ಚಿತ್ರದುರ್ಗ: ಚಿತ್ರ ನಿರ್ದೇಶಕ ಹೇಮಂತ ನಾಯ್ಕ್ ಆತ್ಮಹತ್ಯೆ

ಲಂಬಾಣಿ ಭಾಷೆಯ ‘ಗೋರಿಯಾ’, ‘ಗರಸ್ಯ’ ಹಾಗೂ ಕನ್ನಡದ ‘ಧರ್ಮಾಪುರ ಸಿನೆಮಾಗಳನ್ನು ಹೇಮಂತ್ ನಿರ್ದೇಶಿಸಿದ್ದರು.

ಐದು ತಿಂಗಳ ಹಿಂದೆ ಪತ್ನಿ ಒಂದು ವರ್ಷದ ಮಗುವಿನ ಜೊತೆ ಆತ್ಮಹತ್ಯೆಗೈದಿದ್ದು, ಇದರಿಂದ ಹೇಮಂತ ತೀವೃ ನೊಂದಿದ್ದರು ಎನ್ನಲಾಗಿದೆ.

ಕರಾವಳಿ ಕರ್ನಾಟಕ ವರದಿ
ಹೊಳಲ್ಕೆರೆ: ಹೊಳಲ್ಕೆರೆ ಲಂಬಾಣಿಹಟ್ಟಿಯ ಸಿನೆಮಾ ನಿರ್ದೇಶಕ ಹೇಮಂತ ನಾಯ್ಕ್(27) ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ. ಮಂಗಳವಾರ ಸಂಜೆ ಈ ಘಟನೆ ನಡೆದಿದೆ.

ಐದು ತಿಂಗಳ ಹಿಂದೆ ಪತ್ನಿ ಒಂದು ವರ್ಷದ ಮಗುವಿನ ಜೊತೆ ಆತ್ಮಹತ್ಯೆಗೈದಿದ್ದು, ಇದರಿಂದ ಹೇಮಂತ ತೀವೃ ನೊಂದಿದ್ದರು ಎನ್ನಲಾಗಿದೆ. ಇವರು ನಿರ್ದೇಶಿಸಿದ್ದ ‘ದಾರಿದೀಪ’ ಸಿನೆಮಾ ಬಿಡುಗಡೆಯಾಗದ ಕಾರಣ ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆಗೈದಿರಬಹುದೆಂದು ಶಂಕಿಸಲಾಗಿದೆ.

ಲಂಬಾಣಿ ಭಾಷೆಯ ‘ಗೋರಿಯಾ’, ‘ಗರಸ್ಯ’ ಹಾಗೂ ಕನ್ನಡದ ‘ಧರ್ಮಾಪುರ ಸಿನೆಮಾಗಳನ್ನು ಹೇಮಂತ್ ನಿರ್ದೇಶಿಸಿದ್ದರು.

 

 

Get real time updates directly on you device, subscribe now.