ಧಾರಾಕಾರ ಮಳೆಗೆ ಕೊಚ್ಚಿ ಹೋದ ಬಂಟ್ವಾಳದ ಮುಲರಪಟ್ಣ ಸೇತುವೆ: ಆತಂಕದಲ್ಲಿ ಜನ

ಅಕ್ರಮ ಮರಳುಗಾರಿಕೆಯಿಂದ ಸೇತುವೆಯ ತಳ ಶಿಥಿಲಗೊಂಡಿತ್ತೆ?

ಮಂಗಳೂರು ತಾಲೂಕಿಗೆ ಬಂಟ್ವಾಳವನ್ನು ಸಂಪರ್ಕಿಸುತ್ತಿದ್ದ ಈ ಪ್ರಮುಖ ಸೇತುವೆ ಮಳೆಯಲ್ಲಿ ಕೊಚ್ಚಿ ಹೋಗಿದ್ದು ಅದೃಷ್ಟವಶಾತ್ ಯಾವುದೆ ಪ್ರಾಣಹಾನಿ ಸಂಭವಿಸಿಲ್ಲ.

ಮಂಗಳೂರು: ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಬಂಟ್ವಾಳದ ಮುಳೂರುಪಟ್ಣ ಎಂಬಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಕೊಚ್ಚಿ ಹೋಗಿದೆ.

ಮಂಗಳೂರು ತಾಲೂಕಿಗೆ ಬಂಟ್ವಾಳವನ್ನು ಸಂಪರ್ಕಿಸುತ್ತಿದ್ದ ಈ ಪ್ರಮುಖ ಸೇತುವೆ ಮಳೆಯಲ್ಲಿ ಕೊಚ್ಚಿ ಹೋಗಿದ್ದು ಅದೃಷ್ಟವಶಾತ್ ಯಾವುದೆ ಪ್ರಾಣಹಾನಿ ಸಂಭವಿಸಿಲ್ಲ. ಸೇತುವೆಯ ನಡುಭಾಗ ಮುರಿದುಬಿದ್ದು ನದಿಯಲ್ಲಿ ಕೊಚ್ಚಿ ಹೋಗಿದೆ.

ಈ ಸೇತುವೆ ಬಂತ್ವಾಳದ ಸೂರ್ನಾಡು ಮತ್ತು ಮಂಗಳೂರಿನ ಅನೇಕ ಸ್ಥಳಗಳ ನಡುವೆ ಸಂಪರ್ಕ ಕಲ್ಪಿಸಿತ್ತು. ಇದೀಗ ಈ ಭಾಗದ ಜನ ಸೇತುವೆ ಕೊಚ್ಚಿ ಹೋದ ಪರಿಣಾಮ ಸುತ್ತುಬಳಸಿ ಮಂಗಳೂರನ್ನು ತಲುಪಬೇಕಾಗಿದೆ.

ವಿಪರೀತ ಮರಳುಗಾರಿಕೆ ಈ ಸೇತುವೆ ಕೊಚ್ಚಿ ಹೋಗಲು ಕಾರಣ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಸೇತುವೆಯ ಇಕ್ಕೆಲಗಳಲ್ಲಿ ಮತ್ತು ಸೇತುವೆಯ ಅಡಿಯಲ್ಲಿ ನಡೆಯುತ್ತಿದ್ದ ಮರಳುಗಾರಿಕೆಯ ವಿರುದ್ಧ ಅಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗಿರಲಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

Get real time updates directly on you device, subscribe now.