ಕಾರು-ಟಿಪ್ಪರ್ ಅಪಘಾತ: ಓರ್ವ ಸಾವು, ಐವರು ಗಂಭೀರ 

ಮುಡಿಪು ಸಮೀಪ ಕಾಯೆರ್ ಗೋಳಿ ಎಂಬಲ್ಲಿ ಲಾರಿ ಮತ್ತು ಮಾರುತಿ ಒಮ್ನಿ ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದು, ಕಾರು ಚಾಲಕ ಸೇರಿ ಐವರು ಗಾಯಗೊಂಡ ಘಟನೆ ಗುರುವಾರ ಸಂಜೆ ನಡೆದಿದೆ.

ಮಂಗಳೂರು: ಮುಡಿಪು ಸಮೀಪ ಕಾಯೆರ್ ಗೋಳಿ ಎಂಬಲ್ಲಿ ಲಾರಿ ಮತ್ತು ಮಾರುತಿ ಒಮ್ನಿ ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದು, ಕಾರು ಚಾಲಕ ಸೇರಿ ಐವರು ಗಾಯಗೊಂಡ ಘಟನೆ ಗುರುವಾರ ಸಂಜೆ ನಡೆದಿದೆ.

ಮೃತರನ್ನು ರೆಂಜಾಡಿ ಅಡ್ಕರೆ ಪಡ್ಪು ನಿವಾಸಿ ಕಮಲುದ್ದೀನ್(24) ಎಂದು ಗುರುತಿಸಲಾಗಿದೆ. ರೆಂಜಾಡಿಯ ಮುಝಂಬಿಲ್
ಎಂಬವರು ಗಂಭೀರ ಗಾಯಗೊಂಡಿದ್ದಾರೆ.

ಖೈರುನ್ನೀಸಾ(32), ಕಾರು ಚಾಲಕ ಸಿಕಂದರ್(42), ಮಕ್ಕಳಾದ ಮೊಹಮದ್ ಮುನೈಝ್(4) ಮತ್ತು ಮಜಿನ್(2) ಗಾಯಗೊಂಡಿದ್ದು, ಗಾಯಾಳುಗಳನ್ನು ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ದೇರಳಕಟ್ಟೆ ರೆಂಜಾಡಿಯ ಕುಟುಂಬ ಸದಸ್ಯರು ಉಪ್ಪಿನಂಗಡಿಯಲ್ಲಿ ಮಗುವಿನ ನಾಮಕರಣ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಮೆಲ್ಕಾರ್-ಮುಡಿಪು ಕಡೆಯಿಂದ ಮನೆಯತ್ತ ತೆರಳುತ್ತಿದ್ದಾಗ ಅತಿ ವೇಗದಿಂದ ಧಾವಿಸಿ ಬರುತ್ತಿದ್ದ ಟಿಪ್ಪರ್ ಲಾರಿ ಕಾರಿಗೆ ಗುದ್ದಿತ್ತು. ಅಪಘಾತದ ತೀವೃತೆಗೆ ಕಾರು ನಜ್ಜುಗುಜ್ಜಾಗಿದೆ.

ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Get real time updates directly on you device, subscribe now.