ಬುದ್ದಿಜೀವಿಗಳಿಗೆ ಸತ್ತವರು-ಬದುಕಿರೋರ ನಡುವೆ ವ್ಯತ್ಯಾಸ ಗೊತ್ತಿಲ್ಲ: ಕೇಂದ್ರ ಸಚಿವ ಅನಂತ ಕುಮಾರ ಹೆಗ್ಡೆ ಗೇಲಿ

ಬುದ್ದಿ ಜೀವಿ ಅಂತ ಕರೆದುಕೊಳ್ಳುವವರಿಗೆ ಅವರ ಅಂತರಾತ್ಮದ ಬಗ್ಗೆಯೇ ಅರ್ಥವಾಗಲ್ಲ, ಅವರು ಜೀವಿತರು ಹಾಗೂ ಮೃತದೇಹ ಎರಡು ದೇಹದ ಭಾಗ ಅಂದುಕೊಂಡಿದ್ದಾರೆ

ಧಾರವಾಡ: ವಿವಾದಾತ್ಮಕ ಹೇಳಿಕೆಗಳಿಂದ ಸದಾ ಸುದ್ದಿಯಾಗುವ ಕೇಂದ್ರ ಕೌಶಾಲ್ಯಾಭಿವೃದ್ದಿ ಸಚಿವ ಅನಂತ್ ಕುಮಾರ್ ಮತ್ತೊಮ್ಮೆ ಬುದ್ದಿಜೀವಿಗಳನ್ನು ಗೇಲಿ ಮಾಡಿದ್ದಾರೆ. ಬುದ್ದಿಜೀವಿಗಳಿಗೆ ಸತ್ತವರು-ಬದುಕಿರೋರ ನಡುವೆ ವ್ಯತ್ಯಾಸ ಗೊತ್ತಿಲ್ಲ ಎಂದು ಹೆಗಡೆ ಹೇಳಿದ್ದಾರೆ.

ಬುದ್ದಿ ಜೀವಿ ಅಂತ ಕರೆದುಕೊಳ್ಳುವವರಿಗೆ ಅವರ ಅಂತರಾತ್ಮದ ಬಗ್ಗೆಯೇ ಅರ್ಥವಾಗಲ್ಲ, ಅವರು ಜೀವಿತರು ಹಾಗೂ ಮೃತದೇಹ ಎರಡು ದೇಹದ ಭಾಗ ಅಂದುಕೊಂಡಿದ್ದಾರೆ ಎಂದು ಹೇಳಿದರು.

ಕೌಶಾಲ್ಯಾಭಿವೃದ್ದಿ ತರಬೇತಿ ಕುರಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬುದ್ದಿಜೀವಿಗಳು ತಮ್ಮ ದೇಹದ ಅಗತ್ಯಗಳನ್ನು ಪೂರೈಸುವುದನ್ನು ಮಾತ್ರ ಯೋಚಿಸುತ್ತಾರೆ ಎಂದರು.

ಕಳೆದ ತಿಂಗಳು ಕಾರವಾರ ಜಿಲ್ಲೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಹೆಗಡೆ ಪ್ರಧಾನಿ ನರೇಂದ್ರಮೋದಿ ಅವರನ್ನು ಹುಲಿ ಎಂದು ಕರೆದು,ವಿರೋಧ ಪಕ್ಷದ ನಾಯಕರನ್ನು ಕಾಗೆ, ಮಂಗ ಹಾಗೂ ನರಿಗಳಿಗೆ ಹೋಲಿಕೆ ಮಾಡಿದ್ದರು.

Get real time updates directly on you device, subscribe now.