ಜಾತ್ಯತೀತತೆ ಬಗ್ಗೆ ಮಾತನಾಡುವವರು ದೊಡ್ಡ ಡಕಾಯಿತರು. ಮುಸ್ಲಿಮರು ಮುಸ್ಲಿಮರಿಗೆ ಮತ ಹಾಕಿ ಗೆಲ್ಲಿಸಬೇಕು: ಒವೈಸಿ

ನೀವು ಜ್ಯಾತ್ಯಾತೀತೆಯನ್ನು ಬದುಕಿಸಬೇಕೆಂದಿದ್ದರೆ ನಿಮಗಾಗಿ ಹೋರಾಡಿ.

ಮುಸ್ಲಿಮ್ ಸಮುದಾಯದವರು ಮುಸ್ಲಿಮ್ ಅಭ್ಯರ್ಥಿಗಳಿಗೆ ಮತ ಹಾಕಬೇಕೆಂದು ಆಲ್ ಇಂಡಿಯನ್ ಮಜ್ಲಿಸೆ ಇತ್ತೆಹದುಲ್ ಮುಸ್ಲಿಂ (ಎಐಎಂಐಎಂ) ಪಕ್ಷದ ಅಧ್ಯಕ್ಷ, ಹೈದರಬಾದಿನ ಸಂಸದ ಅಸಾದುದ್ದಿನ್ ಓವೈಸಿ ಹೇಳಿಕೆ ನೀಡಿದ್ದಾರೆ

ಹೈದರಾಬಾದ್: ಜಾತ್ಯಾತೀತತೆಯ ಕುರಿತು ಮಾತನಾಡುತ್ತಿರುವ ಜನರು ದೊಡ್ಡ ಡಕಾಯಿತರು ಮತ್ತು ಅವಕಾಶವಾದಿಗಳಾಗಿದ್ದಾರೆ. ಅವರು ಮುಸ್ಲಿಮರನ್ನು 70 ವರ್ಷಗಳಿಂದ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡು ನಮಗೆ ಬೆದರಿಕೆ ಹಾಕಿ ನಮ್ಮನ್ನು ಸುಮ್ಮನಿರುವಂತೆ ಮಾಡಿದ್ದಾರೆ ಎಂದು ಆಲ್ ಎಐಎಂಐಎಂ ಪಕ್ಷದ ಅಧ್ಯಕ್ಷ, ಹೈದರಬಾದಿನ ಸಂಸದ ಅಸಾದುದ್ದಿನ್ ಓವೈಸಿ ಹೇಳಿದ್ದಾರೆ.

ಮುಸ್ಲಿಮ್ ಸಮುದಾಯದವರು ಮುಸ್ಲಿಮ್ ಅಭ್ಯರ್ಥಿಗಳಿಗೆ ಮತ ಹಾಕಬೇಕೆಂದು ಆಲ್ ಇಂಡಿಯನ್ ಮಜ್ಲಿಸೆ ಇತ್ತೆಹದುಲ್ ಮುಸ್ಲಿಂ (ಎಐಎಂಐಎಂ) ಪಕ್ಷದ ಅಧ್ಯಕ್ಷ, ಹೈದರಬಾದಿನ ಸಂಸದ ಅಸಾದುದ್ದಿನ್ ಓವೈಸಿ ಹೇಳಿಕೆ ನೀಡಿದ್ದಾರೆ

ಹಪೂರ್‌ನಲ್ಲಿ ನಡೆದ ಕಾಸಿಂ ಹತ್ಯೆ ನಮ್ಮನ್ನು ಚಿಂತೆಗೀಡುಮಾಡಿದೆ. ಆದರೆ ನಾನು ನಿಮಗೆ ಈ ವಿಚಾರಕ್ಕೆ ಕಣ್ಣೀರು ಸುರಿಸಿ ಎಂದು ಹೇಳುತ್ತಿಲ್ಲ. ಆದರೆ ನಿಮ್ಮ ಆತ್ಮಸಾಕ್ಷಿ ಅನುಗುಣವಾಗಿ ನಡೆಯುವಂತೆ ಎಚ್ಚರಿಸುತ್ತಿದ್ದೇನೆ. ಜಾತ್ಯಾತೀತತೆಯ ಕುರಿತು ಮಾತನಾಡುತ್ತಿರುವ ಜನರು ದೊಡ್ಡ ಡಕಾಯಿತರು ಮತ್ತು ಅವಕಾಶವಾದಿಗಳಾಗಿದ್ದಾರೆ. ಮುಸ್ಲಿಮ್ ಸಮುದಾಯದವರು ಮುಸ್ಲಿಮ್ ಅಭ್ಯರ್ಥಿಗಳಿಗೆ ಮತ ಹಾಕಿ ಎಂದು ಕರೆ ನೀಡಿದರು.

ಈಗ ಮುಸ್ಲಿಮರು ಅವರ ಹಕ್ಕಿಗಾಗಿ ಹೋರಾಡಬೇಕಿದೆ. ನೀವು ಜ್ಯಾತ್ಯಾತೀತೆಯನ್ನು ಬದುಕಿಸಬೇಕೆಂದಿದ್ದರೆ ನಿಮಗಾಗಿ ಹೋರಾಡಿ. ಅದನ್ನು ತಿಳಿಯಲು ರಾಜಕೀಯ ಶಕ್ತಿಯಾಗಿ ಮುಸ್ಲಿಮ್ ನಾಯಕರು ಗೆಲ್ಲುವಂತೆ ಮಾಡಿ ಎಂದಿದ್ದಾರೆ.

ಭಾರತೀಯ ಜನತಾ ಪಾರ್ಟಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಹಿಂದೂ ಮತ ಬ್ಯಾಂಕ್ ಗಾಗಿ ಹಾತೊರೆಯುತ್ತಿವೆ. ಆದರೆ ಮುಸ್ಲಿಂರನ್ನು ಮತಬ್ಯಾಂಕ್ ಎಂದು ಹೇಳುತ್ತ ಎರಡೂ ಪಕ್ಷಗಳು ವಂಚಿಸುತ್ತಿವೆ ಎಂದು ದೂರಿದರು.

ಉತ್ತರಪ್ರದೇಶದ ಹಪೂರ್ ದಲ್ಲಿ ಹಸು ಕಳ್ಳಸಾಗಾಣಿಗೆ ಶಂಕೆಯ ಹಿನ್ನೆಲೆಯಲ್ಲಿ ಗುಂಪೊಂದು ಕಾಸೀಂ(38) ಹತ್ಯೆಗೈದರೆ, ಶಾಮಿಯುದ್ದೀನ್(65) ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು.

ಈಗ ಮುಸ್ಲಿಮರು ಅವರ ಹಕ್ಕಿಗಾಗಿ ಹೋರಾಡಬೇಕಿದೆ. ನೀವು ಜ್ಯಾತ್ಯಾತೀತೆಯನ್ನು ಬದುಕಿಸಬೇಕೆಂದಿದ್ದರೆ ನಿಮಗಾಗಿ ಹೋರಾಡಿ. ಅದನ್ನು ತಿಳಿಯಲು ರಾಜಕೀಯ ಶಕ್ತಿಯಾಗಿ ಮುಸ್ಲಿಮ್ ನಾಯಕರು ಗೆಲ್ಲುವಂತೆ ಮಾಡಿ.
-ಅಸಾದುದ್ದಿನ್ ಓವೈಸಿ

Get real time updates directly on you device, subscribe now.