ಅತ್ಯಂತ ಹೇಯ: ಕಾಂಗ್ರೆಸ್‌ ವಕ್ತಾರೆಯ ಹತ್ತು ವರ್ಷ ಪ್ರಾಯದ ಪುತ್ರಿಗೆ ರೇಪ್‌ ಬೆದರಿಕೆ. ತನಿಖೆಗೆ ಆದೇಶ

ತನ್ನ ಪ್ರೊಫೈಲ್‌ನಲ್ಲಿ ಶ್ರೀರಾಮನ ಚಿತ್ರ ಹಾಕಿಕೊಂಡ ಕಾಂಗ್ರೆಸ್ ಪಕ್ಷದ ವಿರೋಧಿಯೋರ್ವ ಅತ್ಯಂತ ನೀಚತನ ಮೆರೆದಿದ್ದು ಕಾಂಗ್ರೆಸ್‌ ಪಕ್ಷದ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಅವರ ಹತ್ತು ವರ್ಷ ಪ್ರಾಯದ ಪುತ್ರಿಗೆ ಟ್ವಿಟರ್‌ನಲ್ಲಿ ರೇಪ್ ಬೆದರಿಕೆ ಒಡ್ಡಿದ್ದಾನೆ.

ಹೊಸದಿಲ್ಲಿ: ತನ್ನ ಪ್ರೊಫೈಲ್‌ನಲ್ಲಿ ಶ್ರೀರಾಮನ ಚಿತ್ರ ಹಾಕಿಕೊಂಡ ಕಾಂಗ್ರೆಸ್ ಪಕ್ಷದ ವಿರೋಧಿಯೋರ್ವ ಅತ್ಯಂತ ನೀಚತನ ಮೆರೆದಿದ್ದು ಕಾಂಗ್ರೆಸ್‌ ಪಕ್ಷದ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಅವರ ಹತ್ತು ವರ್ಷ ಪ್ರಾಯದ ಪುತ್ರಿಗೆ ಟ್ವಿಟರ್‌ನಲ್ಲಿ ರೇಪ್ ಬೆದರಿಕೆ ಒಡ್ಡಿದ್ದಾನೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗೃಹ ಸಚಿವಾಲಯ ಈ ಕುರಿತು ಪ್ರಕರಣ ದಾಖಲಿಸಿಕೊಂಡು ಬೆದರಿಕೆಗಳ ಹಿಂದಿರುವ ವ್ಯಕ್ತಿಯನ್ನು ಗುರುತಿಸುವಂತೆ ಆದೇಶಿಸಿದೆ.

ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಚತುರ್ವೇದಿ ಅವರಿಗೆ ಬೆದರಿಕೆ ಒಡ್ಡಲು ಬಳಸಲಾಗಿರುವ ಟ್ವಿಟರ್‌ ಖಾತೆಯ ವಿವರಗಳನ್ನು ಒದಗಿಸುವಂತೆಯೂ ಮುಂಬಯಿ ಪೊಲೀಸರನ್ನು ಕೇಂದ್ರ ಗೃಹ ಸಚಿವಾಲಯ ಕೇಳಿಕೊಂಡಿದೆ.

ಪ್ರಿಯಾಂಕಾ ಚತುರ್ವೇದಿ ಅವರು ಈ ಬಗ್ಗೆ ನಿನ್ನೆ ಸೋಮವಾರ ಮುಂಬಯಿ ಪೊಲೀಸರಲ್ಲಿ ಈ ಕುರಿತು ದೂರು ದಾಖಲಿಸಿದ್ದರು.

ಟ್ವಿಟರ್‌ನಲ್ಲಿ ಟ್ರೋಲ್‌ ಖಾತೆಯೊಂದನ್ನು ಬಳಸಿಕೊಂಡು ತನಗೆ ಮತ್ತು ತನ್ನ ಪುತ್ರಿಗೆ ಬೆದರಿಕೆ ಒಡ್ಡಲಾಗಿದೆ ಎಂದವರು ದೂರಿದ್ದರು. “ಪೊಲೀಸರು ನನಗೆ ಸೂಕ್ತ ಕ್ರಮದ ಆಶ್ವಾಸನೆ ನೀಡಿದ್ದಾರೆ’ ಎಂದು ಪ್ರಿಯಾಂಕಾ ಅವರು ಮಾಧ್ಯಮಕ್ಕೆ ತಿಳಿಸಿದ್ದರು.

ಟ್ವಿಟರ್‌ ಟ್ರೋಲಿಗ ತನ್ನ ಪ್ರೊಫೈಲ್‌ನಲ್ಲಿ ಶ್ರೀರಾಮನ ಚಿತ್ರವನ್ನು ಹಾಕಿಕೊಂಡಿರುವ ಹೊರತಾಗಿಯೂ ಆತ ನೀಚತನದ ಅಭಿಪ್ರಾಯ ಬರೆಯಲು ಹೇಸಿಲ್ಲ’ ಎಂದು ಪ್ರಿಯಾಂಕಾ ಅವರು ಹೇಳಿದ್ದರು.

Get real time updates directly on you device, subscribe now.