ಬೊಲೆರೋ-ಬೈಕ್ ಡಿಕ್ಕಿ: ಬೈಕ್ ಸವಾರ ದಾರುಣ ಸಾವು

ಮೃತರನ್ನು ಮೊಹ್ಮದ್ ಸಫ್ವಾನ್(18) ಎಂದು ಗುರುತಿಸಲಾಗಿದೆ.

ಬೊಲೇರೊ ಜೀಪ್ -ಬೈಕ್ ಅಪಘಾತದಲ್ಲಿ ಬೈಕ್ ಸವಾರ ಸಾವಪ್ಪಿದ ಕಳವಳಕಾರಿ ಘಟನೆ ರಾತ್ರಿ ವರದಿಯಾಗಿದೆ.

ಬಂಟ್ವಾಳ: ಬೊಲೇರೊ ಜೀಪ್ -ಬೈಕ್ ಅಪಘಾತದಲ್ಲಿ ಬೈಕ್ ಸವಾರ ಸಾವಪ್ಪಿದ ಕಳವಳಕಾರಿ ಘಟನೆ ರಾತ್ರಿ ವರದಿಯಾಗಿದೆ.

ವಿಟ್ಲ-ಸಾಲೆತ್ತೂರು ರಸ್ತೆಯ ಕೊಡಂಗಾಯಿ ಎಂಬಲ್ಲಿ ಅಪಘಾತ ಸಂಭವಿಸಿದ್ದು, ಮೃತರನ್ನು ಮೊಹ್ಮದ್ ಸಫ್ವಾನ್(18) ಎಂದು ಗುರುತಿಸಲಾಗಿದೆ.

ವಿಟ್ಲ ಕಸಬಾ ಗ್ರಾಮದ ಚೆಂಡೆಗುಳಿಯ ಸಫ್ವಾನ್ ಅವರು ಕುಡ್ತಮೊಗೇರುನಿಂದ ವಿಟ್ಲದತ್ತ ಬೈಕಿನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಜೀಪು ಗುದ್ದಿತ್ತು. ಈ ಸಂದರ್ಭ ಸಫ್ವಾನ್ ಅವರು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ಒಯ್ಯುವ ದಾರಿಯಲ್ಲಿ ಮೃತಪಟ್ಟಿದ್ದಾರೆ.

ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Get real time updates directly on you device, subscribe now.