“ಸರ್ಜಿಕಲ್ ಸ್ಟ್ರೈಕ್” ವಿಡಿಯೊ ಬಿಡುಗಡೆ ಬಿಜೆಪಿಯ ಕೀಳು ಮಟ್ಟದ ಚುನಾವಣಾ ಪ್ರಚಾರ

ಕಾಂಗ್ರೆಸ್ ಐಟಿ ಸೆಲ್ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ಅಭಿಮತ

ಮೋದಿ ಸರಕಾರ 2019ರ ಲೋಕಸಭಾ ‌ಚುನಾವಣೆಯ ಹಿನ್ನಲೆಯಲ್ಲಿ ಹಿಂದಿನ ವರ್ಷ ಬಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ನ ವಿಡಿಯೋ ಬಿಡುಗಡೆ ಮಾಡಿರುವುದು ಅದು ಬಿಜೆಪಿಯ ಚುನಾವಣಾ ಪ್ರಚಾರದ ಕೀಳು ಅಭಿರುಚಿಯನ್ನು ಎತ್ತಿ ತೋರಿಸುತ್ತದೆ

ಕಾಂಗ್ರೆಸ್ ಐಟಿ ಸೆಲ್ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ

ಬೆಂಗಳೂರು: “ಸರ್ಜಿಕಲ್ ಸ್ಟ್ರೈಕ್” ಅದು ಭಾರತೀಯ ಸೇನೆಯ ಒಂದು ಹೆಮ್ಮೆಯ ಸಾಧನೆಯಾಗಿದೆ. ಪ್ರಜಾತಂತ್ರ ವ್ಯವಸ್ಥೆ ಜಾರಿಯಾದಂದಿನಿಂದಲೂ ದೇಶದ ಗಡಿ ರಕ್ಷಣೆಗಾಗಿ ಇಂತಹ ನೂರಾರು, ಸಾವಿರಾರು ಸರ್ಜಿಕಲ್ ಸ್ಟ್ರೈಕ್ ಗಳನ್ನು ಭಾರತೀಯ ಸೇನೆ ಮಾಡಿದೆ ಮತ್ತು ಆ ಮೂಲಕ ಸಾವಿರಾರು ವೀರ ಯೋಧರ ಬಲಿದಾನವಾಗಿದೆ. ಅದರೆ ಮೋದಿ ಸರಕಾರ 2019ರ ಲೋಕಸಭಾ ‌ಚುನಾವಣೆಯ ಹಿನ್ನಲೆಯಲ್ಲಿ ಹಿಂದಿನ ವರ್ಷ ಬಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ನ ವಿಡಿಯೋ ಬಿಡುಗಡೆ ಮಾಡಿರುವುದು ಅದು ಬಿಜೆಪಿಯ ಚುನಾವಣಾ ಪ್ರಚಾರದ ಕೀಳು ಅಭಿರುಚಿಯನ್ನು ಎತ್ತಿ ತೋರಿಸುತ್ತದೆ ಎಂದು ಕಾಂಗ್ರೆಸ್ ಐ.ಟಿ.ಸೆಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ದೇಶದಲ್ಲಿ ಸೇನೆ ಈ ಹಿಂದೆಯೂ ಇತ್ತು ಇಂದೂ ಇದೆ ಮುಂದೆಯೂ ಇರುತ್ತದೆ. ದೇಶದ ರಕ್ಷಣೆಯ ವಿಚಾರ ಬಂದಾಗ ಮಳೆ- ಚಳಿ- ಬಿಸಿಲು, ಹಗಲು- ಇರುಳೆನ್ನದೆ ಜೀವದ ಹಂಗು ತೊರೆದು ಸೆಣೆಸಿ ಪ್ರಾಣ ಬಿಡುವವರು ಸೈನಿಕರಾದರೆ ಆ ಸೆಣಸಾಟದಲ್ಲಿ ಪ್ರಾಣ ತ್ಯಾಗ ಮಾಡಿದವರ ಹೆಸರನ್ನು ಹೇಳುವ ಕನಿಷ್ಠ ಸೌಜನ್ಯವನ್ನು ಕೂಡಾ ತೋರಿಸದೆ ಅದು ಮೋದಿ ಸರಕಾರದ ಒಂದು ಸಾಧನೆಯೋ ಎಂಬಂತೆ ಬಿಂಬಿಸಿಕೊಳ್ಳಲು ಹೊರಟಿರುವುದು ನಿಜಕ್ಕೂ ನಾಚಿಕೆಗೇಡಿನ ವಿಚಾರವಾಗಿದೆ ಮತ್ತು ಅದು ಭಾರತೀಯ ಸೇನೆಗೆ ಮಾಡಿದ ಘೋರ ಅಪಮಾನವಾಗಿದೆ ಎಂದು ಚಂದ್ರಶೇಖರ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ಇಷ್ಟರ ಹೊರತಾಗಿಯೂ ನನ್ನ ಮೂಲ ಪ್ರಶ್ನೆ ಅದೇನೆಂದರೆ ಈ ಸರ್ಜಿಕಲ್ ಸ್ಟ್ರೈಕ್ ಮೋದಿ ಸರಕಾರ ಸಾಧನೆ ಎನ್ನುವುದೇ ಆದರೆ ಆ ಘಟನೆ ನಡೆಯುವ ಕೇವಲ ಕೆಲವೇ ದಿನಗಳ ಮೊದಲು ಉರಿ ಸೇನಾ ನೆಲೆಯ ಮೇಲೆ ಪಾಕಿಸ್ತಾನದ ಭಯೋತ್ಪಾದಕರು ದಾಳಿ ನಡೆಸಿ ಬರೋಬ್ಬರಿ 18 ಬಾರತೀಯ ಸೈನಿಕರ ಸಾವಿಗೆ ಕಾರಣವಾದ ಘಟನೆ ಯಾರ ವೈಫಲ್ಯವಾಗುತ್ತದೆ? ಅದನ್ನು ಇವರುಗಳು ಮೋದಿ ಸರಕಾರದ ವೈಫಲ್ಯ ಎಂದು ಒಪ್ಪಿಕೊಳ್ಳುವರೆ? ಈ ಕುರಿತು ಬಿಜೆಪಿಯ ಅಂಧಭಕ್ತರು ಉತ್ತರಿಸುವಂತಾಗಲಿ ಎಂದು ಚಂದ್ರಶೇಖರ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

Get real time updates directly on you device, subscribe now.