ಯಲ್ಲಾಪುರ: ಕಾರು-ಲಾರಿ ಅಪಘಾತ; ಮೂವರ ದಾರುಣ ಸಾವು

ಶಿರಸಿ ತಾಲೂಕು ಅರಗಿನಮನೆಯ ವಿನಾಯಕ ಹೆಗಡೆ, ಅರ್ಚನಾ, ಶ್ರಾವಣಿ ಮೃತಪಟ್ಟವರು.

ಊರಿಗೆ ಬಂದಿದ್ದ ವಿನಾಯಕ ಹೆಗಡೆ ಕುಟುಂಬ ಬೆಳಗಾವಿಗೆ ಮರಳುವಾಗ ಅಪಘಾತದಲ್ಲಿ ಸಾವಪ್ಪಿದ್ದಾರೆ. ಕಾರಿನಲ್ಲಿದ್ದ ಮಗು ಗಾಯಗೊಂಡಿದ್ದು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಯಲ್ಲಾಪುರ: ಇಂದು ಬೆಳಿಗ್ಗೆ ತಾಲೂಕಿನ ಚಿಕ್ಕಮಾವಳ್ಳಿ ಗ್ರಾಮದ ಬಳಿ ಸಂಭವಿಸಿದ ಕಾರು ಮತ್ತು ಲಾರಿ ನಡುವಿನ ಅಪಘಾತದಲ್ಲಿ ಮೂವರು ಮೃತಪಟ್ಟ ಘಟನೆ ವರದಿಯಾಗಿದೆ. ಕಾರಿನಲ್ಲಿದ್ದ ಮಗುವೊಂದು ಗಾಯಗೊಂಡಿದ್ದು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಿರಸಿ ತಾಲೂಕು ಅರಗಿನಮನೆಯ ವಿನಾಯಕ ಹೆಗಡೆ, ಅರ್ಚನಾ, ಶ್ರಾವಣಿ ಮೃತಪಟ್ಟವರು.

ವಿನಾಯಕ ಹೆಗಡೆಯವರು ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದು, ಇತ್ತೀಚೆಗೆ ಬೆಳಗಾವಿಗೆ ವರ್ಗಾವಣೆಗೊಂಡಿದ್ದರು. ಊರಿಗೆ ಬಂದಿದ್ದ ಅವರು  ಬೆಳಗಾವಿಗೆ ಮರಳುವಾಗ ಅಪಘಾತದಲ್ಲಿ ಸಾವಪ್ಪಿದ್ದಾರೆ.

 

 

Get real time updates directly on you device, subscribe now.