ವಿದ್ಯಾರ್ಥಿನಿಯರ ಒಳ ಉಡುಪಿನ ಬಣ್ಣ ಹೀಗೆ ಇರಬೇಕು. ಪ್ರತಿಷ್ಠಿತ ಸ್ಕೂಲ್‌ನಿಂದ ‘ಅಂಡರ್‌ವೇರ್’ ರೂಲ್!
ಪ್ರತಿಷ್ಠಿತ ಶಾಲೆಯೊಂದು ವಿದ್ಯಾರ್ಥಿನಿಯರ ಒಳ ಉಡುಪು ಇಂಥದ್ದೆ ಬಣ್ಣದಾಗಿರಬೇಕು ಎಂದು ನಿಯಮ ರೂಪಿಸಿದ್ದು ಈ ನಿಯಮ ಉಲ್ಲಂಘಿಸಿದರೆ ಗಂಭೀರ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ನಿರ್ದೇಶನ ನೀಡಿರುವ ವಿಚಿತ್ರ ಸಂಗತಿ ಬೆಳಕಿಗೆ ಬಂದಿದೆ.
ಪುಣೆ: ಇಲ್ಲಿನ ಪ್ರತಿಷ್ಠಿತ ಶಾಲೆಯೊಂದು ವಿದ್ಯಾರ್ಥಿನಿಯರ ಒಳ ಉಡುಪು ಇಂಥದ್ದೆ ಬಣ್ಣದಾಗಿರಬೇಕು ಎಂದು ನಿಯಮ ರೂಪಿಸಿದ್ದು ಈ ನಿಯಮ ಉಲ್ಲಂಘಿಸಿದರೆ ಗಂಭೀರ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ನಿರ್ದೇಶನ ನೀಡಿರುವ ವಿಚಿತ್ರ ಸಂಗತಿ ಬೆಳಕಿಗೆ ಬಂದಿದೆ.
ಪುಣೆಯ ವಿಶ್ವನಾಥ ಗುರುಕುಲ ಎಂಬ ಪ್ರಸಿದ್ದ ಶಾಲೆ ಈ ರೀತಿ ವಿದ್ಯಾರ್ಥಿನಿಯರಿಗೆ ‘ಅಂಡರ್‌ವೇರ್’ ರೂಲ್’ ಜಾರಿಗೊಳಿಸಿದೆ. ಶಾಲಾ ಆಡಳಿತ ಲಿಖಿತವಾಗಿ ನೀಡಿರುವ ನಿರ್ದೇಶನದಂತೆ ವಿದ್ಯಾರ್ಥಿನಿಯರು ಬಿಳಿ ಅಥವಾ ಚರ್ಮದ ಬಣ್ಣದ ಒಳ ಉಡುಪುಗಳನ್ನು ಮಾತ್ರ ಧರಿಸಬೇಕು. ಈ ನಿಯಮ ಪಾಲಿಸದಿದ್ದರೆ ವಿದ್ಯಾರ್ಥಿನಿಯರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಲೆ ಎಚ್ಚರಿಸಿದೆ.
ಹೊಸ ಶೈಕ್ಷಣಿಕ ವರ್ಷದಲ್ಲಿ ನೀಡಲಾದ ಡೈರಿಯಲ್ಲಿ ಈ ‘ಅಂಡರ್‌ವೇರ್ ರೂಲ್’ ಅನ್ನು ಶಾಲೆಯ ನಿಯಮಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ವಿದ್ಯಾರ್ಥಿನಿಯರು ಮತ್ತು ಪೋಷಕರು ಶಾಲೆಯ ಈ ನಿಯಮದಿಂದ ರೋಷಗೊಂಡಿದ್ದು ಶಾಲಾ ಆಡಳಿತ ಮಂಡಲಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲಾ ಆಡಳಿತ ಮಂಡಳಿಗೆ ಒಳ ಉಡುಪಿನ ಬಣ್ಣದ ಈ ನಿಯಮದ ವಿರುದ್ಧ ಪೋಷಕರು ದೂರು ನೀಡಿದ್ದಾರೆ. ಆದರೆ ಪೋಷಕರ ದೂರಿಗೆ ಶಾಲೆಯ ಆಡಳಿತ ಮಂಡಳಿ ಸ್ಪಂದಿಸಿಲ್ಲ. ಬದಲಾಗಿ ವಿದ್ಯಾರ್ಥಿನಿಯರ ಒಳ ಉಡುಪು ಬಿಂಇ ಅಥವಾ ಚರ್ಮದ ಬಣ್ಣದ್ದು ಇರಬೇಕು ಎಂಬ ನಿಯಮ ವಿದ್ಯಾರ್ಥಿನಿಯರ ಒಳಿತಿಗಾಗಿಯೆ ಇದೆ ಎಂದು ತನ್ನ ವಿಚಿತ್ರ ನಿಯಮವನ್ನು ಸಮರ್ಥಿಸಿಕೊಂಡಿದೆ.
ಒಳ ಉಡುಪಿನ ಈ ನಿಯಮದ ವಿರುದ್ಧ ಪೋಷಕರು ಶಾಲೆಯ ಹೊರಗೆ ಪ್ರತಿಭಟನೆ ನಡೆಸಿದ್ದು ಶಿಕ್ಷಣ ಇಲಾಖೆ ಕೂಡಲೆ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿದ್ದಾರೆ.