ಭಾಸ್ಕರ ಶೆಟ್ಟಿ ಕೊಲೆ: SPP ನೇಮಕ ಆಕ್ಷೇಪ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ವಕೀಲ ಶಾಂತಾರಾಂ ಶೆಟ್ಟಿ ಅವರ ನೇಮಕ ಪ್ರಶ್ನಿಸಿ ಆರೋಪಿ ರಾಜೇಶ್ವರಿ ಶೆಟ್ಟಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಬೆಂಗಳೂರು: ಬಹುಕೋಟಿ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರ ವಾದ ಮಂಡಿಸಲು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ವಕೀಲ ಶಾಂತಾರಾಂ ಶೆಟ್ಟಿ ಅವರ ನೇಮಕ ಪ್ರಶ್ನಿಸಿ ಆರೋಪಿ ರಾಜೇಶ್ವರಿ ಶೆಟ್ಟಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರ ಏಕಸದಸ್ಯ ನ್ಯಾಯಪೀಠ ಬುಧವಾರ ಪ್ರಕಟಿಸಿದೆ.

ಭಾಸ್ಕರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಪ್ರಾಸಿಕ್ಯೂಷನ್ ಪರ ವಾದ ಮಂಡಿಸಲು ವಕೀಲ ಶಾಂತರಾಮ ಶೆಟ್ಟಿಯವರನ್ನು ಎಸ್.ಎಸ್.ಪಿಯಾಗಿ ನೇಮಿಸಿ ಗೃಹ ಇಲಾಖೆ ಆದೇಶಿಸಿದ್ದನ್ನು ಆರೋಪಿ ರಾಜೇಶ್ವರಿ ಪ್ರಶ್ನಿಸಿದ್ದರು.

ಶಾಂತರಾಮ ಶೆಟ್ಟಿಯವರನ್ನು ಭಾಸ್ಕರ ಶೆಟ್ಟಿಯವರ ತಾಯಿ ಗುಲಾಬಿ ಶೆಡ್ತಿಯವರ ಮನವಿಯಂತೆ ರಾಜ್ಯ ಗೃಹ ಇಲಾಖೆ ಎಸ್ಎಸ್ಪಿಯಾಗಿ ನೇಮಿಸಿದ್ದು, ಅವರು ನಮ್ಮ ಬಗ್ಗೆ ಪೂರ್ವಗ್ರಹ ಪೀಡಿತರಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಪತ್ರಿಕಾಗೋಷ್ಠಿಯಲ್ಲಿ ಅವರು ನಮ್ಮ ವಿರುದ್ಧ ಆರೋಪಿಸಿದ್ದರು. ಅವರಿಂದ ಈ ಪ್ರಕರಣದಲ್ಲಿ ನಿಷ್ಪಕ್ಷಪಾತ ವಿಚಾರಣೆ ಸಾಧ್ಯವಿಲ್ಲದಿರುವುದರಿಂದ ಗೃಹ ಇಲಾಖೆಯ ಆದೇಶ ರದ್ದುಪಡಿಸಬೇಕೆಂದು ರಾಜೇಶ್ವರಿ ಕೋರ್ಟ್ ಮೊರೆ ಹೋಗಿದ್ದರು.

Get real time updates directly on you device, subscribe now.