ಪಿಂಚಣಿ ಕೊಡದೆ ಸತಾಯಿಸಿದ ಪೋಸ್ಟ್ ಮಾಸ್ಟರ್. ವಿಷದ ಬಾಟಲಿ ಜೊತೆ ತಹಶೀಲ್ದಾರ್ ಕಚೇರಿಗೆ ಬಂದ ಅಜ್ಜಿ!

ಪಿಂಚಣಿಗಾಗಿ ಪರದಾಡುತ್ತಿ ಸಿಂದಗಿ ತಾಲೂಕಿನ ಸಾಸಾಬಾಳ ಗ್ರಾಮದ ನೀಲವ್ವ ರೋಡಗಿ

ಪಿಂಚಣಿ ಹಣ ನೀಡದೆ ಸತಾಯಿಸುತ್ತಿದ್ದ ಪೋಸ್ಟ್ ಮಾಸ್ಟರ್ ಓರ್ವರಿಂದ ಬೇಸತ್ತು ವೃದ್ಧೆಯೋರ್ವರು ತಹಶೀಲ್ದಾರ್ ಕಚೇರಿಗೆ ವಿಷದ ಬಾಟಲಿ ಸಮೇತ ಬಂದು ಪ್ರತಿಭಟಿಸಿದ್ದಾರೆ.

ವಿಜಯಪುರ: ಪಿಂಚಣಿ ಹಣ ನೀಡದೆ ಸತಾಯಿಸುತ್ತಿದ್ದ ಪೋಸ್ಟ್ ಮಾಸ್ಟರ್ ಓರ್ವರಿಂದ ಬೇಸತ್ತು ವೃದ್ಧೆಯೋರ್ವರು ತಹಶೀಲ್ದಾರ್ ಕಚೇರಿಗೆ ವಿಷದ ಬಾಟಲಿ ಸಮೇತ ಬಂದು ಪ್ರತಿಭಟಿಸಿದ್ದಾರೆ. ಸಮಸ್ಯೆ ಪರಿಹಾರಗೊಳ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವೃದ್ಧೆ ತಹಶೀಲ್ದಾರ್ ಎದುರು ಅಳಲು ತೋಡಿಕೊಂಡಿದ್ದಾರೆ.

ಸಿಂದಗಿ ತಾಲೂಕಿನ ಸಾಸಾಬಾಳ ಗ್ರಾಮದ ನೀಲವ್ವ ರೋಡಗಿ (73) ಪಿಂಚಣಿಗಾಗಿ ಪರದಾಡುತ್ತಿದ್ದಾರೆ. ನೀಲವ್ವ ಅವರಿಗೆ ತಿಂಗಳಿಗೆ 500 ರೂ. ಪಿಂಚಣಿ ಬರುತ್ತಿತ್ತು. ಕಳೆದ ಒಂದು ವರ್ಷದಿಂದ ಪಿಂಚಣಿ ಹಣ ನೀಡದೆ ಪೋಸ್ಟ್ ಮಾಸ್ಟರ್ ಸತಾಯಿಸುತ್ತಿದ್ದಾನೆ. ಪಿಂಚಣಿ ಹಣ ಅವರ ಬದುಕಿಗೆ ಬಹುಮುಖ್ಯವಾಗಿದೆ.

ಸಾಕಷ್ಟು ಬಾರಿ ಪೋಸ್ಟ್ ಮಾಸ್ಟರ್ ಬಳಿ ಮನವಿ ಮಾಡಿದರೂ ಪೋಸ್ಟ್ ಮಾಸ್ಟರ್ ಅಸಡ್ಡೆ ತೋರಿದ್ದಾನೆ. ಇದರಿಂದ ಮನನೊಂದು ನೀಲವ್ವ ಬಾಟಲಿಯೊಂದಿಗೆ ಸಿಂಧಗಿ ತಹಶೀಲ್ದಾರ್ ಕಛೇರಿಗೆ ಆಗಮಿಸಿದ್ದಾರೆ. ಪಿಂಚಣಿ ಹಣ ನೀಡಿ ಇಲ್ಲದಿದ್ದರೆ ನಾನು ಇಲ್ಲಿಯೇ ವಿಷ ಸೇವಿಸಿ ಸಾಯುತ್ತೇನೆಂದು ಪಟ್ಟು ಹಿಡಿದಿದ್ದಾರೆ.

ನೀಲವ್ವ ಅವರ ಅಹವಾಲನ್ನು ಆಲಿಸಿದ ತಹಶೀಲ್ದಾರ್ ಒಂದು ವಾರದೊಳಗೆ ಪಿಂಚಣಿ ಹಣ ನೀಡುವುದಾಗಿ ಹೇಳಿ ಸಮಾಧಾನ ಮಾಡಿ ಅವರನ್ನು ಕಳುಹಿಸಿದ್ದಾರೆ.

Get real time updates directly on you device, subscribe now.