ಟಿವಿ ಚಾನೆಲ್ ನಿರೂಪಕಿಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ

ಡಿಸೆಂಬರ್ ತಿಂಗಳಿನಿಂದ ಹಳೆ ಚಾಳಿ ಮುಂದುವರಿಸಿದ್ದು, ಬೇಸತ್ತ ನಿರೂಪಕಿ ನ್ಯಾಯ ಕೋರಿ ಕೆಂಗೇರಿ ಪೊಲೀಸ್ ಠಾಣೆಗೆ ದೂರಿದ್ದರು.

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ಸುದ್ದಿವಾಹಿನಿಯೊಂದರ ನಿರೂಪಕಿಯೋರ್ವರಿಗೆ ಯುವಕನೋರ್ವ ಲೈಂಗಿಕ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಕೆಂಗೇರಿ ಪೊಲೀಸರಿಗೆ ದೂರು ನೀಡಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೊರೋನಾ ಭೀತಿಯಲ್ಲಿ ಆರೋಪಿ, ಮೈಸೂರಿನ ಪ್ರವೀಣ್ ಎಂಬಾತನನ್ನು ಠಾಣಾ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ.

ಮಾಜಿ ಸಹೋದ್ಯೋಗಿಯಾಗಿದ್ದ ಆರೋಪಿ ಪ್ರವೀಣ್ ಸಿಮ್ ಬದಲಿಸಿ ನಿರೂಪಕಿಗೆ ಅಶ್ಲೀಲ ಸಂದೇಶಗಳನ್ನು ಕಳಿಸಿರುವುದು ಮೊಬೈಲ್ ಪರಿಶೀಲನೆ ಸಂದರ್ಭ ಬಯಲಾಗಿದೆ.

ಸುದ್ದಿವಾಹಿನಿಯಲ್ಲಿ ಉದ್ಯೋಗಿಯಾಗುವ ಮೊದಲು ಖಾಸಗಿ ಸಂಸ್ಥೆಯಲ್ಲಿದ್ದ ನಿರೂಪಕಿಗೆ ಆರೋಪಿ ಮದುವೆಯಾಗುವಂತೆ ಒತ್ತಾಯಿಸಿ ನಿತ್ಯ ಮೊಬೈಲ್ ಕರೆ ಮಾಡಿ ಕಿರುಕುಳ ನೀಡುತ್ತಿದ್ದ. ಈತನ ಕಿರುಕುಳ ಸಹಿಸಲಾಗದೇ ಯುವತಿ ಉದಯಗಿರಿ ಪೊಲೀಸರಿಗೆ ದೂರು ನೀಡಿದ್ದ ಸಂದರ್ಭ ಮತ್ತೆ ಹೀಗೆ ಮಾಡುವುದಿಲ್ಲ ಎಂದಿದ್ದ. ಡಿಸೆಂಬರ್ ತಿಂಗಳಿನಿಂದ ಮತ್ತೆ ಹಳೆ ಚಾಳಿ ಮುಂದುವರಿಸಿದ್ದು, ಬೇಸತ್ತ ನಿರೂಪಕಿ ನ್ಯಾಯ ಕೋರಿ ಕೆಂಗೇರಿ ಪೊಲೀಸ್ ಠಾಣೆಗೆ ದೂರಿದ್ದರು.

Get real time updates directly on you device, subscribe now.