ಬೆಳ್ತಂಗಡಿ ಬಸ್ ಡಿಕ್ಕಿ: ಶಾಲಾ ಬಾಲಕ ಸ್ಥಳದಲ್ಲೇ ಮೃತ್ಯು

ಡ್ರೈವರ್ ಮತ್ತು ಕಂಡಕ್ಟರ್ ವಿರುದ್ಧ ನಿರ್ಲಕ್ಷ್ಯದ ಆರೋಪ

ಮೃತ ಬಾಲಕನನ್ನು ಕರಂಬಾರು ದರ್ಬೆಪಲ್ಕೆ ಮನೆಯ ಉಮೇಶ್ ಸಫಲ್ಯ ಎಂಬುವರ ಪುತ್ರ ಕರಂಬಾರು ಶಾಲೆಯ ಮೂರನೇ ತರಗತಿ ವಿದ್ಯಾರ್ಥಿ ಚಿಂತನ್ (8) ಎಂದು ಗುರುತಿಸಲಾಗಿದೆ.

ಬೆಳ್ತಂಗಡಿ: ಬಸ್ ಚಾಲಕ ಹಾಗೂ ನಿರ್ವಾಹಕನ ಅಜಾಗರೂಕತೆಯಿಂದ ಶಾಲಾ ಬಾಲಕನೊಬ್ಬ ಬಸ್ಸಿನ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಘಟನೆ ಕರಂಬಾರು ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ.

ಮೃತ ಬಾಲಕನನ್ನು ಕರಂಬಾರು ದರ್ಬೆಪಲ್ಕೆ ಮನೆಯ ಉಮೇಶ್ ಸಫಲ್ಯ ಎಂಬುವರ ಪುತ್ರ ಕರಂಬಾರು ಶಾಲೆಯ ಮೂರನೇ ತರಗತಿ ವಿದ್ಯಾರ್ಥಿ ಚಿಂತನ್ (8) ಎಂದು ಗುರುತಿಸಲಾಗಿದೆ.

ಈತ ತನ್ನ ತಾಯಿ, ಹಾಗೂ ಅಣ್ಣನೊಂದಿಗೆ ಪುತ್ತೂರಿಗೆ ಮದುವೆಯೊಂದಕ್ಕೆ ತೆರಳಿದ್ದರು ಎನ್ನಲಾಗಿದೆ. ಮದುವೆ ಮುಗಿಸಿ ಅವರು ಪುತ್ತೂರಿನಿಂದ ಬೆಳ್ತಂಗಡಿ ಬಂದು ಅಲ್ಲಿಂದ ಗೋಪಾಲಕೃಷ್ಣ ಎಂಬ ಖಾಸಗಿ ಬಸ್ಸಿನಲ್ಲಿ ಸವಣಾಲು ಮೂಲಕ ಕರಂಬಾರಿಗೆ ಬರುತ್ತಿದ್ದರು.

ಕರಂಬಾರು ದಬರ್ೆಪಲ್ಕೆ ಭಜನಾ ಮಂದಿರದ ಬಳಿ ಇಳಿಯುತ್ತಿದ್ದ ವೇಳೆ ತಾಯಿ ಹಾಗೂ ಹಿರಿಯ ಮಗು ಬಸ್ಸಿನಿಂದ ಇಳಿದಿದ್ದು ಚಿಂತನ್ ಇಳಿಯುತ್ತಿದ್ದ ವೇಳೇ ಬಾಲಕ ಅಜಾಗರೂಕತೆಯಿಂದ ಬಸ್ ಚಲಾಯಿಸಿದ್ದು ಬಸ್ಸಿನಿಂದ ಕೆಳಗೆ ಬಿದ್ದ ಬಾಲಕ ಬಸ್ಸಿನ ಚಕ್ರಕ್ಕೆ ಸಿಲುಕಿದ್ದು ದುರ್ಘಟನೆ ಸಂಭವಿಸಿದೆ. ಚಾಲಕನ ಹಾಗೂ ನಿರ್ವಾಹಕನ ಅಜಾಗರೂಕತೆ ಹಾಗೂ ನಿರ್ಲಕ್ಷವೇ ಅಪಘಾತಕ್ಕೆಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಅಪಘಾತ ಸಂಭವಿಸಿದ ಬಳಿಕ ಬಸ್ ಚಾಲಕ ಶೇಖರ ಎಂಭಾತ ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮಗು ಹಾಗೂ ತಾಯಿಯನ್ನು ಅದೇ ಬಸ್ನಲ್ಲಿ ಮುಂದೆ ಶಿರ್ಲಾಲು ರಿಕ್ಷಾ ನಿಲ್ದಾಣದ ವರೆಗೆ ಕರೆದೊಯ್ದು ಅಲ್ಲಿಂದ ರಿಕ್ಷಾವೊಂದರಲ್ಲಿ ಮಗು ಹಾಗೂ ತಾಯಿಯನ್ನು ಆಸ್ಪತ್ರೆಗೆ ಕಳುಹಿಸಿದ್ದಾನೆ ಗಂಭಿರವಾಗಿ ಗಾಯಗೊಂಡ ಮಗುವನ್ನು ಆಸ್ಪತ್ರಗೆ ಸೇರಿಸುವಲ್ಲಿ ಆತ ನಿರ್ಲಕ್ಷ್ಯ ವಹಿಸಿದ್ದ ಎಂದು ರ್ಸಥಳೀಯ ಜನರು ಆರೋಪಿಸುತ್ತಿದ್ದಾರೆ. ಘಟನೆಯ ಬಳಿಕವೂ ತನ್ನ ಎಂದಿನ ಟ್ರಿಪ್ ಮುಗಿಸಿ ಬಸ್ ಅನ್ನು ಲಾಯಿಲ ಸಮೀಪ ಬಿಟ್ಟು ಪರಾರಿಯಾಗಿದ್ದಾನೆ

ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ನಡುವೆ ವೇಣೂರು ಠಾಣೆಗೆ ಹೀಗಿದ್ದ ಮೃತ ಬಾಲಕನ ತಂದೆಯನ್ನು ಸುಮಾರು ಒಂದು ಗಂಟೆ ಅಲ್ಲಿ ಕಾಯಿಸಿದ ಬಳಿಕ ಪೋಲೀಸರು ಠಾಣೆಯಿಂದ ಹೊರಟಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಸ್ಥಳಕ್ಕೆ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್ ಪಿಜಿ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ, ಘಟನೆಯ ಬಗ್ಗೆ ತನಿಖೆ ನಡೆಯುತ್ತಿದ್ದು ಘಟನೆಯ ಗಂಭೀರತೆಯನ್ನು ಗಮನಿಸಿ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂದಿಸಲಾಗುವುದು ಎಂದು ತಿಳಿಸಿದ್ದಾರೆ. ಸಮುದಾಯ ಆಸ್ಪತ್ರೆಗೆ ಶಾಸಕ ಹರೀಶ್ ಪೂಂಜ, ಮಾಜಿ ಶಾಸಕ ಕೆ. ವಸಂತ ಬಂಗೇರ ಭೇಟಿ ನೀಡಿ ಕುಟುಂಬಿಕರನ್ನು ಸಮಾಧಾನಪಡಿಸಿದರು.

ಬಸ್ಸು ಸವಣಾಲಿನ ಕಿರಣ್ಗೌಡಎಂಬುವರಿಗೆ ಸೇರಿದ್ದಾಗಿದೆ. ಬಸ್ ಚಾಲಕ ಶೇಖರ ಎಂಬಾತ ಬಸ್ ಲಾಯಿಲದ ಮಿಲ್ ಒಂದರ ಬಳಿ ನಿಲ್ಲಿಸಿ ಪರಾರಿಯಾಗಿದ್ದಾನೆ.

Get real time updates directly on you device, subscribe now.