ವಿಮಾನದಲ್ಲಿ ಬಂದ ಸಚಿವ ಸದಾನಂದ ಗೌಡ ಕ್ವಾರಂಟೈನ್ಗೆ ಒಳಗಾಗದೇ ಮನೆಗೆ!

ನಾನು ಒಬ್ಬ ಮಂತ್ರಿ. ಆದ್ದರಿಂದ ನಾಗರಿಕರಿಗೆ ಅನ್ವಯವಾಗುವಂಥ ಕ್ವಾರಂಟೈನ್ ಮಾರ್ಗದರ್ಶಿ ಸೂತ್ರ ನನಗೆ ಅನ್ವಯವಾಗದು ಎಂದು ಸದಾನಂದ ಗೌಡ.

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ದೆಹಲಿಯಿಂದ ವಿಮಾನ ಮೂಲಕ ಬಂದ ಕೇಂದ್ರ ಸಚಿವ ಸದಾನಂದ ಗೌಡ ಕ್ವಾರಂಟೈನ್‌ಗೆ ಒಳಗಾಗದೇ ಮನೆಗೆ ತೆರಳಿದ ಬಗ್ಗೆ ತೀವೃ ಜನಾಕ್ರೋಶ ವ್ಯಕ್ತವಾಗಿದೆ.

ಸದಾನಂದ ಗೌಡ ಅವರು ವಿಮಾನ ನಿಲ್ದಾಣದಿಂದ ಕ್ವಾರಂಟೈನ್‌ಗೆ ಒಳಗಾಗದೇ ಸೀದಾ ಕಾರಿನಲ್ಲಿ ಮನೆಗೆ ತೆರಳಿದ ಸಂದರ್ಭ ಮಾಧ್ಯಮ ಪ್ರತಿನಿಧಿ ಅವರಿಗೆ ಫೋನ್ ಮೂಲಕ ಪ್ರಶ್ನೆ ಮಾಡಿದ್ದರು. ತಾನು ಸಚಿವನಾದ ಕಾರಣ ತನಗೆ ಕ್ವಾರಂಟೈನ್ ನಿಯಮ ಅನ್ವಯವಾಗದು ಎಂದು ಅವರು ಹೇಳಿದ್ದಾರೆ.

ಸದಾನಂದ ಗೌಡ ಅವರು ಕೋವಿಡ್ ಟೆಸ್ಟ್‌ ಮಾಡಿಸಿಕೊಂಡಿದ್ದು, ಟೆಸ್ಟ್‌ನಲ್ಲಿ ನೆಗೆಟಿವ್ ಬಂದಿರುವುದರಿಂದ ಅವರಿಗೆ ಇತರರಿಗೆ ಇರುವಂತೆ ಹೊಟೇಲ್ ಕ್ವಾರಂಟೈನ್ ಅಗತ್ಯವಿಲ್ಲ. ಅವರಿಗೆ ಮನೆಯಲ್ಲೇ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಲು ಅನುವು ಮಾಡಿಕೊಡಲಾಗಿದೆ ಎಂದು ಅವರ ಸಹಾಯಕ ವರದಿಗಾರರಿಗೆ ಹೇಳಿದ್ದಾರೆ.

ನಾನು ಒಬ್ಬ ಮಂತ್ರಿ. ಆದ್ದರಿಂದ ನಾಗರಿಕರಿಗೆ ಅನ್ವಯವಾಗುವಂಥ ಕ್ವಾರಂಟೈನ್ ಮಾರ್ಗದರ್ಶಿ ಸೂತ್ರ ನನಗೆ ಅನ್ವಯವಾಗದು ಎಂದು ಸದಾನಂದ ಗೌಡ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿರುವುದು ಜನಾಕ್ರೋಶ ಭುಗಿಲೇಳಲು ಕಾರಣವಾಗಿದೆ.

Get real time updates directly on you device, subscribe now.