ಕವಿ ಎಚ್‌ಎಸ್‌ವಿ ಅವರ ‘ಬುದ್ಧಚರಣ’ ಬಿಡುಗಡೆ

ಬುಕ್ ‌ಬ್ರಹ್ಮ ಹಾಗೂ ಅಂಕಿತ ಪುಸ್ತಕ ಪ್ರಕಾಶನ ಪ್ರಾಯೋಜಕತ್ವದ ಫೇಸ್ ಬುಕ್ ಲೈವ್ ಸಮಾರಂಭ.

ಸಂಸ್ಕೃತ ವಿ.ವಿ. ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಕೃತಿ ಲೋಕಾರ್ಪಣೆ ಮಾಡಿದರು.

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ಬುಕ್ ‌ಬ್ರಹ್ಮ ಹಾಗೂ ಅಂಕಿತ ಪುಸ್ತಕ ಪ್ರಕಾಶನ ಪ್ರಾಯೋಜಕತ್ವದ ಫೇಸ್ ಬುಕ್ ಲೈವ್ ಸಮಾರಂಭದಲ್ಲಿ ಕವಿ ಎಚ್‌ಎಸ್‌ವಿ (ಎಚ್.ಎಸ್. ವೆಂಕಟೇಶ ಮೂರ್ತಿ) ಅವರ ’ಬುದ್ಧಚರಣ’ ಪುಸ್ತಕ ಬಿಡುಗಡೆಗೊಂಡಿತು. ಸಂಸ್ಕೃತ ವಿ.ವಿ. ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಕೃತಿ ಲೋಕಾರ್ಪಣೆ ಮಾಡಿದರು.

ಕವಿ ಎಚ್.ಎಸ್.ವಿ ಅವರು ತಮ್ಮ ಕೃತಿ ಕುರಿತು ಮಾತನಾಡಿ ‘ಬುದ್ಧನ ವ್ಯಕ್ತಿತ್ವವು ಜ್ಞಾನ, ತಾತ್ವಿಕತೆ, ಹೃದ್ಯ ಮಾನವೀಯ ಗುಣಗಳ ಸಂಗಮವಾಗಿದೆ. ಸೌಮ್ಯ, ಪ್ರಶಾಂತ ಆದರೆ ಆಳವಾಗಿ, ಗಂಭೀರವಾಗಿ ನಿಶ್ಶಬ್ದವಾಗಿ ಹರಿಯುವ ನದಿಯ ಹಾಗೆ ಬುದ್ಧ ಧ್ಯಾನಸ್ಥನಾಗಿ ಲೋಕ ಶೋಕದ ನಿವಾರಣೆಗೆ ಹೊರಟ’ ಎಂದು ಅಭಿಪ್ರಾಯಪಟ್ಟರು.

‘ಕೊರೊನಾ’ಸೃಷ್ಟಿಸಿರುವ ಆವಾಂತರಗಳನ್ನು ಪ್ರಸ್ತಾಪಿಸಿದ ಅವರು, “ಕೊರೊನಾ ವೈರಸ್ ಜವರಾಯನಂತೆ ಎರಗಿದೆ. ಮನುಷ್ಯನ ಅಂಕೆಗೆ ಮೀರಿದ, ಲೌಕಿಕ ದುಃಖದ ಸ್ಥಿತಿಯೇ ಬಹುಶಃ ಬುದ್ಧನನ್ನು ಬೋಧಿ ಕಡೆಗೆ ಎಳೆದುಕೊಂಡು ಹೋಗಿರಬಹುದು” ಎಂದು ಅಭಿಪ್ರಾಯಪಟ್ಟರು.

ಲೇಖಕ ಎಂ.ಆರ್. ದತ್ತಾತ್ರಿ ಸೇರಿದಂತೆ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.

Get real time updates directly on you device, subscribe now.