ವ್ಯಾಯಾಮ ಮಾಡುವಾಗ ಮಾಸ್ಕ್ ಧರಿಸಿದರೆ ಶ್ವಾಸಕೋಶಕ್ಕೆ ಹಾನಿ
ಪಾರ್ಕ್‌ಗಳಲ್ಲಿ ವ್ಯಾಯಾಮ ಮಾಡುವ ಸಂದರ್ಭ ಮಾಸ್ಕ್ ಧರಿಸಿ ಜನ ಓಡಾಡುತ್ತಾರೆ. ಇಂಥವರಲ್ಲಿ ಶ್ವಾಸಕೋಶದ ಸಮಸ್ಯೆ ಇದ್ದರಂತೂ ಅಪಾಯ ನಿಶ್ಚಿತ
ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ಹೊರಾಂಗಣದಲ್ಲಿ, ಉದ್ಯಾನವನಗಳಲ್ಲಿ ವ್ಯಾಯಾಮ ಮಾಡುವಾಗ ಮಾಸ್ಕ್ ಧರಿಸುವುದರಿಂದ ಉಸಿರಾಟದ ಸಮಸ್ಯೆ, ತಲೆತಿರುಗುವಂಥ ಸಮಸ್ಯೆಗಳು ಎದುರಾಗುತ್ತವೆ. ಶ್ವಾಸಕೋಶಕ್ಕೆ ಹಾನಿಯಾಗುತ್ತದೆ. ಆದ್ದರಿಂದ ಓಡುವಾಗ ಮಾಸ್ಕ್ ಧರಿಸುವುದು ಸೂಕ್ತವಲ್ಲ ಎಂದು ಮಣಿಪಾಲ್ ಆಸ್ಪತ್ರೆಯ ವೈದ್ಯ ಡಾ. ಮನೋಹರ್ ಅವರು ಹೇಳಿದ್ದಾರೆ.
ಮಾಸ್ಕ್ ಧರಿಸುವುದರಿಂದ ಕೊರೋನಾ ತಡೆಗಟ್ಟಬಹುದು. ಆದರೆ ಮಾಸ್ಕ್ ಧರಿಸಿ ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಉತ್ತಮವಲ್ಲ. ಮನೆಯಲ್ಲೇ ವ್ಯಾಯಾಮ ಮಾಡುವುದು ಸರಿ ಎಂದು ವೈದ್ಯರು ಹೇಳಿದ್ದಾರೆ.
ಈಗಾಗಲೇ ಪಾರ್ಕ್‌ಗಳಲ್ಲಿ ವ್ಯಾಯಾಮ ಮಾಡುವ ಸಂದರ್ಭ ಮಾಸ್ಕ್ ಧರಿಸಿ ಜನ ಓಡಾಡುತ್ತಾರೆ. ಇಂಥವರಲ್ಲಿ ಶ್ವಾಸಕೋಶದ ಸಮಸ್ಯೆ ಇದ್ದರಂತೂ ಅಪಾಯ ನಿಶ್ಚಿತ ಎನ್ನಬಹುದಾಗಿದೆ. ವ್ಯಾಯಾಮ ಮಾಡುವಾಗ ಮಾಸ್ಕ್ ಧರಿಸುವುದರಿಂದ ನ್ಯುಮೋಥೊರಾಕ್ಸ್ ಅಥವಾ ಕುಸಿದ ಶ್ವಾಸಕೋಶ ಸಮಸ್ಯೆ ಎದುರಾಗುವ ಸಾಧ್ಯತೆಗಳಿವೆ ಎಂಡು ಶ್ವಾಸಕೋಶ ತಜ್ಞ ಡಾ.ರವೀಂದ್ರ ಮೆಹ್ತಾ ಎಚ್ಚರಿಸಿದ್ದಾರೆ.