ಅವಿರೋಧ ಆಯ್ಕೆಯಾಗಲು ಬಿಜೆಪಿಯ ಸಹಕಾರವೂ ಇದೆ: ದೇವೇಗೌಡ

ಬಿಜೆಪಿಯಲ್ಲಿ ಹಲವು ಮಂದಿ ಟಿಕೇಟ್ ಆಕಾಂಕ್ಷಿಗಳಿದ್ದರೂ ಮೂರನೇ ಅಭ್ಯರ್ಥಿ ಕಣಕ್ಕಿಳಿಸಲಿಲ್ಲ ಎಂದು ಲಿಂಬಾವಳಿ ತಿಳಿಸಿದ್ದರು.

ಸೋನಿಯಾ ಗಾಂಧಿ ಮನಬಿಚ್ಚಿ ಮಾತಾಡಿ ಬೆಂಬಲ ನೀಡಿದರು. ಜನರ ಸಮಸ್ಯೆ ಎತ್ತಿಕೊಂಡು ಹೋರಾಟ ಮಾಡುವಾಗ ಯಾರ ದಾಕ್ಷಿಣ್ಯಕ್ಕೂ ಒಳಗಾದವನಲ್ಲ. ಜೀವನದುದ್ದಕ್ಕೂ ಜಾತ್ಯತೀತ ನಿಲುವಿಗೆ ಹೋರಾಡಿದ್ದೇನೆ.

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ದೇವೇಗೌಡರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ ಆಗಲು ಕಾಂಗ್ರೆಸ್ ಮಾತ್ರವಲ್ಲ, ಬಿಜೆಪಿಯ ಸಹಕಾರವೂ ಇದೆ ಎಂದಿದ್ದಾರೆ.

ಬಿಜೆಪಿಯಲ್ಲಿ ಹಲವು ಮಂದಿ ಟಿಕೇಟ್ ಆಕಾಂಕ್ಷಿಗಳಿದ್ದರೂ ಮೂರನೇ ಅಭ್ಯರ್ಥಿ ಕಣಕ್ಕಿಳಿಸಲಿಲ್ಲ ಎಂದು ಲಿಂಬಾವಳಿ ತಿಳಿಸಿದ್ದರು ಎಂದು ದೇವೇಗೌಡರು ಹೇಳಿದರು.

ದೆಹಲಿಯಿಂದ ಮೇಡಂ ಸೋನಿಯಾ ಗಾಂಧಿ ಅವರು ವಿಡೀಯೋ ಕಾನ್ಫರೆನ್ಸ್ ಮೂಲಕ ಮನಬಿಚ್ಚಿ ಮಾತಾಡಿ ಬೆಂಬಲ ನೀಡಿದರು. ಮಿಸ್ ಯು ಇನ್ ಲೋಕಸಭಾ ಎಂದರು. ವೇಣುಗೋಪಾಲ್ ಕುಮಾರಸ್ವಾಮಿಗೆ ಪೋನ್ ಮಾಡಿ ಮಾತಾಡಿದರು. ಕಾಂಗ್ರೆಸ್ ಪಕ್ಷದ ಎಲ್ಲರಿಗೂ ಆಭಾರಿ ಎಂದು ಗೌಡರು ಹೇಳಿದರು. ರಾಜ್ಯ ನಾಯಕರಿಗೆ ನಾನು ಶತ್ರು ಅಲ್ಲ ಎಂದರು.

ಜನರ ಸಮಸ್ಯೆ ಎತ್ತಿಕೊಂಡು ಹೋರಾಟ ಮಾಡುವಾಗ ಯಾರ ದಾಕ್ಷಿಣ್ಯಕ್ಕೂ ಒಳಗಾದವನಲ್ಲ. ಜೀವನದುದ್ದಕ್ಕೂ ಜಾತ್ಯತೀತ ನಿಲುವಿಗೆ ಹೋರಾಡಿದ್ದೇನೆ. ಇದೇ ಕೊನೆ ಹೋರಾಟವೋ ಗೊತ್ತಿಲ್ಲ. ಆದರೆ ಜೀವನದಲ್ಲಿನ ನನ್ನ ಜಾತ್ಯತೀತ ಸಿದ್ದಾಂತದ ಜೊತೆ ಯಾವತ್ತೂ ರಾಜಿ ಇಲ್ಲ. ರಾಜ್ಯಸಭೆಗೆ ಸ್ಪರ್ದಿಸಬೇಕು ಎಂಬ ಜೆಡಿಎಸ್ ಪಕ್ಷದ ನಾಯಕರ ತೀರ್ಮಾನಕ್ಕೆ ತಲೆ ಬಾಗಿದ್ದೇನೆ ಎಂದರು.

ಕುಮಾರಸ್ವಾಮಿ ಸಿಎಂ ಮಾಡುವಾಗ ನಾನು ಒಪ್ಪಿರಲಿಲ್ಲ. ಕೊನೆಗೆ ಒಪ್ಪಿದೆ. ಹದಿನಾರು ಮಂದಿ ಜಾತ್ಯತೀತ ನಾಯಕರನ್ನು ಕರೆದು ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಸಲಾಯಿತು ಎಂದು ದೇವೇಗೌಡರು ತನ್ನ ಜಾತ್ಯತೀತ ಮನೋಭಾವದ ಬಗ್ಗೆ ಹೇಳಿದರು.

ದೇವೇಗೌಡರದು ಯಾವತ್ತೂ ಹೊಂದಾಣಿಕೆ ರಾಜಕೀಯವಲ್ಲ: ಮಾಜಿ ಸಿಎಂ ಕುಮಾರಸ್ವಾಮಿ

ರಾಜ್ಯಸಭೆಗೆ ದೇವೇಗೌಡರ ಆಯ್ಕೆ ಯಾವ ಸಂದರ್ಭದಲ್ಲೂ ಹೊಂದಾಣಿಕೆ ರಾಜಕೀಯವಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ, ರಾಜ್ಯದ ಕಾಂಗ್ರೆಸ್, ಬಿಜೆಪಿ ನಾಯಕರೊಂದಿಗೆ ಯಾವ ಚರ್ಚೆಯೂ ನಡೆಸಿಲ್ಲ ಎಂದಿದ್ದಾರೆ. ದೇವೇಗೌಡರ ಮಾರ್ಗದರ್ಶನ ದೇಶಕ್ಕೆ ಅಗತ್ಯ ಎಂದಿದ್ದಾರೆ.

 

Get real time updates directly on you device, subscribe now.