ಲ್‌ಇಟಿ ಉಗ್ರ ನವೀದ್, ಇಬ್ಬರು ಸ್ಥಳೀಯ ಉಗ್ರರಿಂದ ಶುಜಾತ್ ಬುಖಾರಿ ಹತ್ಯೆ: ಪೊಲೀಸ್

ಷ್ಕರ್ -ಇ- ತೊಯಿಬಾ ಉಗ್ರ ನವೀದ್ ಜಟ್ಟ್ ಹಾಗೂ ಇತರ ಇಬ್ಬರು ಸ್ಥಳೀಯ ಉಗ್ರರು ಸೇರಿ ‘ರೈಸಿಂಗ್ ಕಾಶ್ಮೀರ್‌’ ದಿನಪತ್ರಿಕೆಯ ಸಂಪಾದಕ, ಹಿರಿಯ ಪತ್ರಕರ್ತ ಶುಜಾತ್ ಬುಖಾರಿ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಬುಧವಾರ ಕಾಶ್ಮೀರ ಪೊಲೀಸ್ ಮೂಲಗಳು ತಿಳಿಸಿವೆ.

ಶ್ರೀನಗರ: ಲಷ್ಕರ್ -ಇ- ತೊಯಿಬಾ ಉಗ್ರ ನವೀದ್ ಜಟ್ಟ್ ಹಾಗೂ ಇತರ ಇಬ್ಬರು ಸ್ಥಳೀಯ ಉಗ್ರರು ಸೇರಿ ‘ರೈಸಿಂಗ್ ಕಾಶ್ಮೀರ್‌’ ದಿನಪತ್ರಿಕೆಯ ಸಂಪಾದಕ, ಹಿರಿಯ ಪತ್ರಕರ್ತ ಶುಜಾತ್ ಬುಖಾರಿ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಬುಧವಾರ ಕಾಶ್ಮೀರ ಪೊಲೀಸ್ ಮೂಲಗಳು ತಿಳಿಸಿವೆ.

ಪಾಕಿಸ್ತಾನ ಮೂಲದ ನವೀದ್ ಜಟ್ಟ್ ಕಳೆದ ಫೆಬ್ರವರಿ 6ರಂದು ಶ್ರೀನಗರದ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ ಉಗ್ರನಾಗಿದ್ದು, ಇತರು ಇಬ್ಬರು ಸ್ಥಳೀಯ ಉಗ್ರರು ಬುಖಾರಿ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜೂನ್ 14ರಂದು ಇಲ್ಲಿನ ಪ್ರೆಸ್‌ ಕಾಲೊನಿಯಲ್ಲಿ ಆಂಗ್ಲ ದೈನಿಕದ ಸಂಪಾದಕ ಶುಜಾತ್‌ ಬುಖಾರಿ ಹಾಗೂ ಅವರ ಇಬ್ಬರು ಖಾಸಗಿ ಭದ್ರತಾ ಅಧಿಕಾರಿಗಳನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದರು.

ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸಿ.ಸಿ ಟಿ.ವಿಯ ದೃಶ್ಯಗಳನ್ನು ಆಧರಿಸಿ ಹಂತಕರನ್ನು ಗುರುತಿಸಿದ್ದು, ಮೂವರು ಬೈಕ್‌‌ನಲ್ಲಿ ತೆರಳುತ್ತಿರುವವರ ಚಲನವಲನಗಳನ್ನು ಗಮನಿಸಿ ಶಂಕಿತರ ಛಾಯಾಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.

Get real time updates directly on you device, subscribe now.