ಡೆಂಗ್ಯೂ ಜ್ವರದಿಂದ ಬಳಲುವ ಬಡ ಕಾರ್ಮಿಕ ಕುಟುಂಬದ ಮಗನಿಗೆ ನೆರವು ಬೇಕಿದೆ
ಗೇರುಕಟ್ಟೆ ಪ್ರೌಢ ಶಾಲೆಯಲ್ಲಿ ಒಂಬತ್ತನೇ ತರಗತಿಯ ವಿಧ್ಯಾರ್ಥಿ ಭುವಿತ್
ಮುಂದಿನ ಚಿಕಿತ್ಸೆಗೆ ಸುಮಾರು ಐದು ಲಕ್ಷಕ್ಕೂ ಅಧಿಕ ಹಣದ ಅಗತ್ಯವಿದೆ ಎಂದು ವೈಧ್ಯರು ಹೇಳಿದ್ದು ಕೂಲಿ ಕಾರ್ಮಿಕರಾಗಿರುವ ಈ ಕುಟುಂಬ ಈ ವೆಚ್ಚವನ್ನು ಭರಿಸಲಾಗದೆ ಸಂಕಷ್ಟದಲ್ಲಿದ್ದು ಸಹೃದಯರ ನೆರವು ಯಾಚಿಸುತ್ತಿದ್ದಾರೆ.
ಬೆಳ್ತಂಗಡಿ: ತಾಲೂಕಿನ ಉರುವಾಲು ಗ್ರಾಮದ ಹಲೇಜಿ ನಿವಾಸಿ ಶಾಂತಪ್ಪ ಮತ್ತು ಕಮಲ ದಂಪತಿಗಳ ಪುತ್ರ ಭವಿತ ಕುಮಾರ್ (14) ಡೆಂಗ್ಯೂ ಜ್ವರದಿಂದ ಬಳಲುತ್ತಾ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯ ತೀವ್ರನಿಗಾಗ ಘಟಕದಲ್ಲಿದ್ದು ಪ್ರತಿ ನಿತ್ಯ ಸಾವಿರಾರು ರೂ ಖರ್ಚಾಗುತ್ತಿದೆ.
ಮುಂದಿನ ಚಿಕಿತ್ಸೆಗೆ ಸುಮಾರು ಐದು ಲಕ್ಷಕ್ಕೂ ಅಧಿಕ ಹಣದ ಅಗತ್ಯವಿದೆ ಎಂದು ವೈಧ್ಯರು ಹೇಳಿದ್ದು ಕೂಲಿ ಕಾರ್ಮಿಕರಾಗಿರುವ ಈ ಕುಟುಂಬ ಈ ವೆಚ್ಚವನ್ನು ಭರಿಸಲಾಗದೆ ಸಂಕಷ್ಟದಲ್ಲಿದ್ದು ಸಹೃದಯರ ನೆರವು ಯಾಚಿಸುತ್ತಿದ್ದಾರೆ.
ಗೇರುಕಟ್ಟೆ ಪ್ರೌಢ ಶಾಲೆಯಲ್ಲಿ ಒಂಬತ್ತನೇ ತರಗತಿಯ ವಿಧ್ಯಾರ್ಥಿಯಾಗಿರುವ ಭುವಿತ್ ಅವರು ಡೆಂಗ್ಯೂ ಜ್ವರಕ್ಕೆ ತುತ್ತಾಗಿ ಹೃದಯ, ಲಿವರ್ ಹಾಗೂ ಕಿಡ್ನಿ ವೈಫಲ್ಯದಿಂದ ನರಳುತ್ತಿದ್ದಾನೆ. ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಪ್ರತಿ ದಿನ ಸುಮಾರು 25 ಸಾವಿರಕ್ಕೂ ಹೆಚ್ಚು ಹಣ ಖರ್ಚಾಗುತ್ತಿದ್ದು, ಮುಂದಿನ ಚಿಕಿತ್ಸೆಗೂ ಹೆಚ್ಚಿನ ಹಣ ಬೇಕಾಗಿದೆ. ದಲಿತ ಸಮುದಾಯಕ್ಕೆ ಸೇರಿರುವ ಕೂಲಿ ಕಾರ್ಮಿಕರಾಗಿರುವ ಶಾಂತಪ್ಪ ಅವರ ಬಳಿ ಏನೂ ಉಳಿಕೆ ಇಲ್ಲವಾಗಿದ್ದು ಕೈಯಲ್ಲಿದ್ದುದೆಲ್ಲವೂ ಮುಗಿದಿದೆ.
ಸಾಲ ಮಾಡುವಷ್ಟು ಮಾಡಿ ಆಗಿದೆ, ಇನ್ನೇನು ಮಾಡಬೇಕು ಎಂದು ತಿಳಿಯದೆ ಕಂಗಾಲಾಗಿದ್ದಾರೆ. ಮಗುವಿನ ಚಿಕಿತ್ಸೆಯನ್ನು ಮುಂದುವರಿಸಲು ಏನೂ ತೋಚದೆ ಕಂಗಾಲಾಗಿದ್ದಾರೆ.
ಈಗಲೂ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಯುತ್ತಿದ್ದು ಬಾಲಕ ಒಂದಿಷ್ಟು ಚೇತರಿಸಿಕೊಂಡಿದ್ದಾನೆ ಇನ್ನೂ ಚಿಕಿತ್ಸೆ ಮುಂದುವರಿಯಬೇಕಾಗಿದೆ. ಅದಕ್ಕೆ ಸಹೃದಯರ ಸಹಕಾರವನ್ನು ಕುಟುಂಬ ಎದುರು ನೋಡುತ್ತಿದೆ.
ಸಹಾಯಮಾಡಬೇಕಾದ ಬ್ಯಾಂಕ್ ವಿಳಾಸ
ಕೆನರಾ ಬ್ಯಾಂಕ್ ಪದ್ಮುಂಜ ಕಣಿಯೂರು ಶಾಖೆ, ಬೆಳ್ತಂಗಡಿ ತಾಲೂಕು.
ಉಳಿತಾಯ ಖಾತೆ.
ಖಾತೆದಾರನ ಹೆಸರು: ಭುವಿತ್ಕುಮಾರ್, ಕೆ.ಎಸ್./ ಕಮಲ ಕೋಂ ಶಾಂತಪ್ಪ.
ಹಲೇಜಿ ಮನೆ, ಉರುವಾಲು ಗ್ರಾಮ ಬೆಳ್ತಂಗಡಿ ತಾಲೂಕು.
ಖಾತೆ ನಂ: 1599101010787
ಐಎಫ್ಸಿ ಕೋಡ್; CNRB 0001599
ಮೊಬೈಲ್ ; 9449943118