ಸಿದ್ದರಾಮಯ್ಯ ವಿರುದ್ದ ಫೇಸ್‌ಬುಕ್‌ನಲ್ಲಿ ಅಶ್ಲೀಲ ಸಂದೇಶ: ಆರೋಪಿ ಸೆರೆ

ಮಹಿಳೆಯೋರ್ವರು ವೇದಿಕೆಯಲ್ಲಿ ಸಿದ್ದರಾಮಯ್ಯ ಅವರಿಗೆ ಮುತ್ತಿಟ್ಟ ಚಿತ್ರ ಬಳಸಿಕೊಂಡು ಆರೋಪಿ ಅಶ್ಲೀಲ ಸಂದೇಶ ಫೇಸ್‌ಬುಕ್ ಸಾಮಾಜಿಕ ಮಾಧ್ಯಮದ ಮೂಲಕ ಬಿತ್ತರಿಸಿದ್ದ.

ಸಿದ್ದರಾಮಯ್ಯ ತಮ್ಮಂಥವರಿಗೆ ಸ್ಫೂರ್ತಿ ಎಂಬ ಕಾರಣಕ್ಕೆ ಗೌರವ-ಪ್ರೀತಿಯ ದ್ಯೋತಕವಾಗಿ ನಾಲ್ಕು ವರ್ಷ ಹಿಂದೆ ತರಿಕೆರೆ ತಾ.ಪಂ ಸದಸ್ಯೆ ಕೆನ್ನೆಗೆ ಮುತ್ತಿಕ್ಕಿದ್ದರು.

ಕರಾವಳಿ ಕರ್ನಾಟಕ ವರದಿ
ಬಾದಾಮಿ: ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ವಿರುದ್ಧ ಫೇಸ್‌ಬುಕ್‌ನಲ್ಲಿ ಅಶ್ಲೀಲ ಸಂದೇಶ ಹಾಕಿದ ಆರೋಪದಲ್ಲಿ ಪೊಲೀಸರು ಯುವಕನೋರ್ವನನ್ನು ಬಂಧಿಸಿದ್ದಾರೆ.

ಖ್ಯಾಡ ಗ್ರಾಮದ ಸಂಗಪ್ಪ ಸಿದ್ರಾಮಣ್ಣನವರ ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಪಿಎಸ್ಸೈ ಪ್ರಕಾಶ ಬಣಕಾರ ಅವರು ತಿಳಿಸಿದ್ದಾರೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಮಹಿಳೆಯೋರ್ವರು ವೇದಿಕೆಯಲ್ಲಿ ಸಿದ್ದರಾಮಯ್ಯ ಅವರಿಗೆ ಮುತ್ತಿಟ್ಟ ಚಿತ್ರ ಬಳಸಿಕೊಂಡು ಆರೋಪಿ ಅಶ್ಲೀಲ ಸಂದೇಶ ಫೇಸ್‌ಬುಕ್ ಸಾಮಾಜಿಕ ಮಾಧ್ಯಮದ ಮೂಲಕ ಬಿತ್ತರಿಸಿದ್ದ.

ನಾಲ್ಕು ವರ್ಷ ಹಿಂದೆ ತರಿಕೆರೆ ತಾ.ಪಂ ಸದಸ್ಯೆ ಗಿರಿಜಾ ಅವರು ಸಿದ್ದರಾಮಯ್ಯ ಅವರು ರಾಜಕೀಯಕ್ಕೆ ಬರಲು ತಮ್ಮಂಥವರಿಗೆ ಸ್ಫೂರ್ತಿ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಅವರ ಮೇಲಿನ ಗೌರವ-ಪ್ರೀತಿಯ ದ್ಯೋತಕವಾಗಿ ಅವರ ಕೆನ್ನೆಗೆ ಮುತ್ತಿಕ್ಕಿದ್ದರು. ಸಿದ್ದರಾಮಯ್ಯ ಅವರನ್ನು ಕಂಡು ಖುಶಿಪಟ್ಟೆ ಎಂದು ಅಭಿಮಾನ ವ್ಯಕ್ತಪಡಿಸಿದ್ದರು.

ಆರೋಪಿ ಸಂಗಪ್ಪ ಮಹಾತ್ಮಾ ಗಾಂಧಿ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಸಿದ್ದರಾಮಯ್ಯ ಅವರ ಬಗ್ಗೆ ಅಶ್ಲೀಲ ಪೋಸ್ಟ್ ಮಾಡಿದ್ದ. ಈ ಪೇಜ್ ಅಡ್ಮಿನ್ ಯಾರು ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆರೋಪಿಯನ್ನು ತಹಶೀಲ್ದಾರ್ ಬಳಿ ಮುಚ್ಚಳಿಕೆ ಪತ್ರ ಬರೆಸಿಕೊಂಡು ಬಿಡುಗಡೆ ಮಾಡಲಾಗಿದೆ.

Get real time updates directly on you device, subscribe now.