮುಸ್ಲಿಮರು ಮನೆಯಲ್ಲೇ ಈದ್ ಉಲ್ ಫಿತ್ರ್ ವಿಶೇಷ ನಮಾಝ್ ಬಳಿಕ ಶುಭಾಶಯ ಕೋರಿ ಸರಳವಾಗಿ ಹಬ್ಬ ಆಚರಿಸಿದ್ದಾರೆ.

ಈದ್ ಹೊಸ ಬಟ್ಟೆ ಖರೀದಿಗೆ ವ್ಯಯಿಸುವ ಹಣವನ್ನು ಮುಸ್ಲಿಮರು ಬಡವರಿಗೆ ಅಗತ್ಯ ವಸ್ತುಗಳ ಖರೀದಿಗೆ ಅನುಕೂಲ ಕಲ್ಪಿಸುವ ದಿಸೆಯಲ್ಲಿ ನೀಡಿ ಕರಾವಳಿಯಾದ್ಯಂತ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.

Get real time updates directly on you device, subscribe now.