ಮುಖ್ಯಮಂತ್ರಿ ಕಛೇರಿಗಿಂತಲೂ ಹೈಟೆಕ್ ಕೊಠಡಿ ಪಡೆದ ಸಿದ್ದರಾಮಯ್ಯ

ಐಶಾರಾಮಿ ಹೋಟೆಲ್ ಕೋಣೆಯಷ್ಟು ಭವ್ಯ ಕೊಠಡಿ

Former Karnataka Chief Minister Siddaramaiah, who has no constitutional post in the new state government, has been allotted the swanky office of former speaker in Vidhana Soudha in Bengaluru

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ತಾವು ಸಮ್ಮಿಶ್ರ ಸರ್ಕಾರದ ಬಾಸ್ ಎಂಬುದನ್ನು ಸಾಬೀತುಪಡಿಸುವಂತೆ ಮುಖ್ಯಮಂತ್ರಿಗಿಂತಲೂ ಹೈಟೆಕ್ ಕೋಣೆಯನ್ನು ಪಡೆದಿದ್ದಾರೆ.

ವಿಧಾನಸೌಧದ ಒಂದನೇ ಮಹಡಿಯಲ್ಲಿರುವ ಐಶಾರಾಮಿ 125ನೇ ಕೋಣೆಯನ್ನೀಗ ಸಿದ್ದರಾಮಯ್ಯನವರಿಗೆ ನೀಡಲಾಗಿದೆ. ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ್ ಈ ಕೋಣೆಯನ್ನು ಬಳಸುತ್ತಿದ್ದು ಅವರು ವಿಧಾನಸಭಾಧ್ಯಕ್ಷರಾಗಿದ್ದಾಗಲೇ ಈ ಕೋಣೆಯನ್ನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನವೀಕರಣ ಮಾಡಿದ್ದರು.

ಸಭಾಧ್ಯಕ್ಷರಾದ ರಮೇಶ್ ಕುಮಾರ್ ತಮ್ಮ ವಿವೇಚನಾ ಅಧಿಕಾರ ಪ್ರಯೋಗಿಸಿ ಈ ಕೊಠಡಿಯನ್ನು ಸಿದ್ದರಾಮಯ್ಯ ಅವರಿಗೆ ನೀಡಿದ್ದು ಅದರ ಮುಂದೆ, “ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಮತ್ತು ಸಮನ್ವಯ ಸಮಿತಿ ಅಧ್ಯಕ್ಷರು” ಎಂಬ ಬೋರ್ಡ್ ತಗಲಿಸಲಾಗಿದೆ.

ಈ ಕೋಣೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಕಚೇರಿಗಿಂತಲೂ ವೈಭವಯುತವಾಗಿದೆ. ಈ ಕೊಠಡಿ ಐಶಾರಾಮಿ ಹೋಟೆಲ್ ಕೋಣೆಯಷ್ಟು ಭವ್ಯವಾಗಿದೆ. ಸುಖಾಸೀನ, ಹವಾನಿಯಂತ್ರಕ ವ್ಯವಸ್ಥೆ, ದುಬಾರಿ ಕುರ್ಚಿಗಳು, ಬೃಹತ್ ಎಲ್‌ಇಡಿ ಪರದೆಗಳು, ಖಾಸಗಿ ಕೋಣೆ ಸೇರಿದಂತೆ ಪೂರ್ತಿ ಕೊಠಡಿ ಕಣ್ಣು ಕುಕ್ಕುವಂತಿದೆ.

ಸಭಾಧ್ಯಕ್ಷರಾದ ರಮೇಶ್ ಕುಮಾರ್ ತಮ್ಮ ವಿವೇಚನಾ ಅಧಿಕಾರ ಪ್ರಯೋಗಿಸಿ ಈ ಕೊಠಡಿಯನ್ನು ಸಿದ್ದರಾಮಯ್ಯ ಅವರಿಗೆ ನೀಡಿದ್ದು ಅದರ ಮುಂದೆ, “ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಮತ್ತು ಸಮನ್ವಯ ಸಮಿತಿ ಅಧ್ಯಕ್ಷರು” ಎಂಬ ಬೋರ್ಡ್ ತಗಲಿಸಲಾಗಿದೆ.

Get real time updates directly on you device, subscribe now.