ಮಂಗಳೂರು: ನೂತನ ಬಿಷಪ್ ಪೀಟರ್ ಪೌಲ್ ಸಲ್ದಾನಾ

ವ್ಯಾಟಿಕನ್  ನಿರ್ಧಾರವನ್ನು ಬಿಷಪ್ ನಿವಾಸದಲ್ಲಿ ಘೋಷಿಸಲಾಯಿತು. ಪೀಟರ್ ಅವರು ಮಂಗಳೂರು ಪ್ರಾಂತ್ಯದ 14ನೇ ಬಿಷಪ್ ಆಗಿದ್ದಾರೆ.

ಪೀಟರ್ ಅವರು ‘The Church: Mystery of Love and Communion’ ಎಂಬ ಗ್ರಂಥ ರಚಿಸಿದ್ದಾರೆ. ಚರ್ಚ್ ಕುರಿತಾದ ಅವರ ಬದ್ಧತೆ ಮತ್ತು ಅವರ ಅಗಾಧ ಜ್ನಾನವನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ.

ಕುಂದಾಪುರ: ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ನೂತನ ಬಿಷಪ್ ಆಗಿ ಫಾ.ಪೀಟರ್ ಪೌಲ್ ಸಲ್ಡಾನಾ ಅವರನ್ನು ವ್ಯಾಟಿಕನ್ ನೇಮಕ ಮಾಡಿದೆ. ವ್ಯಾಟಿಕನ್  ನಿರ್ಧಾರವನ್ನು ಬಿಷಪ್ ನಿವಾಸದಲ್ಲಿ ಘೋಷಿಸಲಾಯಿತು. ಫಾದರ್ ಪೀಟರ್ ಅವರು ಮಂಗಳೂರು ಪ್ರಾಂತ್ಯದ 14ನೇ ಬಿಷಪ್ ಆಗಿದ್ದಾರೆ.

ರೋಮ್a ಪೊಂತಿಫಿಕಾಲ್ ಉರ್ಬನ್ ವಿಶ್ವವಿದ್ಯಾಲಯದಲ್ಲಿ ದೇವತಾಶಾಸ್ತ್ರದಲ್ಲಿ ಪ್ರಾಧ್ಯಾಪಕರಾಗಿರುವ ಅತೀ ವಂ.ಡಾ.ಪೀಟರ್ ಸಲ್ಡಾನಾ ಅವರನ್ನು ಮಂಗಳೂರು ಧರ್ಮಪ್ರಾಂತ್ಯದ ನೂತನ ಬಿಷಪ್ ಆಗಿ ಪೋಪ್ ಫ್ರಾನ್ಸಿಸ್ ಅವರು ನೇಮಕ ಮಾಡಿದ್ದಾರೆ.

ಕಿರೆಂ ಚರ್ಚ್ ವ್ಯಾಪ್ತಿಯ ಅತೀ ವಂ. ಪೀಟರ್ ಅವರು ಎಪ್ರಿಲ್27, 1964ರಂದು ಜನಿಸಿದ್ದು, ಮೇ 6, 1991ರಂದು ಗುರು ದೀಕ್ಷೆ ಪಡೆದು ಉಡುಪಿ ಜಿಲ್ಲೆಯ ಮೂಡುಬೆಳ್ಳೆ ಹಾಗೂ ಮಂಗಳೂರಿನ ಮಿಲಾಗ್ರಿಸ್, ವಿಟ್ಲ ಚರ್ಚ್ ಗಳಲ್ಲಿ  ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದರು. ಉನ್ನತ ವ್ಯಾಸಂಗಕ್ಕಾಗಿ ರೋಮ್ ಗೆ ತೆರಳಿದ್ದು, ಅಲ್ಲಿನ ಪೊಂತಿಫಿಕಲ್ ಉರ್ಬನ್ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪದವಿ ಪಡೆದು, ಅಲ್ಲಿಯೇ ಪ್ರಾಧ್ಯಾಪಕರಾಗಿ  ಬಹು ದೀರ್ಘ ಅವಧಿಗೆ ಸೇವೆ ಸಲ್ಲಿಸಿದರು.

ಪೀಟರ್ ಅವರು ‘The Church: Mystery of Love and Communion’ ಎಂಬ ಗ್ರಂಥ ರಚಿಸಿದ್ದಾರೆ. ಚರ್ಚ್ ಕುರಿತಾದ ಅವರ ಬದ್ಧತೆ ಮತ್ತು ಅವರ ಅಗಾಧ ಜ್ನಾನವನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ.

ಸಲ್ದಾನಾ ಅವರು ಜನಸಮುದಾಯದಲ್ಲಿ ಸುಲಭವಾಗಿ ಬೆರೆಯುವುದರೊಂದಿಗೆ ಜನಪ್ರೀತಿಗೆ ಪಾತ್ರರಾಗಿದ್ದಾರೆ.

 

 

Get real time updates directly on you device, subscribe now.