ಬಜೆಟ್ ಮಂಡಿಸುತ್ತೇನೋ ಇಲ್ಲವೋ ಗೊತ್ತಿಲ್ಲ: ಸಿಎಂ ಕುಮಾರಸ್ವಾಮಿ

ಲೋಕಸಭಾ ಚುನಾವಣೆ ಬಳಿಕ ಬಜೆಟ್ ಮಂಡಿಸಿ ಎನ್ನುತ್ತಿರುವುದರಿಂದ ಬಜೆಟ್ ಮಂಡಿಸುತ್ತೇನೋ ಇಲ್ಲವೋ ಗೊತ್ತಿಲ್ಲ.

ಬಜೆಟ್‌ ಮಂಡನೆ ವಿಚಾರದಲ್ಲಿ ನಾನು ಯಾರ ಮುಲಾಜಿನಲ್ಲೂ ಇಲ್ಲ. ಕಳೆದ ಸರ್ಕಾರದ ಬಜೆಟ್‌ ಅನ್ನೇ ಅಂಗೀಕರಿಸಿ ಲೇಖಾನುದಾನ ಪಡೆಯುವುದಾದರೆ ಈಗಿನ 100 ಶಾಸಕರಿಗೆ ತೊಂದರೆಯಾಗುತ್ತದೆ. ಅವರೇನಾದರೂ ಹಕ್ಕುಚ್ಯುತಿ ತಂದರೆ ಏನು‌ಮಾಡೋದು? ಅದಕ್ಕಾಗಿಯೇ ಹೊಸ ಬಜೆಟ್ ಮಂಡನೆಗೆ ಮುಂದಾಗಿರೋದು.

ಬೆಂಗಳೂರು: ನಾನು ಬಜೆಟ್ ಮಂಡಿಸುತ್ತೇನೋ ಇಲ್ಲವೋ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಬಜೆಟ್ ಮಂಡನೆ ಮಾಡಬೇಕೋ ಬೇಡವೋ ಚರ್ಚೆ ನಡೆಯುತ್ತಿದೆ. ಲೋಕಸಭಾ ಚುನಾವಣೆ ನಂತರ ಹೊಸ ಬಜೆಟ್ ಮಂಡಿಸಿ ಎನ್ನುತ್ತಿರುವುದರಿಂದ ಬಜೆಟ್ ಮಂಡಿಸುತ್ತೇನೋ ಇಲ್ಲವೋ ಗೊತ್ತಿಲ್ಲ ಎಂದರು.

ಕಳೆದ ಸರ್ಕಾರದ ಬಜೆಟ್‌ ಅನ್ನೇ ಅಂಗೀಕರಿಸಿ ಲೇಖಾನುದಾನ ಪಡೆಯುವುದಾದರೆ ಈಗಿನ 100 ಶಾಸಕರಿಗೆ ತೊಂದರೆಯಾಗುತ್ತದೆ. ಅವರೇನಾದರೂ ಹಕ್ಕುಚ್ಯುತಿ ತಂದರೆ ಏನು‌ಮಾಡೋದು? ಅದಕ್ಕಾಗಿಯೇ ಹೊಸ ಬಜೆಟ್ ಮಂಡನೆಗೆ ಮುಂದಾಗಿರೋದು ಎಂದರು. ಇದೇ ಸಂದರ್ಭ ಬಜೆಟ್‌ ಮಂಡನೆ ವಿಚಾರದಲ್ಲಿ ನಾನು ಯಾರ ಮುಲಾಜಿನಲ್ಲೂ ಇಲ್ಲ ಎಂದು ಸಿಎಂ ಹೇಳಿದರು.

ರೈತರ ಸಾಲ‌ ಮನ್ನಾ ‌ವಿಚಾರ ಮತ್ತು ಸಹಕಾರ ಇಲಾಖೆಗೆ ಸಂಬಂಧಿಸಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯದ ಜಿಲ್ಲಾ ಸಹಕಾರಿ ಬ್ಯಾಂಕುಗಳ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಪೆಕ್ಸ್ ಬ್ಯಾಂಕ್ ಮತ್ತು ಸಹಕಾರ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ವಿಧಾನಸೌಧದಲ್ಲಿ ಸಭೆ ನಡೆಯಿತು.

ರೈತರ ಸಾಲ ಹಂತಹಂತವಾಗಿ ಮನ್ನಾ ಬಗ್ಗೆ ಚರ್ಚೆ

ಸಾಲ ಮನ್ನಾ ವಿಚಾರದಲ್ಲಿ ಬಡ್ಡಿ ಕಡಿಮೆ ಮಾಡದಂತೆ ಬ್ಯಾಂಕ್‌ ನವರ ಜತೆ ಮಾತಾಡ್ತಿದ್ದಾರೆ. ಈ ಸರ್ಕಾರ ಎಷ್ಟು ದಿನ ಇರುತ್ತೋ ಅಂತೆಲ್ಲ ಮಾತಾಡ್ತಿದ್ದಾರೆ. ಲೋಕ ಸಭೆ ಚುನಾವಣೆ ತನಕ ಮಾತ್ರ ಸರ್ಕಾರ ಇರುತ್ತೆ ಅಂತೆಲ್ಲ ಮಾತಾಡ್ತಿದ್ದೀರಿ ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದರು.

ನಾನು ಬೇರೆಯವರ ರೀತಿ ಗದರಿಸಿ ಕೆಲಸ ಮಾಡೊಲ್ಲ. ಸಾಫ್ಟ್ ಆಗಿ ಹ್ಯಾಂಡಲ್ ಮಾಡ್ತೀನಿ. ಆದ್ರೆ ಈ ರೀತಿ ಸಾಲ ಮನ್ನಾ ವಿಚಾರದಲ್ಲಿ ಮಾತಾಡೋದು, ಮದ್ಯವರ್ತಿಗಳ ಪಾಲಾಗದಂತೆ ನೋಡೋದು ಆಗಬಾರದು. ಸಾಲ ಮನ್ನಾದಿಂದ ಬಡ ರೈತನಿಗೆ ಅನುಕೂಲ ಆಗಬೇಕು ಅಷ್ಟೇ ಎಂದು ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರೈತರ ಸಾಲವನ್ನು ಹಂತಹಂತವಾಗಿ ಮನ್ನಾ ಮಾಡುವ ಬಗ್ಗೆ ಚರ್ಚೆಯಾಯಿತು.

ಸಚಿವರಾದ ಬಂಡೆಪ್ಪ ಕಾಶಂಪೂರ್, ಶಿವಶಂಕರ ರೆಡ್ಡಿ, ಶಿವಾನಂದ್ ಪಾಟೀಲ್ ಇದ್ದರು.

ಲೋಕಸಭಾ ಚುನಾವಣೆ ನಂತರ ಹೊಸ ಬಜೆಟ್ ಮಂಡಿಸಿ ಎನ್ನುತ್ತಿರುವುದರಿಂದ ಬಜೆಟ್ ಮಂಡಿಸುತ್ತೇನೋ ಇಲ್ಲವೋ ಗೊತ್ತಿಲ್ಲ

 

 

 

Get real time updates directly on you device, subscribe now.