ಯಡಿಯೂರಪ್ಪ ಬದಲಿಸಲು ಹೈಕಮಾಂಡ್ ಹೇಳಿದರೆ ಓಕೆ: ಬಸವನಗೌಡ ಯತ್ನಾಳ

ಯಡಿಯೂರಪ್ಪಗೆ 78ವರ್ಷ, ಅವರಿಗೆ ಟೆನ್ಶನ್ ಕೊಡೋಲ್ಲ. ಅಂಗಲಾಚುವ, ಬೆದರಿಸುವ ಅಥವಾ ಬ್ಲ್ಯಾಕ್ಮೇಲ್ ಮಾಡುವ ಅಗತ್ಯವೇ ನನಗಿಲ್ಲ

ನಾನು ಆಲ್ತು ಪಾಲ್ತು ರಾಜಕಾರಣಿಯಲ್ಲ. ಯಾರಿಗೂ ಬೇಡಿ ಮಂತ್ರಿಯಾಗುವ ಅಗತ್ಯವೇ ಇಲ್ಲ. ನಮಗೆ ನರೇಂದ್ರ ಮೋದಿ, ಅಮಿತ್ ಷಾ. ನಡ್ಡಾ ಅವರೇ ಹೈಕಮಾಂಡ್.

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ಉಮೇಶ್ ಕತ್ತಿ ಮನೆಯಲ್ಲಿ ಊಟ ಮಾಡಲು ಹೋಗಿದ್ದೆವು. ಸುಮ್ಮನೆ ಹರಟೆ ಹೊಡೆದಿದ್ದೇವೆ. ಯಾವುದೇ ಮಂತ್ರಿಗಿರಿ ಆಸೆಯೂ ಇಲ್ಲ. ಮುಂದೆಯೂ ನಾನು ಮಂತ್ರಿಯಾಗಲ್ಲ. ಹೈಕಮಾಂಡ್ ಬಯಸಿದರೆ ಮಾತ್ರ ಮಂತ್ರಿಯಾಗಬಲ್ಲೆ. ನಾನು ಆಲ್ತು ಪಾಲ್ತು ರಾಜಕಾರಣಿಯಲ್ಲ. ಯಾರಿಗೂ ಬೇಡಿ ಮಂತ್ರಿಯಾಗುವ ಅಗತ್ಯವೇ ಇಲ್ಲ. ನಮಗೆ ನರೇಂದ್ರ ಮೋದಿ, ಅಮಿತ್ ಷಾ. ನಡ್ಡಾ ಅವರೇ ಹೈಕಮಾಂಡ್. ಯಡಿಯೂರಪ್ಪ ನಮ್ಮ ಮುಖ್ಯಮಂತ್ರಿ ಅಷ್ಟೇ. ಯಡಿಯೂರಪ್ಪಗೆ 78ವರ್ಷ, ಅವರಿಗೆ ಟೆನ್ಶನ್ ಕೊಡೋಲ್ಲ ಎಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.

ಯಾವ ಅಸಮಾಧಾನವೂ ಇಲ್ಲ, ಬಂಡಾಯವೂ ಇಲ್ಲ. ಉಮೇಶ್ ಕತ್ತಿ ಮನೆಯಲ್ಲಿ ಮಾವು ತಿನ್ನಲು ಸೇರಿದ್ವಿ. ಯಾವುದೇ ಅಸಮಾಧಾನ ಇದ್ದರೂ ಮಾಧ್ಯಮದ ಮುಂದೆ ಹೇಳುವ ಯಾವುದೇ ಅಗತ್ಯವೂ ನನಗಿಲ್ಲ. ಹೈಕಮಾಂಡ್ ಎದುರು ಏನು ಹೇಳಬೇಕೋ ಅದನ್ನು ಹೇಳುತ್ತೇವೆ. ಇನ್ನು ಮುಂದೆ ಮಾಧ್ಯಮದವರ ಎದುರು ಈ ವಿಷಯ ಮಾತಾಡುವುದೂ ಇಲ್ಲ ಎಂದು ಬಸವನಗೌಡ ಯತ್ನಾಳ ಹೇಳಿದ್ದಾರೆ.

ಯಡಿಯೂರಪ್ಪ ಬದಲಿಸೋಣ ಎಂದು ಹೈಕಮಾಂಡ್ ಹೇಳಿದರೆ ಒಪ್ಪಿಗೆ ಇದೆ. ಬೇಡ ಅವರನ್ನೇ ಮುಂದುವರಿಸುವ ಎಂದರೆ ಅದಕ್ಕೂ ಒಪ್ಪಿಗೆ ಇದೆ. ಕೊರೋನ ಕಾಲದಲ್ಲಿ ಸೂಕ್ತ ಹಣಕಾಸು ಸೌಲಭ್ಯ ಇಲ್ಲದೆ ಪಾಪ ಯಡಿಯೂರಪ್ಪ ಕಷ್ಟದಲ್ಲಿದ್ದಾರೆ. ಅವರಿಗೆ ನಾವೇಕೆ ಕಷ್ಟಕೊಡಲಿ? ವಾಜಪೇಯಿ ಅವರ ಕೈಕೆಳಗೆ ಸಚಿವನಾಗಿದ್ದ ನನಗೆ ಇಂದು ಮಂತ್ರಿಗಿರಿಗಾಗಿ ಯಾರನ್ನೂ ಬೆದರಿಸುವ ಅಂಗಲಾಚುವ, ಬೆದರಿಸುವ ಅಥವಾ ಬ್ಲ್ಯಾಕ್ಮೇಲ್ ಮಾಡುವ ಅಗತ್ಯವೇ ನನಗಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ.

 

Get real time updates directly on you device, subscribe now.