ಮಂಗಳೂರು: ಪಿಎಸ್ಸೈ ಪುತ್ರ ಆತ್ಮಹತ್ಯೆ

ದ.ಕ. ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ಪಿಎಸ್ಸೈ ಪದ್ಮಯ್ಯ ರಾಣೆಯವರ ಮಗ ನೇಣಿಗೆ ಶರಣು

ಶಿವಮೊಗ್ಗದ ಪದ್ಮಯ್ಯ ರಾಣೆಯವರು ಬಿಕರ್ನಕಟ್ಟೆಯಲ್ಲಿ ನೆಲೆಸಿದ್ದು, ಅವರ ಮಗನ ಆತ್ಮಹತ್ಯೆಯ ಕಾರಣ ತನಿಖೆಯಿಂದ ತಿಳಿಯಬೇಕಿದೆ.

ಮಂಗಳೂರು: ಪೊಲೀಸ್ ಅಧಿಕಾರಿಯೋರ್ವರ ಮಗ ನೇಣು ಬಿಗಿದು ಆತ್ಮಹತ್ಯೆಗೈದ ಖೇದಕರ ಸಂಗತಿ ವರದಿಯಾಗಿದೆ.

ದ.ಕ. ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ಪಿಎಸ್ಸೈ ಪದ್ಮಯ್ಯ ರಾಣೆ ಎಂಬವರ ಮಗ ಅಂಕಿತ್(28) ಎಂದು ಮೃತ ಯುವಕನನ್ನು ಗುರುತಿಸಲಾಗಿದೆ.

ಅಂಕಿತ್ ಅವರು ಬಲ್ಮಠದಲ್ಲಿನ ಸಿಎ ಕಚೇರಿಯೊಂದರ ಉದ್ಯೋಗಿಯಾಗಿದ್ದು, ಅಲ್ಲೇ ಸ್ಟೋರ್ ರೂಂನಲ್ಲಿ ಆತ್ಮಹತ್ಯೆಗೈದಿದ್ದಾರೆ.

ಶಿವಮೊಗ್ಗದ ಪದ್ಮಯ್ಯ ರಾಣೆಯವರು ಬಿಕರ್ನಕಟ್ಟೆಯಲ್ಲಿ ನೆಲೆಸಿದ್ದು, ಅವರ ಮಗನ ಆತ್ಮಹತ್ಯೆಯ ಹಿಂದಿನ ಕಾರಣ ಇನ್ನಷ್ಟೇ ತಿಳಿಯಬೇಕಿದೆ.

Get real time updates directly on you device, subscribe now.