ಕೊರೋನಾ ಕಾಲರ್ ಟ್ಯೂನ್ ಸ್ಥಗಿತಗೊಳಿಸುವುದು ಹೇಗೆ?
ಏರ್‌ಟೆಲ್ ಸಿಮ್ ಹೊಂದಿರುವ ಸ್ಮಾರ್ಟ್‌ಫೋನ್‌ನಿಂದ *646*224# ಡಯಲ್ ಮಾಡಿದರೆ ಪರದೆಯಲ್ಲಿ ಬರುವ ಯುಎಸ್‌ಎಸ್‌ಡಿ ಕೋಡ್‌ಗೆ 1 ಉತ್ತರಿಸಿದರೆ ಕೊರೊನಾ ಕಾಲರ್ ಟ್ಯೂನ್ ಸ್ಥಗಿತಗೊಳ್ಳುವುದರಲ್ಲಿ ಸಂದೇಹವೇ ಇಲ್ಲ.
ಕರಾವಳಿ ಕರ್ನಾಟಕ ವರದಿ
ಮಂಗಳೂರು: ಕೊರೋನಾ ಕಾಲರ್ ಟ್ಯೂನ್ ಕೇಳಿ ಕೇಳಿ ರೋಸಿ ಹೋಗಿದ್ದೀರಾ? ತುರ್ತು ಕರೆ ಮಾಡುವ ಸಂದರ್ಭ ಕೊರೊನಾ ಕಾಲರ್‌ಟ್ಯೂನ್ ಕಿರಿಕಿರಿಯಿಂದ ತೊಂದರೆ ಅನುಭವಿಸಿದ್ದೀರಾ? ಏರ್‌ಟೆಲ್ ಮತ್ತು ಜಿಯೋ ಸಿಮ್ ಬಳಸುತ್ತಿದ್ದರೆ ಕಾಲರ್‌ಟ್ಯೂನ್ ಸ್ಥಗಿತಗೊಳಿಸುವ ಸರಳ ಉಪಾಯ ಹೀಗಿದೆ.
ಏರ್‌ಟೆಲ್ ಸಿಮ್ ಹೊಂದಿರುವ ಸ್ಮಾರ್ಟ್‌ಫೋನ್‌ನಿಂದ *646*224# ಡಯಲ್ ಮಾಡಿದರೆ ಪರದೆಯಲ್ಲಿ ಬರುವ ಯುಎಸ್‌ಎಸ್‌ಡಿ ಕೋಡ್‌ಗೆ 1 ಉತ್ತರಿಸಿದರೆ ಕೊರೊನಾ ಕಾಲರ್ ಟ್ಯೂನ್ ಸ್ಥಗಿತಗೊಳ್ಳುವುದರಲ್ಲಿ ಸಂದೇಹವೇ ಇಲ್ಲ. ಈ ಕಾಲರ್‌ಟ್ಯೂನ್ ಸ್ಥಗಿತಗೊಳ್ಳುತ್ತದೆ. ಫೀಚರ್‌ಫೋನ್‌ಗಳಲ್ಲಿ *646*224# ಡಯಲ್ ಮಾಡಿದ ಒಡನೆ ಕೊರೊನಾ ಕಾಲರ್‌ಟ್ಯೂನ್ ಸ್ಥಗಿತಗೊಳ್ಳುತ್ತದೆ.
ಜಿಯೊ ಸಿಮ್‌ಗಳಲ್ಲಿ STOP ಟೈಪ್ ಮಾಡಿ 155223ಗೆ ಎಸ್‌ಎಂಎಸ್ ಕಳಿಸಿದರೆ ಕಾಲರ್‌ಟ್ಯೂನ್ ಸ್ಥಗಿತಗೊಳ್ಳುತ್ತದೆ.
ನಿಮಗೆ ಕೊರೊನಾ ಕಾಲರ್ ಟ್ಯೂನ್ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಬೇಕೆ? ಆಗಾಗ ನಿಮ್ಮ ಜವಾಬ್ದಾರಿ ನೆನಪಿಸಲು ಕೊರೋನಾ ಕಾಲರ್ ಟ್ಯೂನ್ ಬೇಕೆ? ಅಂಥವರಿಗೆ ತಾತ್ಕಾಲಿಕವಾಗಿ ಕೊರೊನಾ ಕಾಲರ್ ಟ್ಯೂನ್ ಸ್ಥಗಿತಗೊಳಿಸುವ ಉಪಾಯವೂ ಇದೆ.
ಯಾರಿಗೆ ಫೊನ್ ಮಾಡಬೇಕೋ ಅವರ ನಂಬರ್ ಡಯಲ್ ಮಾಡಿ. ಕೊರೋನಾ ಕಾಲರ್‌ಟ್ಯೂನ್ ಕೇಳ ತೊಡಗಿದೊಡನೆ 1 ಒತ್ತಿ. 1 ಒತ್ತಿದೊಡನೆ ಸಾಮಾನ್ಯ ರಿಂಗ್ ಟೋನ್ ನಿಮಗೆ ಕೇಳಿಸುತ್ತದೆ.