ರಾಮನಗರ: ಟಿಪ್ಪರ್-ಬೈಕ್ ಡಿಕ್ಕಿ, ಮಂಗಳೂರು ಯುವಕ ಮೃತ್ಯು

ಕರಾವಳಿ ಕರ್ನಾಟಕ ವರದಿ
ರಾಮನಗರ: ತಾಲೂಕಿನ ಮಾಯಾಗಾನಹಳ್ಳಿ ಬಳಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಟಿಪ್ಪರ್-ಲಾರಿ ಅಪಘಾತದಲ್ಲಿ ಮಂಗಳೂರು ಮೂಲದ ಬೈಕ್ ಸವಾರ ಸಾವಪ್ಪಿದ್ದಾರೆ.

ಮಂಗಳೂರು ರಾಘವೇಂದ್ರ ಮಠದ ಬಳಿಯ ನಿವಾಸಿ ಅನಂತ ಕಾಮತ್(24) ಮೃತ ಯುವಕ.

ಮಂಗಳವಾರ ಬೆಂಗಳೂರಿನಿಂದ ರಾಮನಗರದಲ್ಲಿ ತಾನು ಕೆಲಸ ಮಾಡುವ ಖಾಸಗಿ ಬ್ಯಾಂಕ್‌ಗೆ ಬರುತ್ತಿದ್ದಾಗ ಟಿಪ್ಪರ್ ಹಿಂದಿನಿಂದ ಬೈಕಿಗೆ ಗುದ್ದಿತ್ತು. ತಲೆಗೆ ಗಂಭೀರ ಏಟುಗಳಾಗಿ ಸಾವಪ್ಪಿದ್ದಾರೆ.

ಅನಂತ ಕಾಮತ್ ಅವರು ತಾಯಿ ಮತ್ತು ಸಹೋದರಿಯೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದರು.

ರಾಮನಗರ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Get real time updates directly on you device, subscribe now.