ವಿದ್ಯಾರ್ಥಿ ವೇತನಕ್ಕೆ “ಏಕಗವಾಕ್ಷಿ’ ವ್ಯವಸ್ಥೆ: ದೇಶದಲ್ಲೇ ಮೊದಲು

ವಿದ್ಯಾರ್ಥಿ ವೇತನಕ್ಕಾಗಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಲ್ಲಿ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪಡೆಯಬಹುದಾಗಿದೆ. ಸರ್ಕಾರಿ ಶಾಲೆಯ ಅನುದಾನಿತ, ಅನುದಾನ ರಹಿತ ರಾಜ್ಯಪಠ್ಯಕ್ರಮ, ಸಿಬಿಎಸ್‌ಇ,ಐಸಿಎಸ್‌ಇ ಸೇರಿ ಎಲ್ಲ ಪಠ್ಯಕ್ರಮದ ವಿದ್ಯಾರ್ಥಿಗಳಿಗೂ ಈ ವ್ಯವಸ್ಥೆ ಅನ್ವಯ.

ಬೆಂಗಳೂರು: ವಿದ್ಯಾರ್ಥಿಗಳು ಒಂದೇ ಅರ್ಜಿ ಸಲ್ಲಿಕೆಯಿಂದ ವಿದ್ಯಾರ್ಥಿ ವೇತನ ಪಡೆಯುವಂತೆ ಮಾಡುವ ನಿಟ್ಟಿನಲ್ಲಿ, “ಏಕಗವಾಕ್ಷಿ’ ವ್ಯವಸ್ಥೆಯನ್ನು ದೇಶದಲ್ಲೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಜಾರಿಗೆ ತಂದಿದೆ. ವಿದ್ಯಾರ್ಥಿ ವೇತನಕ್ಕಾಗಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಯಾವ ಇಲಾಖೆಯಿಂದ ವಿದ್ಯಾರ್ಥಿ ವೇತನ ಬೇಕು ಎಂಬ ವಿವರವನ್ನು ವಿದ್ಯಾರ್ಥಿ ಅರ್ಜಿಯಲ್ಲಿ ನೀಡಬಹುದಾಗಿದೆ. ಹಲವು ಇಲಾಖೆಗಳಿಂದ ಒಬ್ಬ ವಿದ್ಯಾರ್ಥಿಗೆ ವಿದ್ಯಾರ್ಥಿ ವೇತನ ಸಿಗುತ್ತಿದ್ದರೂ ಇದೇ ಅರ್ಜಿ ಸಾಕಾಗುತ್ತದೆ.

ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಕಲ್ಯಾಣ , ಬುಡಕಟ್ಟು ಕಲ್ಯಾಣ ಇಲಾಖೆ ಸೇರಿದಂತೆ ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಲ್ಲಿ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪಡೆಯಬಹುದಾಗಿದೆ.

ಆನ್‌ಲೈನ್‌ ಅರ್ಜಿ ಸಲ್ಲಿಸುವ ವಿದ್ಯಾರ್ಥಿ ತನ್ನ ಎಸ್‌ಎಟಿಎಸ್‌ ನಂಬರ್‌ ನಮೂದಿಸಿದರೆ ಅರ್ಜಿ ತಾನಾಗಿಯೇ ಭರ್ತಿಯಾಗುತ್ತದೆ. ತಿಂಗಳೊಳಗೆ ವಿದ್ಯಾರ್ಥಿಗಳ ಅಥವಾ ಪಾಲಕರ ಖಾತೆಗೆ ಹಣ ಜಮಾ ಆಗುತ್ತದೆ.

ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್‌ ಸಿಸ್ಟಂನಲ್ಲಿ ವಿದ್ಯಾರ್ಥಿಗಳ ಜಾತಿ, ಪಾಲಕ ಅಥವಾ ಪೋಷಕರ ಮಾಹಿತಿ, ಆಧಾರ್‌ ಸಂಖ್ಯೆ, ಬ್ಯಾಂಕ್‌ ಖಾತೆ ಮಾಹಿತಿ, ಮೊಬೈಲ್‌ ಸಂಖ್ಯೆ(ಪಾಲಕ, ಪೋಷಕ), ಆದಾಯ ಪ್ರಮಾಣ ಪತ್ರ ಸೇರಿ ಎಲ್ಲ ಮಾಹಿತಿ ತುಂಬಲು ಅವಕಾಶವನ್ನು ಶಿಕ್ಷಣ ಇಲಾಖೆ ಈ ವ್ಯವಸ್ಥೆ ಜಾರಿ ಸಂಬಂಧಿಸಿ ಕಲ್ಪಿಸಿದೆ

ಸರ್ಕಾರಿ ಶಾಲೆಯ ಅನುದಾನಿತ, ಅನುದಾನ ರಹಿತ ರಾಜ್ಯಪಠ್ಯಕ್ರಮ, ಸಿಬಿಎಸ್‌ಇ,ಐಸಿಎಸ್‌ಇ ಸೇರಿ ಎಲ್ಲ ಪಠ್ಯಕ್ರಮದ ವಿದ್ಯಾರ್ಥಿಗಳಿಗೂ ಈ ವ್ಯವಸ್ಥೆ ಅನ್ವಯವಾಗುವುದು.

 

 

 

Get real time updates directly on you device, subscribe now.